pashupathi
ರಾಜಕೀಯ

ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ನೂರುದ್ದೀನ್! ಮದರಸದ ವಿರುದ್ಧ ಆಧಾರ ರಹಿತ ಹೇಳಿಕೆ ನೀಡಿದ ಆರೋಪ

tv clinic
ಕರ್ನಾಟಕ ವಿಧಾನಸಭೆಯಲ್ಲಿ ಮದರಸದ ವಿರುದ್ಧ, ಆಧಾರ ರಹಿತ ಹೇಳಿಕೆ ನೀಡಿದ, ಬಸಣಗೌಡ ಪಾಟೀಲ್ ಯತ್ನಾಳ್ ರವರ ಮೇಲೆ ಸೂಕ್ತ ಕ್ರಮಕ್ಕೆ ನೂರುದ್ದೀನ್ ಸಾಲ್ಮರ ಆಗ್ರಹ.

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನಾಟಕ ವಿಧಾನಸಭೆಯಲ್ಲಿ ಮದರಸದ ವಿರುದ್ಧ, ಆಧಾರ ರಹಿತ ಹೇಳಿಕೆ ನೀಡಿದ, ಬಸಣಗೌಡ ಪಾಟೀಲ್ ಯತ್ನಾಳ್ ರವರ ಮೇಲೆ ಸೂಕ್ತ ಕ್ರಮಕ್ಕೆ ನೂರುದ್ದೀನ್ ಸಾಲ್ಮರ ಆಗ್ರಹ.

akshaya college

ಪುತ್ತೂರು :ಕರ್ನಾಟಕ ವಿಧಾನಸಭೆಯಲ್ಲಿ, ನಿನ್ನೆ ವಿಚಾರವೊಂದರ ಬಗ್ಗೆ ಮಾತನಾಡುತ್ತಾ,ವಿಜಾಪುರ ಶಾಸಕರಾದ ಶ್ರೀ ಬಸಣ ಗೌಡ ಪಾಟೀಲ್ ಯತ್ನಾಳ್ ರವರು ‘ಮದರಸಗಳಲ್ಲಿ ದೇಶದ ವಿರುದ್ಧ ಕಲಿಸುತ್ತಾರೆ’ ಎಂಬ ಆಧಾರ ರಹಿತ ಹಾಗೂ ಕೋಮು ಪ್ರಚೋದಕ ಹೇಳಿಕೆ ವಿರುದ್ಧ, ಸದನವು ಕೂಡಲೇ ಕ್ರಮ ಕೈಗೊಂಡು ಆ ಶಾಸಕನ ಶಾಸಕತ್ವವನ್ನು ಉಚ್ಛಾಟನೆಗೊಳಿಸಿ, ವಜಾ ಗೊಳಿಸಬೇಕೆಂದು ಕೆಪಿಸಿಸಿ ಸಂಯೋಜಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಕರ್ನಾಟಕ ವಿಧಾನಸಭೆಯ ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ.

ಮುಸಲ್ಮಾನರಿಗೆ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿರುವ ಮದರಸಗಳು, ವಿದ್ಯಾರ್ಥಿಗಳಿಗೆ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣವನ್ನು ನೂರಾರು ವರ್ಷಗಳಿಂದ ನೀಡುತ್ತಾ ಬಂದಿದೆ. ಮದರಸಗಳು ವಿದ್ಯಾರ್ಥಿಗಳಿಗೆ ಸರಿಯಾದ ಜೀವನಕ್ರಮ,ಮಾನವೀಯ ಮೌಲ್ಯಗಳ ಗಳನ್ನು ಕಲಿಸಿ, ಸತ್ಕರ್ಮದಡೇ ಅವರನ್ನು ಸಾಗಲು ಅನುವು ಮಾಡಿಕೊಡುತ್ತದೆ ಹಾಗೂ ಅವರ ತಪ್ಪನ್ನು ತಡೆಯಲು ಸೂಕ್ತ ಮಾರ್ಗದರ್ಶನವನ್ನು ನೀಡುತ್ತದೆ. ತಪ್ಪು ಮಾಡುವ ಪ್ರತಿಯೊಬ್ಬ ವ್ಯಕ್ತಿಗೆ ಸೂಕ್ತ ದಂಡನೆಯನ್ನು ನೀಡಲು ಸರ್ವಶಕ್ತನಾದ ದೇವರು, ಕಣ್ಗಾವಲಿನಲ್ಲಿ ಇರುವ ಎಚ್ಚರಿಕೆಯನ್ನು ನೀಡುವುದರ ಮೂಲಕ,ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ, ಸಂಸ್ಕಾರಯುತ ನಾಗಿ ಬಾಳಿ, ಯಾರಿಗೂ ನೋವು ಮಾಡದೇ, ಯಾವುದೇ ತಪ್ಪು ಮಾಡದೆ, ಇರುವಂತೆ ಪ್ರೇರೇಪಿಸುತ್ತದೆ. ಪರಲೋಕದಲ್ಲಿ ವಿಶ್ವಾಸವಿರುವ ಇಸ್ಲಾಂ ಧರ್ಮವು,ಈ ಲೋಕದಲ್ಲಿ ಸತ್ಯವಿಶ್ವಾಸಿಯಾಗಿ, ಸತ್ಪ್ರಜೆ ಯಾಗಿ ಜೀವಿಸುವ ಪ್ರತಿಯೊಬ್ಬನಿಗೂ, ಪರಲೋಕದಲ್ಲಿ ಸ್ವರ್ಗ ಸಿಕ್ಕುವ ಸಂದೇಶ ಹಾಗೂ ಅಧರ್ಮದಲ್ಲಿ ಸಾಗಿದ ವ್ಯಕ್ತಿ ನರಕಕ್ಕೆ ಹೋಗುವ ಸಂದೇಶವನ್ನು ಸಾರುತ್ತದೆ. ದೇಶಪ್ರೇಮ ಸತ್ಯವಿಶ್ವಾಸದ ಭಾಗವೆಂದು ಅತಿ ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಬೋಧಿಸಲಾಗುತ್ತಿದೆ.

