ದೇಶ

ವೀರ ಸಾವರ್ಕರ್ ಭಾವಚಿತ್ರ ತೆಗೆಯಲು ಅರ್ಜಿ: ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ ಸುಪ್ರೀಂ

GL

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ: ಸಂಸತ್ ಹಾಗೂ ಇತರೆ ಸರ್ಕಾರಿ ಸಂಸ್ಥೆಗಳ ಕಚೇರಿಯಿಂದ ಸ್ವಾತಂತ್ರ್ಯವೀರ ಸಾವರ್ಕರ್ ಭಾವಚಿತ್ರ ತೆಗೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಇಂತಹ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಸಿಜೆಐ ಸೂರ್ಯಕಾಂತ್, ನ್ಯಾ. ಜ್ಯೂಯಲ್ಯಾ ಬಘಾಚಿ ಮತ್ತು ನ್ಯಾ. ವಿಪುಲ್ ಎಂ ಪಂಚೋಲಿ ಅವರಿದ್ದ ಪೀಠ, ನಿವೃತ್ತ ಐಆರ್‌ಎಸ್ ಅಧಿಕಾರಿ ಬಿ. ಬಾಲಮುರಗನ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿದರು.

ಈ ವೇಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಜೆಐ ಸೂರ್ಯಕಾಂತ್, ನೀವು ಈ ರೀತಿ ಕ್ಷುಲ್ಲಕ ಅರ್ಜಿ ಸಲ್ಲಿಸಿದಾಗ ನಿಮ್ಮ ಮನಃಸ್ಥಿತಿ ಏನೆಂಬುದು ಅರ್ಥವಾಗುತ್ತದೆ. ನಿಮ್ಮ ಮೇಲೆ ದಂಡ ವಿಧಿಸುತ್ತೇವೆ. ನಿಮ್ಮ ಬಗ್ಗೆ ನೀವೇನು ಅಂದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದಾಗಿ ಅರ್ಜಿದಾರರು ಒತ್ತಿ ಹೇಳಿದರು. ಈ ವೇಳೆ ನಾವು ನಿಮ್ಮ ಮೇಲೆ ಒಂದು ಲಕ್ಷ ರೂ. ದಂಡ ಹೇರುತ್ತೇವೆ. ಆಗ ಪಿಐಎಲ್ ಅಂದರೇನು ಎಂದು ನಿಮಗೆ ಅರ್ಥವಾಗುತ್ತದೆ. ನೀವೇ ಅರ್ಜಿ ಹಿಂಪಡೆಯುತ್ತಿರೋ ಇಲ್ಲವೇ ದಂಡ ವಿಧಿಸಬೇಕೇ ಎಂದು ಸಿಜೆಐ ಪ್ರಶ್ನಿಸಿದಾಗ, ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ರೊಟ್ವೀಲರ್, ಪಿಟ್‌ಬುಲ್ ನಾಯಿಗಳಿಗೆ ನಿಷೇಧ!! ನಾಯಿ ದಾಳಿ ಪ್ರಕರಣಗಳ ಹಿನ್ನೆಲೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡ ಪಾಲಿಕೆ!

ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ರೊಟ್ವೀಲರ್ ಮತ್ತು ಪಿಟ್‌ಬುಲ್ ತಳಿಯ ನಾಯಿಗಳನ್ನು…