ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಮೂವರು ಬಿಜೆಪಿ ಕಾರ್ಯಕರ್ತರು ಹಾಗೂ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಕಾಪಿಕಾಡ್ ಪರಿಸರದ ಐವರು ಬಿಜೆಪಿ ಸಕ್ರೀಯ ಯುವ ಕಾರ್ಯಕರ್ತರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾವು ಹೇಮಾನಾಥ್ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಮದ ಆನಂದ ಮೈರೋಳು ,ಶಿವಮ್ಮ ಮೈರೋಳು ,ಕರಿಯ , ಗಿರಿಜಾ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾಂಗ್ರೆಸ್ ಪಕ್ಷದ ದ್ವಜ ನೀಡಿ ಶಾಸಕರು ಪಕ್ಷಕ್ಕೆ ಬರಮಾಡಿಕೊಂಡರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ಸೇರ್ಪಡೆಗೊಂಡವರು ಭರವಸೆ ನೀಡಿದರು.
ಒಳಮೊಗ್ರು ಗ್ರಾಮದ ಉಮೇಶ್ ರೈ ಕಾಪಿಕಾಡು, ಕೀರ್ತನ್, ಸೋಮಾವತಿ ಕಾಪಿಕಾಡು, ಮಮತಾ ಕಾಪಿಕಾಡು ಮತ್ತು ಪ್ರವೀಣ್ ಕುಲಾಲ್ ಅಜ್ಜಿಕಲ್ಲು ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡವರು.
ಈ ಸಂದರ್ಭ ನೆಟ್ಟಣಿಗೆ ಮುಡ್ನೂರಿನ ವಲಯ ಅಧ್ಯಕ್ಷ ಮೂಸಾನ್, ಬ್ಲಾಕ್ ಹಿಂದುಳಿದ ವರ್ಗ ಪ್ರಮುಖರಾದ ಮೋನಪ್ಪ ಪೂಜಾರಿ ಕರೆಮಾರು, ಶಶಿಧರ ಪೂಜಾರಿ ಸುರುಳಿಮೂಲೆ, ಒಳಮೊಗ್ರುವಿನ ಬೂತ್ ಅಧ್ಯಕ್ಷ ಮನೋಜ್ ಗೌಡ ಹಾಗೂ ಗ್ಯಾರಂಟಿ ಸಮಿತಿ ಸದಸ್ಯ ಸಂತೋಷ್ ಭಂಡಾರಿ ಚಿಲ್ಮೆತ್ತಾರು ಉಪಸ್ಥಿತರಿದ್ದರು.



























