ರಾಜಕೀಯ

ಜಾನುವಾರು ಸಾಗಾಟಗಾರನ ಕಾಲಿಗೆ ನಡೆಸಿದ ಶೂಟೌಟ್ ಹಿಂದೆ ಹಲವು ಅನುಮಾನ! ಸಾಧ್ಯವಿದ್ದರೆ ಶಾಸಕ ಅಶೋಕ್ ರೈ ಅವರನ್ನು ಕಾಂಗ್ರೆಸಿಂದ ಹೊರಹಾಕಿ!! ಸುಧೀರ್ ರೆಡ್ಡಿ ವಾರ್ನಿಂಗ್ ಹಿನ್ನೆಲೆಯಲ್ಲಿ ಅರುಣ್ ಪುತ್ತಿಲ ಅಲ್ಲಿದ್ದದು ಅಪರಾಧವೇ!!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶೂಟೌಟ್ ನಡೆಸಲು ಹಲವಾರು ಕಾನೂನುಗಳಿವೆ. ಅವನ್ನೆಲ್ಲಾ ಮೀರಿ ಈಶ್ವರಮಂಗಲದಲ್ಲಿ ಜಾನುವಾರು ಸಾಗಾಟಗಾರನ ಕಾಲಿಗೆ ಶೂಟೌಟ್ ಮಾಡಿದ ಪ್ರಕರಣ ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಆರೋಪಿಸಿದ್ದಾರೆ.

core technologies

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿವಾರ್ಯ ಕಾರಣಗಳಿಂದ ಶೂಟೌಟ್ ನಡೆಸಲು ಅವಕಾಶಗಳಿವೆ. ಸಾರ್ವಜನಿಕರಿಗೆ ಭೀತಿ ಹುಟ್ಟಿಸುವ ವ್ಯಕ್ತಿ, ಸರಕಾರ ಆತನ ತಲೆಗೆ ಬಹುಮಾನ ಘೋಷಿಸಿದ ಸಂದರ್ಭ ಇಂತಹ ಘಟನೆಗಳಲ್ಲಿ ಶೂಟೌಟ್ ನಡೆಸಬಹುದು. ಆದರೆ ಜಾನುವಾರು ಸಾಗಾಟ ಮಾಡುವುದು ಅಷ್ಟು ದೊಡ್ಡ ಅಪರಾಧವೇ ಎಂದು ಪ್ರಶ್ನಿಸಿದರು.

akshaya college

ನಮ್ಮ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಾಲಿಗೆ ಗುಂಡೇಟು ಹೊಡೆದದ್ದರಿಂದ ಚೆಲ್ಲಿರುವ ರಕ್ತ, ವಾಹನದ ಮುಂಭಾಗದಲ್ಲಿದೆ. ಇದು ಹೇಗೆ ಸಾಧ್ಯ? ವಾಹನ ಬಿಟ್ಟು ಓಡುವಾಗ ಆತ ಹಿಂಭಾಗಕ್ಕೆ ಓಡಿರುತ್ತಾನೆ. ಆದ್ದರಿಂದ ರಕ್ತ ವಾಹನದ ಬದಿಯಲ್ಲಿ ಅಥವಾ ಹಿಂಬದಿಯಲ್ಲಿರಬೇಕಿತ್ತು. ಮಾತ್ರವಲ್ಲ, ಘಟನೆ ನಡೆದಿರುವುದು 5ರಿಂದ 6 ಗಂಟೆ ನಡುವಿನಲ್ಲಿ. ಆದರೆ 8 ಗಂಟೆವರೆಗೂ ವಾಹನ ಸೇರಿದಂತೆ ಎಲ್ಲವೂ ಅಲ್ಲೇ ಇರುತ್ತದೆ. ಈ ಎಲ್ಲಾ ವಿಚಾರಗಳನ್ನು ಗಮನಿಸುವಾಗ, ಎಸ್ಪಿ ಅವರಿಗೆ ನೀಡಿರುವ ಮಾಹಿತಿಯಲ್ಲೂ ಲೋಪವಿದ್ದಂತಿದೆ. ಆದ್ದರಿಂದ ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಬೇಕು. ಆದ್ದರಿಂದ ನ್ಯಾಯಾಂಗ ಬಂಧನಕ್ಕೆ ಅಥವಾ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಈಶ್ವರಮಂಗಲದಲ್ಲಿ ನಡೆದಿರುವ ಶೂಟೌಟ್ ಪ್ರಕರಣ ಮಾನವ ಹಕ್ಕಿನ ಉಲ್ಲಂಘನೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿವೆ. ಹಾಗಾಗಿ ಶೂಟೌಟ್ ಪ್ರಕರಣವನ್ನು ಎಸ್.ಡಿ.ಪಿ.ಐ. ಗಂಭೀರವಾಗಿ ಪರಿಗಣಿಸಿದೆ ಎಂದು ಸ್ಪಷ್ಟಪಡಿಸಿದರು.

