ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತಕ್ಕೆ, ಹಿಮಾಚಲ (Himachal) ಪ್ರದೇಶದ ಕುಲುವಿನ ಸ್ವೀ ರೆಸಾರ್ಟ್ ಸೊಲಾಂಗ್ ನಾಲಾದಲ್ಲಿ ಸಿಲುಕಿದ್ದ ಸುಮಾರು 5,000 ಪ್ರವಾಸಿಗರನ್ನು ಪೊಲೀಸರು ಶುಕ್ರವಾರ ರಕ್ಷಿಸಿದ್ದಾರೆ.
ಹೌದು, ಸೋಲಾಂಗ್ ನಾಲಾದಲ್ಲಿ ಸುಮಾರು 1,000 ವಾಹನಗಳು ಸಿಲುಕಿಕೊಂಡಿದ್ದವು. ಶುಕ್ರವಾರ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಎಂದು ಕುಲು ಪೊಲೀಸರು ತಿಳಿಸಿದ್ದಾರೆ.
ಭಾರೀ ಹಿಮಪಾತದಿಂದಾಗಿ ಸುಮಾರು 1,000 ಪ್ರವಾಸಿಗರು ಮತ್ತು ಇತರ ವಾಹನಗಳು ಸೋಲಾಂಗ್ ನಾಲಾದಲ್ಲಿ ಸಿಲುಕಿಕೊಂಡಿವೆ. ಈ ವಾಹನಗಳಲ್ಲಿ ಸುಮಾರು 5,000 ಪ್ರವಾಸಿಗರು ಇದ್ದರು. ವಾಹನಗಳು ಮತ್ತು ಪ್ರವಾಸಿಗರನ್ನು ಕುಲು ಪೊಲೀಸರು ರಕ್ಷಿಸಿದ್ದು, ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ದಿದ್ದಾರೆ. ರಕ್ಷಣೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಕುಲು ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು.
ಭಾರೀ ಹಿಮಪಾತ ಮತ್ತು ಶೀತ ಅಲೆಗಳು ಹಿಮಾಚಲ ಪ್ರದೇಶವನ್ನು ಮತ್ತಷ್ಟು ಕಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ ತಿಳಿಸಿದೆ.
ಹಿಮಾಚಲ ಪ್ರದೇಶವು ಲಾಹೌಲ್-ಸ್ಪಿತಿ, ಚಂಬಾ, ಕಂಗ್ರಾ, ಕುಲು, ಶಿಮ್ಲಾ ಮತ್ತು ಕಿನ್ನರ್ ಸೇರಿದಂತೆ ಆರು ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಹಿಮಪಾತಕ್ಕೆ ಸಾಕ್ಷಿಯಾಗಿದೆ.