ಕರಾವಳಿದೇಶರಾಜ್ಯ ವಾರ್ತೆ

ಕೇರಳಕ್ಕೂ ತಟ್ಟಿತು ವಕ್ಫ್ ಸಂಕಟ!!

ಕರ್ನಾಟಕದಲ್ಲಿ ಸಾವಿರಾರು ರೈತರು ವಕ್ಸ್ ಕಾಯ್ದೆಯಿಂದಾಗಿ ಆತಂಕದಲ್ಲಿ ಇರುವಾಗ ನೆರೆಯ ಕೇರಳದ ಕೊಚ್ಚಿ ಸಮೀಪದ ಇಡೀ ಗ್ರಾಮವೊಂದರ 610 ಕುಟುಂಬಗಳು ವಕ್ಸ್ ಮಂಡಳಿಯಿಂದ 464 ಎಕರೆಯಷ್ಟು ಪೂರ್ಣ ಆಸ್ತಿಯನ್ನು ಕಳೆದುಕೊಳ್ಳುವ ಆತಂಕಕ್ಕೀಡಾಗಿದೆ. ಮುನಂಬಂ ಹಾಗೂ ಅಕ್ಕಪಕ್ಕದ ಕೆಲ ಗ್ರಾಮಗಳ 600 ಕ್ಕೂ ಹೆಚ್ಚು ಕುಟುಂಬಗಳು ಇದೀಗ ಬೀದಿಗಿಳಿದು ಹೋರಾಟಕ್ಕಿಳಿದಿದೆ. ವಯನಾಡು ಚುನಾವಣೆ ಸಂದರ್ಭದಲ್ಲಿ ಈ ಧ್ವನಿ ಪ್ರತಿಧ್ವನಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನಾಟಕದಲ್ಲಿ ಸಾವಿರಾರು ರೈತರು ವಕ್ಸ್ ಕಾಯ್ದೆಯಿಂದಾಗಿ ಆತಂಕದಲ್ಲಿ ಇರುವಾಗ ನೆರೆಯ ಕೇರಳದ ಕೊಚ್ಚಿ ಸಮೀಪದ ಇಡೀ ಗ್ರಾಮವೊಂದರ 610 ಕುಟುಂಬಗಳು ವಕ್ಸ್ ಮಂಡಳಿಯಿಂದ 464 ಎಕರೆಯಷ್ಟು ಪೂರ್ಣ ಆಸ್ತಿಯನ್ನು ಕಳೆದುಕೊಳ್ಳುವ ಆತಂಕಕ್ಕೀಡಾಗಿದೆ. ಮುನಂಬಂ ಹಾಗೂ ಅಕ್ಕಪಕ್ಕದ ಕೆಲ ಗ್ರಾಮಗಳ 600 ಕ್ಕೂ ಹೆಚ್ಚು ಕುಟುಂಬಗಳು ಇದೀಗ ಬೀದಿಗಿಳಿದು ಹೋರಾಟಕ್ಕಿಳಿದಿದೆ. ವಯನಾಡು ಚುನಾವಣೆ ಸಂದರ್ಭದಲ್ಲಿ ಈ ಧ್ವನಿ ಪ್ರತಿಧ್ವನಿಸಿದೆ.

ವಿವಾದವೇನು? 1902 ರಲ್ಲಿ ತಿರುವಾಂಕೂರು ರಾಜ, ಮೀನುಗಾರಿಕೆಗಾಗಿ ಗುಜರಾತ್‌ನಿಂದ ಕೇರಳಕ್ಕೆ ಬಂದಿದ್ದು, ಅಬ್ದುಲ್ ಮೂಸಾ ಎಂಬುವವರಿಗೆ 464 ಎಕರೆ ಜಾಗವನ್ನು ನೀಡಿದ್ದರು. ನಾಲ್ಕು ದಶಕಗಳ ಅವಧಿಯಲ್ಲಿ ರಾಜ ನೀಡಿದ್ದ ಜಾಗದಲ್ಲಿ ಸಾಕಷ್ಟು ಜಾಗ ಸಮುದ್ರ ಕೊರೆತದಿಂದ ನಾಶವಾಯಿತು. 1948 ರಲ್ಲಿ ಸತ್ತಾರ್ ಅವರ ಉತ್ತರಾಧಿಕಾರಿ ಸಿದ್ದಿಕಿ ಸೇರ್, ಈ ಜಾಗವನ್ನೆಲ್ಲ ನೋಂದಣಿ ಮಾಡಿಸಿದ ಸಂದರ್ಭದಲ್ಲಿ ಮೀನುಗಾರರ ಜಮೀನನ್ನು ಕೂಡಾ ಅದಕ್ಕೆ ಸೇರಿಸಲಾಗಿತ್ತು. ಜೊತೆಗೆ ನೋಂದಣಿ ಸಂದರ್ಭ ಹೇಗೋ ವಕ್ಸ್ ಎಂಬ ಪದ ಕೂಡಾ ಸೇರಿಬಿಟ್ಟಿದೆ.

