ದೇಶ

ಖ್ಯಾತ ಸಂಗೀತ ನಿರ್ದೇಶಕ  ಎ.ಆ‌ರ್.ರೆಹಮಾನ್ ದಾಂಪತ್ಯದಲ್ಲಿ ಬಿರುಕು! ಬೇರ್ಪಡುತ್ತಿರುವುದಾಗಿ ಪತ್ನಿ ಸೈರಾ ಘೋಷಣೆ!!

ಎ.ಆ‌ರ್.ರೆಹಮಾನ್ ಪತ್ನಿ ಸೈರಾ ಪತಿಯಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಎಆ‌ರ್ ರೆಹಮಾನ್ ಹಾಗೂ ಪತ್ನಿ ಸೈರಾ  ಬೇರ್ಪಡಿಸುವ  ವಿಷಯ ಬಹಿರಂಗಗೊಂಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ: ಎ.ಆ‌ರ್.ರೆಹಮಾನ್ ಪತ್ನಿ ಸೈರಾ ಪತಿಯಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಎಆ‌ರ್ ರೆಹಮಾನ್ ಹಾಗೂ ಪತ್ನಿ ಸೈರಾ  ಬೇರ್ಪಡಿಸುವ  ವಿಷಯ ಬಹಿರಂಗಗೊಂಡಿದೆ.

“ಮದುವೆಯಾದ ಹಲವು ವರ್ಷಗಳ ನಂತರ, ಶ್ರೀಮತಿ ಸೈರಾ ತನ್ನ ಪತಿ ಎ ಆರ್ ರೆಹಮಾನ್ ಅವರಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅವರ ಸಂಬಂಧದಲ್ಲಿ ಗಮನಾರ್ಹ ಭಾವನಾತ್ಮಕ ಒತ್ತಡದ ನಂತರ ಈ ನಿರ್ಧಾರ ಬಂದಿದೆ. ಪರಸ್ಪರರ ಬಗ್ಗೆ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಗಳು ಉದ್ವಿಗ್ನತೆ ಮತ್ತು ತೊಂದರೆಗಳು ತಮ್ಮ ನಡುವೆ ಪರಿಹರಿಸಲಾಗದ ಅಂತರವನ್ನು ಸೃಷ್ಟಿಸಿವೆ ಎಂದು ಕಂಡುಕೊಂಡಿದ್ದಾರೆ, ಈ ಸಮಯದಲ್ಲಿ ಎರಡೂ ಪಕ್ಷಗಳು ಅದನ್ನು ನಿವಾರಿಸಲು ಸಾಧ್ಯವಾಗುವುದಿಲ್ಲ. ಶ್ರೀಮತಿ ಸೈರಾ ಅವರು ನೋವು ಮತ್ತು ಯಾತನೆಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಒತ್ತಿ ಹೇಳಿದರು. ಶ್ರೀಮತಿ ಸೈರಾ ಈ ಸವಾಲಿನ ಸಮಯದಲ್ಲಿ ಸಾರ್ವಜನಿಕರಿಂದ ಗೌಪ್ಯತೆ ಮತ್ತು ತಿಳುವಳಿಕೆಯನ್ನು ವಿನಂತಿಸುತ್ತಾರೆ, ಏಕೆಂದರೆ ಅವರು ತಮ್ಮ ಜೀವನದ ಈ ಕಷ್ಟಕರ ಅಧ್ಯಾಯವನ್ನು ನ್ಯಾವಿಗೇಟ್ ಮಾಡುತ್ತಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

SRK Ladders

ರೆಹಮಾನ್ ಅವರು ಖ್ಯಾತ ಸಂಗೀತ ಸಂಯೋಜಕರು. ಮೊದಲು ಹಿಂದೂ ಆಗಿದ್ದ ಅವರು ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು. ಈ ಕಾರಣಕ್ಕೆ ಮುಸ್ಲಿ ಹುಡುಗಿಯನ್ನೇ ಅವರು ಮದುವೆ ಆಗಿದ್ದರು. ಈಗ ಇವರ ದಾಂಪತ್ಯ ಕೊನೆ ಆಗಿದೆ. 

1995ರಲ್ಲಿ ಎ.ಆರ್. ರೆಹಮಾನ್ ಹಾಗೂ ಸೈರಾ ವಿವಾಹ ಆಗಿದ್ದರು. ರೆಹಮಾನ್ ಅವರು ನಾಚಿಕೆ ಸ್ವಭಾವದವರು. ಹೀಗಾಗಿ, ಅವರಿಗೆ ಯಾರನ್ನೂ ಪ್ರೀತಿ ಮಾಡುವಷ್ಟು ಧೈರ್ಯ ಇರಲಿಲ್ಲ. ಹೀಗಾಗಿ ಅರೇಂ ಮ್ಯಾರೇಜ್ ಆಗಬೇಕಾಯಿತು. ತಾಯಿ ನೋಡಿದ ಹುಡುಗಿಯನ್ನು ಅವರು ಮದುವೆ ಆದರು. ಆಗ ಅವರಿಗೆ 29 ವರ್ಷ ವಯಸ್ಸಾಗಿತ್ತು. ಈ ದಂಪತಿಗೆ ಮೂವರು ಮಕ್ಕಳು ಇದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರೋ ರೆಹಮಾನ್ ಅವರು, ‘ನಾವು ಇನ್ನೇನು 30 ವರ್ಷಗಳ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ, ಯಾರೂ ಊಹಿಸದ ಅಂತ್ಯ ಸಿಕ್ಕಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಚೂರಾದ ಸಂಬಂಧದಲ್ಲೂ ನಾವು ಅರ್ಥವನ್ನು ಹುಡುಕುತ್ತೇವೆ. ಒಡೆದ ತುಣುಕುಗಳು ಮತ್ತೆ ಎಂದು ಒಂದಾಗಲಾರದು. ನಮ್ಮ ಖಾಸಗಿತನ ಗೌರವಿಸಿದ ಗೆಳೆಯರಿಗೆ ಧನ್ಯವಾದ’ ಎಂದಿದ್ದಾರೆ ರೆಹಮಾನ್.


ಈ ಸುದ್ದಿಯನ್ನು ಶೇರ್ ಮಾಡಿ

Related Posts