Gl
ದೇಶ

ಹೊಸ ವರ್ಷದಲ್ಲಿ ಗ್ಯಾಸ್ ಬರೆ! ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ್ ದರ ಏರಿಕೆ!

GL

ಈ ಸುದ್ದಿಯನ್ನು ಶೇರ್ ಮಾಡಿ

ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ಬಳಸುವ ಗ್ರಾಹಕರಿಗೆ ಹೊಸ ವರ್ಷದಲ್ಲೇ ದರ ಏರಿಕೆಯ ಬಿಸಿ ತಟ್ಟಿದೆ. ಪ್ರತಿ ತಿಂಗಳಂತೆ ಈ ಬಾರಿ ಕೂಡ ಗೃಹ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಲಾಗಿದ್ದು, ಕಳೆದ ವರ್ಷವಿಡೀ ಇಳಿಕೆ ಕಂಡಿದ್ದ ದರ ಇದೀಗ ಮತ್ತೆ ಏರಿಕೆಯಾಗಿದೆ.

core technologies

ಇಂಡಿಯನ್ ಆಯಿಲ್ ಪ್ರಕಾರ, ದೆಹಲಿಯಲ್ಲಿ ఇంದಿనింದ ಎಲ್ ಪಿ ಜಿ ಸಿಲಿಂಡರ್ 1580.50 ರೂ.ಗಳ ಬದಲಿಗೆ 1691.50 ರೂ.ಗಳಿಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ ಈಗ 1795 ರೂ.ಗಳಿಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿಯೂ 111 ರೂ.ಗಳಷ್ಟು ಏರಿಕೆಯಾಗಿದೆ. ಚೆನ್ನೈನಲ್ಲಿ 1849.50 ರೂ ಮತ್ತು ಬೆಂಗಳೂರಿನಲ್ಲಿ 1700 ರೂಪಾಯಿ ಆಸುಪಾಸಿನಲ್ಲಿ ವಾಣಿಜ್ಯ ಬಳಕೆ ಸಿಲಿಂಡ‌ರ್ ಸಿಗಲಿದೆ.

ಗೃಹ ಬಳಕೆಯ 14 ಕೆಜಿ ಸಿಲಿಂಡ‌ರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ದರಗಳು ಸ್ಥಿರವಾಗಿದ್ದು, ಪ್ರಸ್ತುತ ದೆಹಲಿಯಲ್ಲಿ ₹853, ಮುಂಬೈನಲ್ಲಿ ₹852.50, ಬೆಂಗಳೂರಿನಲ್ಲಿ 855.50 ರೂ.ಗೆ ಸಿಗಲಿದೆ. 2025ರಲ್ಲಿ ಹಲವು ಬಾರಿ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡ‌ರ್ ಬೆಲೆ ಇಳಿಕೆಯಾಗಿತ್ತು.

ಜನವರಿ 2025 ರಿಂದ ಡಿಸೆಂಬರ್ 2025 ರವರೆಗೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡ‌ರ್ ಬೆಲೆಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡು ಬಂದಿವೆ. ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಂತಹ ಮಹಾನಗರಗಳಲ್ಲಿ ಪ್ರತಿ ಸಿಲಿಂಡರ್‌ಗೆ ಸರಾಸರಿ ₹238 ರಷ್ಟು ಬೆಲೆಗಳು ಕುಸಿದಿವೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ರೊಟ್ವೀಲರ್, ಪಿಟ್‌ಬುಲ್ ನಾಯಿಗಳಿಗೆ ನಿಷೇಧ!! ನಾಯಿ ದಾಳಿ ಪ್ರಕರಣಗಳ ಹಿನ್ನೆಲೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡ ಪಾಲಿಕೆ!

ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ರೊಟ್ವೀಲರ್ ಮತ್ತು ಪಿಟ್‌ಬುಲ್ ತಳಿಯ ನಾಯಿಗಳನ್ನು…