ದೇಶ

ಶಬರಿಮಲೆಯಲ್ಲಿ ವಿಮಾನ ನಿಲುಗಡೆ ತಾಣ!

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ವಿಮಾನದ ಮೂಲಕ ತೆರಳುವ ಯಾತ್ರಾರ್ಥಿಗಳಿಗಾಗಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲುಗಡೆ ತಾಣ ಸ್ಥಾಪಿಸಲಾಗಿದೆ. ದೇಶೀಯ ವಿಮಾನಗಳ ಆಗಮನದ ಭಾಗದಲ್ಲಿ ಪೊಲೀಸ್ ಪೋಸ್ಟ್ ಬಳಿ 5,000 ಚದರ ಅಡಿ ಪ್ರದೇಶದಲ್ಲಿ ಇರುವ ವಿಶೇಷ ಸೌಲಭ್ಯವನ್ನು ಕೇರಳದ ಸಚಿವ

ಈ ಸುದ್ದಿಯನ್ನು ಶೇರ್ ಮಾಡಿ

ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ವಿಮಾನದ ಮೂಲಕ ತೆರಳುವ ಯಾತ್ರಾರ್ಥಿಗಳಿಗಾಗಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲುಗಡೆ ತಾಣ ಸ್ಥಾಪಿಸಲಾಗಿದೆ. ದೇಶೀಯ ವಿಮಾನಗಳ ಆಗಮನದ ಭಾಗದಲ್ಲಿ ಪೊಲೀಸ್ ಪೋಸ್ಟ್ ಬಳಿ 5,000 ಚದರ ಅಡಿ ಪ್ರದೇಶದಲ್ಲಿ ಇರುವ ವಿಶೇಷ ಸೌಲಭ್ಯವನ್ನು ಕೇರಳದ ಸಚಿವ ಪಿ.ರಾಜೀವ ಗುರುವಾರ(ನ14) ಉದ್ಘಾಟಿಸಿದರು.

ಭಕ್ತಾದಿಗಳಿಗೆ ಸುಗಮ ಮತ್ತು ಅನುಕೂಲಕರ ತೀರ್ಥಯಾತ್ರೆಯ ಅನುಭವವನ್ನು ಒದಗಿಸಲು ಕೇರಳ ಸರಕಾರವು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಖಚಿತಪಡಿಸಿದೆ ಎಂದು ಸಚಿವ ಪಿ.ರಾಜೀವ ಹೇಳಿದರು.

SRK Ladders

ಹಲವು ವರ್ಷಗಳಿಂದ, ಗಮನಾರ್ಹ ಸಂಖ್ಯೆಯ ಶಬರಿಮಲೆ ಯಾತ್ರಿಕರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಕಳೆದ ವರ್ಷವಷ್ಟೇ ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನ ನಿಲ್ದಾಣದಲ್ಲಿ ಮೊದಲು ಟರ್ಮಿನಲ್ ವ್ಯವಸ್ಥೆ ಮಾಡಿದ್ದೆವು. ಕಳೆದ ತೀರ್ಥಯಾತ್ರಾ ವೇಳೆಯಲ್ಲಿ ಸುಮಾರು 6,000 ಭಕ್ತರು ಟರ್ಮಿನಲ್ ಸೌಲಭ್ಯವನ್ನು ಬಳಸಿದ್ದಾರೆ” ಎಂದು ರಾಜೀವ್ ಹೇಳಿದರು.

ಈ ಬಾರಿ ವಿಮಾನ ನಿಲ್ದಾಣದಲ್ಲಿ ಹಾಲ್ಟಿಂಗ್ ಪಾಯಿಂಟ್ ಅನ್ನು ಇನ್ನೂ ಉತ್ತಮ ಸೌಲಭ್ಯಗಳೊಂದಿಗೆ ಪ್ರಾರಂಭಿಸಲಾಗಿದ್ದು.ಭಕ್ತರ ನಿಲುಗಡೆ ತಾಣದಲ್ಲಿ ವಿಮಾನ ಮಾಹಿತಿ ಪ್ರದರ್ಶನ ವ್ಯವಸ್ಥೆ, ಜತೆಗೆ ಆಹಾರ ಕೌಂಟ‌ರ್, ಪ್ರಿಪೇಯ್ಡ್ ಟ್ಯಾಕ್ಸಿ ಕೌಂಟ‌ರ್ ಮತ್ತು ತಿರುವಾಂಕೂರು ದೇವಸ್ವಂ ಬೋರ್ಡ್ ಒದಗಿಸಿದ ಸಹಾಯ ಡೆಸ್ಕ್ ಸೌಲಭ್ಯ ಒಳಗೊಂಡಿದೆ ಎಂದು ವಿಮಾನ ನಿಲ್ದಾಣದ ಹೇಳಿಕೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts