ಮುಂಬೈನಿಂದ ಮ್ಯಾಂಚೆಸ್ಟರ್‌ಗೆ ತೆರಳುತ್ತಿದ್ದ ವಿಮಾನವೊಂದು ತಾಂತ್ರಿಕ ದೋಷದಿಂದ ಕುವೈತ್ ಏರ್ ಪೋರ್ಟ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಪರಿಣಾಮ ಭಾರತೀಯ ಪ್ರಯಾಣಿಕರು ಅನ್ನ ಆಹಾರ ಇಲ್ಲದೆ ಹದಿಮೂರು ಗಂಟೆಗಳ ಕಾಲ ಬಳಲುವಂತಾಗಿದೆ.
60 ಭಾರತೀಯ ಪ್ರಯಾಣಿಕರಿದ್ದ ಗಲ್ಫ್ ಏರ್ ವಿಮಾನ ಮುಂಬೈನಿಂದ ಮ್ಯಾಂಚೆಸ್ಟರ್‌ಗೆ ಹೊರಟಿತ್ತು ಈ ನಡುವೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ವಿಮಾನವನ್ನು ಕುವೈಟ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ತುರ್ತಾಗಿ ಇಳಿಸಲಾಯಿತು. ಅಲ್ಲದೆ ಈ ವೇಳೆ ವಿಮಾನದಲ್ಲಿದ್ದ ಭಾರತೀಯ ಪ್ರಯಾಣಿಕರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ ಅಲ್ಲದೆ ವಿಮಾನ ತಪಾಸಣೆ ನಡೆಸುವ ಸಮಯ ಸುಮಾರು ಹದಿಮೂರು ಗಂಟೆಗಳ ಕಾಲ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಅನ್ನ ಆಹಾರವಿಲ್ಲದೆ ಕಾಲ ಕಳೆಯಬೇಕಾಗಿ ಬಂತು ಎಂದು ವಿಮಾನ ಸಂಸ್ಥೆಯ ವಿರುದ್ಧ ಭಾರತೀಯ ಪ್ರಯಾಣಿಕರು ಕಿಡಿಕಾರಿದ್ದಾರೆ.
ಇದಾದ ಬಳಿಕ ಮುಂಜಾನೆ ಸುಮಾರು 4.30ಕ್ಕೆ ವಿಮಾನ ಮ್ಯಾಂಚೆಸ್ಟರ್‌ಗೆ ಪ್ರಯಾಣವನ್ನು ಮುಂದುವರೆಸಿದೆ ಎಂದು ಹೇಳಲಾಗಿದೆ.