ಅರುಣ್ ಕುಮಾರ್ ಪುತ್ತಿಲ ಮೇಲೆ ಸುಮೋಟೊ ಪ್ರಕರಣ ದಾಖಲಿಸಬೇಕು

ಮಂಗಳೂರು ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಸಾರ್ವಜನಿಕರಿಗೆ ವಾರ್ನಿಂಗ್ ನೀಡಿದ್ದಾರೆ. ಅಪರಾಧ ಹಿನ್ನೆಲೆಯ ವ್ಯಕ್ತಿಗಳ ಜೊತೆ ಓಡಾಟ ಇಟ್ಟುಕೊಳ್ಳಬಾರದು ಎಂದು. ಈ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಈಶ್ವರಮಂಗಲದಲ್ಲಿ ಸಾರ್ವಜನಿಕರು, ಪೊಲೀಸರ ಜೊತೆ ಕಾಣಿಸಿಕೊಂಡಿರುವುದೂ ಕೂಡ ತಪ್ಪು. ಇವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿದೆ.

ಅರುಣ್ ಕುಮಾರ್ ಪುತ್ತಿಲ ಕತ್ತಿ ಹಿಡಿದುಕೊಂಡು ಜಾನುವಾರುಗಳ ರಕ್ಷಣೆ ರೀತಿಯಲ್ಲಿ ವರ್ತಿಸಿರುವುದರ ವಿರುದ್ಧ ಹಲವರು ಈಗಾಗಲೇ ಧ್ವನಿ ಎತ್ತಿದ್ದಾರೆ. ಅಷ್ಟಕ್ಕೂ ಪೊಲೀಸರು ಸೀಜ್ ಮಾಡಿರುವ ಜಾನುವಾರುಗಳ ಪ್ರದೇಶಕ್ಕೆ ಹಿಂದೂ ಮುಖಂಡರು ಭೇಟಿ ನೀಡುವ ಅವಶ್ಯಕತೆಯಾದರೂ ಏನು? ಪೊಲೀಸರಿಗೆ ಸ್ಥಳೀಯರ ಸಹಕಾರ ಪಡೆಯಬಹುದಿತ್ತು. 25 ಕಿ.ಮೀ. ದೂರದಿಂದ ಪುತ್ತಿಲರೇ ಬರಬೇಕಿತ್ತೇ? ಗಡಿಪಾರು ಆಗಬೇಕಾದ ವ್ಯಕ್ತಿ, ಕೋಮು ದ್ವೇಷ ಭಾಷಣಗಾರ ಅಲ್ಲಿಗೆ ಬರುವ ಅವಶ್ಯಕತೆ ಏನಿತ್ತು? ಇದರ ಮೇಲೆ, ಪೊಲೀಸ್ ಇಲಾಖೆ ಡ್ಯಾಮೇಜ್ ಕಂಟ್ರೋಲ್ ಮಾಡುವ ರೀತಿಯ ಹೇಳಿಕೆ ನೀಡುತ್ತಾರೆ. ಕತ್ತಿಯನ್ನು ಮುಸಲ್ಮಾನರ ಮನೆಯಿಂದ ತಂದದ್ದು ಎಂದು ಧರ್ಮದ ಲೇಪನ ನೀಡುತ್ತಾರೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಘಟನೆ ಬಳಿಕ ಪೊಲೀಸರಿಗೆ ಅಭಿನಂದನೆಯ ಸ್ಟೇಟಸ್ ಅನ್ನು ಅರುಣ್ ಕುಮಾರ್ ಪುತ್ತಿಲ ಹಾಕಿಕೊಳ್ಳುತ್ತಾರೆ. ಇದು ಪೊಲೀಸರ ಕರ್ತವ್ಯ ತಾನೇ? ಇದಕ್ಕೆ ಅಭಿನಂದನೆ ಯಾಕೆ? ಹಾಗಾಗಿ ಅವರ ಮೇಲೂ ಸುಮೋಟೊ ಪ್ರಕರಣ ದಾಖಲಿಸಬೇಕು ಎಂದರು.