ವಾಸ್ತವಂಶ ಹೀಗಿರುವಾಗ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುವ, ಪ್ರಜಾಪ್ರಭುತ್ವದ ಆಶಯಗಳನ್ನು ಪೂರೈಸುವ, ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವ ಪವಿತ್ರವಾದ ಸದನದಲ್ಲಿ, ಮುಸ್ಲಿಂ ಧಾರ್ಮಿಕ ಕೇಂದ್ರವಾದ ಮದರಸಗಳ ಬಗ್ಗೆ, ಆಧಾರ ರಹಿತವಾಗಿ ಮಾತನಾಡಿ, ಸದನಕ್ಕೆ ಕಳಂಕ ತಂದಿರುತ್ತಾರೆ ಹಾಗೂ ಕೋಮು ಸೌಹಾರ್ದತೆಗೆ ದಕ್ಕೆ ತಂದಿರುತ್ತಾರೆ.ಮಾತ್ರವಲ್ಲ ಮುಸಲ್ಮಾನರ ದೇಶಪ್ರೇಮವನ್ನು ಸಂಶಯದಿಂದ ನೋಡುವಂತಾಗಲು ಪ್ರೇರೇಪಿಸಿರುತ್ತಾರೆ. ಇದು ಅಕ್ಷಮ ಅಪರಾಧವಾಗಿರುತ್ತದೆ. ಇವರ ಈ ನಡೆ, ಅಸಂಖ್ಯಾತ ಮುಸಲ್ಮಾನ್ ಸಮುದಾಯಕ್ಕೆ ತೀವ್ರ ನೋವಾಗಿರುತ್ತದೆ. ಈ ನಿಟ್ಟಿನಲ್ಲಿ, ಸದನದ ಒಳಗಾದ ಈ ವಿಚಾರದಲ್ಲಿ, ಮಾನ್ಯ ಕರ್ನಾಟಕದ ವಿಧಾನಸಭಾ ಅಧ್ಯಕ್ಷರು, ಸದ್ರಿ ಶಾಸಕನ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು ಅವರನ್ನು ಸದಸ್ತ್ವದಿಂದ ಉಚ್ಚಾಟನೆಗೊಳಿಸಿ,ಸದಸ್ವತ್ತ ರದ್ದತಿಗೆ ಸೂಕ್ತ ಕ್ರಮ ವಹಿಸಬೇಕೆಂದು ಕೆಪಿಸಿಸಿ ಸಂಯೋಜಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಒತ್ತಾಯಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ವ್ಹೀಲ್ ಚೇರಿನಲ್ಲಿ ವಿಧಾನಸಭೆ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿ! ಅಷ್ಟಕ್ಕೂ ಸಿಎಂಗೇನಾಯ್ತು?

ಇಂದಿನಿಂದ ವಿಧಾನಸಭೆ ಅಧಿವೇಶನ. ಈ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಅವರು ವ್ಹೀಟ್‌ ಚೇರಿನಲ್ಲಿ…