SRK Ladders

ಈ ಮಧ್ಯೆ 1950 ರಲ್ಲಿ ಸಿದ್ದಿಕಿ ಈ ಜಾಗವನ್ನು ಫಾರೂಖ್ ಕಾಲೇಜು ನಿರ್ಮಾಣಕ್ಕೆ ದಾನದ ರೂಪದಲ್ಲಿ ನೀಡಿದ್ದರು. ಈ ವೇಳೆ ಇದನ್ನು ಬೇರೆ ಯಾವ ಉದ್ದೇಶಕ್ಕೂ ಬಳಸದಂತೆ, ಬಳಸಿದರೆ ಅದು ಮೂಲ ಮಾಲೀಕರಿಗೆ ಹೋಗಲಿದೆ ಎಂಬ ಷರತ್ತನ್ನು ಹಾಕಲಾಗಿತ್ತು. ಇದಾದ ನಂತರ ಮೂರು ವರ್ಷದ ನಂತರ ರಾಜ್ಯದಲ್ಲಿ ಹೊಸ ವಕ್ಸ್ ಕಾಯ್ದೆ ಜಾರಿಗೆ ಬಂತು.

ಆದರೆ ಈ ಕಾಯ್ದೆ ಜಾರಿಗೆ ಬರುವ ಮೊದಲೇ ಕಾಲೇಜು ಆಡಳಿತ ಮಂಡಳಿಯಿಂದ ನೂರಾರು ಕುಟುಂಬಗಳು ಹಣ ಕೊಟ್ಟು ಜಾಗ ಖರೀದಿ ಮಾಡಿ ದಾಖಲೆ ಪತ್ರ ಪಡೆದುಕೊಂಡಿದ್ದರು. ಈ ನಡುವೆ 2019 ರಲ್ಲಿ ಮುನಂಬಂ ಗ್ರಾಮ ತನಗೆ ಸೇರಿದ್ದು ಎಂದು ವಕ್ಸ್ ಮಂಡಳಿ ಘೋಷಣೆ ಮಾಡಿತು. ಅದಾದ ನಂತರ ಪಂಚಾಯತ್‌ ವ್ಯಾಪ್ತಿಯಲ್ಲಿ ಜನರಿಂದ ಆಸ್ತಿ ತೆರಿಗೆ ಸಂಗ್ರಹಿಸದಂತೆಯ ತಡೆಯಾಜ್ಞೆಯನ್ನು ಕೂಡಾ ತರಲಾಯಿತು.

ಪರಿಣಾಮ, ಜನತೆ ತಮ್ಮ ಆಸ್ತಿಗೆ ತಾವು ತೆರಿಗೆಯನ್ನು ಕಟ್ಟಲಾಗದೇ, ಯಾವುದೇ ಸಮಯದಲ್ಲಿ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ. ಹೀಗಾಗಿ ವಕ್ಸ್ ಕಾಯ್ದೆ ರದ್ದುಪಡಿಸಿ ಕಾನೂನು ಬದ್ಧವಾಗಿ ತಾವು ಖರೀದಿ ಮಾಡಿದ ಆಸ್ತಿಯನ್ನು ತಮಗೆ ಉಳಿಸಿಕೊಡಿ ಎಂದು ರಸ್ತೆಗಿಳಿದು ಹೋರಾಟ ಆರಂಭ ಮಾಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

1 of 4