ಅಶೋಕ್ ರೈ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ:

ಈಗ ಕಾಲಿಗೆ ಗುಂಡೇಟು ಬಿದ್ದಿದೆ. ಮುಂದೆ ಬೇರೆಡೆಗೂ ಬೀಳಬಹುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ ನೀಡಿದ್ದಾರೆ. ಅಂದರೆ ಮುಂದಿನ ಬಾರಿ ವ್ಯಕ್ತಿಯನ್ನು ಕೊಲ್ಲುತ್ತೇವೆ ಎನ್ನುವುದು ಇದರ ಅರ್ಥ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಶಾಸಕ, ಆರ್.ಎಸ್.ಎಸ್., ಭಜರಂಗದಳಕ್ಕಿಂತ ತೀಕ್ಷ್ಣವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರೆ ಅವರೂ ದ್ವೇಷಕ್ಕೆ, ಹಲ್ಲೆಗೆ, ಕೊಲ್ಲಲು ಪ್ರಚೋದನೆ ನೀಡುತ್ತಾರೆಂದರ್ಥ. ಇದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡೇ ಈ ಮಾತು ಹೇಳಿದ್ದಾರೆ. ಆರ್.ಎಸ್.ಎಸ್. ಬ್ಯಾನ್ ಮಾಡುತ್ತೇವೆ ಎನ್ನುವ ಕಾಂಗ್ರೆಸಿಗರಿಗೆ, ಅದಂತೂ ಸಾಧ್ಯವೇ ಇಲ್ಲ. ಸಾಧ್ಯವಿದ್ದರೆ ಮೊದಲು ಅಶೋಕ್ ರೈ ಅವರನ್ನು ಕಾಂಗ್ರೆಸಿಂದ ಹೊರಹಾಕಿ ಎಂದು ಸವಾಲು ಹಾಕಿದರು.

ದನದ ಸಾಗಾಟ, ವ್ಯವಹಾರದಲ್ಲಿ ಮುಸಲ್ಮಾನರು ಮಾತ್ರವಲ್ಲ, ಎಲ್ಲ ಸಮುದಾಯದವರು ಇದ್ದಾರೆ. ಕುಂದಾಪುರದಲ್ಲಿ ದನದ ತಲೆ ಕಡಿದು ಹಾಕಿದ ಸಂದರ್ಭ, ಸಂಟ್ಯಾರಿನಲ್ಲಿ ಕುಟ್ಟಣ್ಣ, ಸುಜೀತ್ ತಲವಾರು ಹಿಡಿದುಕೊಂಡು ವಾಟ್ಸ್ ಆ್ಯಪ್ ಸ್ಟೇಟಸ್ ಹಾಕುವಾಗ ಯಾಕೆ ಇಂತಹ ಹೇಳಿಕೆ ನೀಡಿಲ್ಲ. ಶಾಸಕರು ಸಂಘ ಪರಿವಾರದ ಮನಸ್ಥಿತಿಯಲ್ಲಿ ಮಾತನಾಡುತ್ತಿದ್ದಾರೆ. ಆದ್ದರಿಂದ ಇಂತಹ ಹೇಳಿಕೆಯನ್ನು ಖಂಡಿಸುತ್ತೇವೆ. ಅವರ ಮೇಲೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪ್ರ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಸದಸ್ಯ ಕಬೀರ್ ಕೆಮ್ಮಾರ, ಪುತ್ತೂರು ಅಧ್ಯಕ್ಷ ಅಶ್ರಫ್ ಬಾವು, ಕಾರ್ಯದರ್ಶಿ ರಹೀಂ ಪುತ್ತೂರು


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ದಳಪತಿ ವಿಜಯ್ ಪಕ್ಷದಿಂದ ಮಹತ್ವದ ಘೋಷಣೆ!! ಸಿಎಂ ಅಭ್ಯರ್ಥಿ ಘೋಷಿಸಿ, ಏಕಾಂಗಿ ಸ್ಪರ್ಧೆಗೆ ಧುಮುಕಿದ ಟಿವಿಕೆ ಪಕ್ಷ!

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಎಲ್ಲಾ ರಾಜಕೀಯ ಪಕ್ಷಗಳು ಈ ಕುರಿತು…