ದೇಶ

ಉಪಮುಖ್ಯಮಂತ್ರಿಗೇ ಶಿಕ್ಷೆ ಘೋಷಿಸಿದ ಸಿಕ್ಖರ ಅತ್ಯುಚ್ಚ ಧಾರ್ಮಿಕ ಸಂಸ್ಥೆ!!ಡಿಸಿಎಂಗೆ ಶೌಚಾಲಯ ತೊಳೆಯುವ ಶಿಕ್ಷೆ ವಿಧಿಸಿದ್ದಾದರೂ ಯಾಕೆ ಗೊತ್ತೇ?

ಚಂಡೀಗಢ: ಸಿಕ್ಖರ ಅತ್ಯುಚ್ಚ ಧಾರ್ಮಿಕ ಸಂಸ್ಥೆ ಅಕಾಲ್ ತಮ್‌ನಿಂದ ಧರ್ಮದ್ರೋಹಿ ಎಂದು ಘೋಷಿತರಾಗಿದ್ದ ಪಂಜಾಬ್ ಡಿಸಿಎಂ ಸುಖೀರ್ ಸಿಂಗ್ ಬಾದಲ್ ಅವರಿಗೆ ಸೋಮವಾರ ಶಿಕ್ಷೆ ಘೋಷಣೆಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಅಮೃತಸರದ ಸ್ವರ್ಣಮಂದಿರದಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಮಂಗಳವಾರ ಸುಖೀರ್ ಸೇರಿದಂತೆ ಇತರೆ ಅಪರಾಧಿಗಳು ಇಲ್ಲಿನ ಪಾತ್ರೆಗಳನ್ನು, ಭಕ್ತಾದಿಗಳ ಪಾದರಕ್ಷೆಗಳನ್ನು ಮತ್ತು ಶೌಚಾಲಯಗಳನ್ನು ಸ್ವಚ್ಛ ಗೊಳಿಸಬೇಕು. ಭಕ್ತಾದಿಗಳಿಗೆ ಲಂಗಾ‌ರ್ (ಅನ್ನದಾನ) ಏರ್ಪಡಿಸಬೇಕು. ಅಲ್ಲದೇ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮುಖ್ಯಸ್ಥ ಸ್ಥಾನವನ್ನು ತ್ಯಜಿಸುವಂತೆ ಅವರಿಗೆ ಸೂಚಿಸಲಾಗಿದೆ. ಇದೇ ವೇಳೆ, ಅವರ ತಂದೆ ಪ್ರಕಾಶ್ ಬಾದಲ್ ಅವರಿಗೆ ನೀಡಲಾಗಿದ್ದ “ಅತ್ಯುನ್ನತ ಸಿಖ್ ನಾಯಕ’ ಎಂಬ ಬಿರುದನ್ನು ವಾಪಸ್ ಪಡೆಯಲಾಗಿದೆ.

chennai-shopping
Shani-pooja

2007-17ರವರೆಗೆ ಪಂಜಾಬ್‌ನ ಎಸ್‌ಎಡಿ ಸರ್ಕಾರವು ಸಿಖ್ ಧರ್ಮಗ್ರಂಥಕ್ಕೆ ಅವಮಾನಿಸಿದೆ ಮತ್ತು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ಗೆ ಬೆಂಬಲಿಸುವ ಮೂಲಕ ಧರ್ಮನಿಂದನೆ ನಡೆಸಿದೆ ಎಂದು ಅಕಾಲ್ ತಖ್‌ ಆಗಸ್ಟ್‌ನಲ್ಲಿ ತೀರ್ಪು ಪ್ರಕಟಿಸಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts