ಪುತ್ತೂರು: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದಿನ್ ಅರ್ಷಾದ್ ದರ್ಬೆ ಅವರ ಮನೆಗೆ ಬೇಟಿ ನೀಡಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಪುತ್ತೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್ ರಹೀಮಾನ್ ಅಜಾದ್, ವಾರ್ತಾ ಅಧಿಕಾರಿ ಖಾದರ್ ಶಾ, ಮುರಳಿಧರ ರೈ ಮಠಂತಬೆಟ್ಟು, ನಿಹಾಲ್ ಶೆಟ್ಟಿ, ಹನೀಫ್ ಮಾಡಾವು, ಉಸ್ಮಾನ್ ದರ್ಬೆ, ಲತೀಶ್ ದರ್ಬೆ, ಬಶೀರ್ ದರ್ಬೆ, ಶಕೀಲ್ ದರ್ಬೆ, ಆಸೀಫ್ ದರ್ಬೆ, ಖಲಂದರ್ ಈಸ್ಟರ್ನ್, ಆಶಿಕ್ ಕುಂಬ್ರ, ನವಾಜ್ ಮರೀಲ್, ಆದರ್ಶ, ಸೀಯಾನ್ ದರ್ಬೆ, ಇಬ್ರಾಹಿಂ ಸಂಪ್ಯ, ದಿನೇಶ್ ಗುಂಡೂರಾವ್ ರವರ ಆಪ್ತ ಕಾರ್ಯದರ್ಶಿ ಸಫ್ವಾನ್ ಮತ್ತಿತರರು ಉಪಸ್ಥಿತರಿದ್ದರು.
ಮೋಹಿದೀನ್ ಅರ್ಷಾದ್ ದರ್ಬೆ ಸ್ವಾಗತಿಸಿ, ವಂದಿಸಿದರು.