ಮಹಿಳೆಯೊಬ್ಬರಿಗೆ ಸರಿಯಾದ ಸಮಯಕ್ಕೆ ಬ್ಲೌಸ್ ನೀಡದೇ ಇದದ್ದೇ ಟೈಲರ್‌ಗೆ ನುಂಗಲಾರದ ಬಿಸಿ ತುತ್ತಾಗಿ ಪರಿಣಮಿಸಿದೆ.
ಗ್ರಾಹಕ ನ್ಯಾಯಾಲಯವು ಟೈಲರ್‌ಗೆ ಏಳು ಸಾವಿರ ರೂ ದಂಡ ವಿಧಿಸಿದ್ದು ಹಾಗೂ ಬ್ಲೌಸ್ ಹೊಲಿಯಲು ನೀಡಲಾಗಿದ್ದ ಪೂರ್ಣ ಮೊತ್ತವನ್ನು ಮರುಪಾವತಿಸುವಂತೆ ಆದೇಶಿಸಿದೆ. ಈ ಘಟನೆಯೂ ನಡೆದಿರುವುದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಎನ್ನಲಾಗಿದೆ.
ಮದುವೆಯ ರವಿಕೆಯನ್ನು ಸಮಯಕ್ಕೆ ಸರಿಯಾಗಿ ತಲುಪಿಸುವಲ್ಲಿ ಟೈಲರ್ ವಿಫಲವಾಗಿದ್ದು, ಈ ಕಾರಣವೇ ಕೋರ್ಟ್ ಮೆಟ್ಟಿಲೇರಲು ಪ್ರಮುಖ ಕಾರಣವಾಗಿದೆ. ಈ ಘಟನೆಯೂ ನಡೆದಿರುವುದು ಡಿಸೆಂಬರ್ 24, 2024ರಲ್ಲಿ. ಮಹಿಳೆಯೊಬ್ಬಳು ತಮ್ಮ ಸಂಬಂಧಿಕರೊಬ್ಬರ ಮದುವೆಗೆ ಹಾಜರಾಗಬೇಕಾಗಿತ್ತು. ಹೀಗಾಗಿ ಅಹಮದಾಬಾದ್‌ನ ಮಹಿಳಾ ಗ್ರಾಹಕಿರೊಬ್ಬರು ಟೈಲರ್ ಬ್ಲೌಸ್ ಹೊಲಿಯಲು ನೀಡಿದ್ದಳು. ಅಷ್ಟೇ ಅಲ್ಲದೇ ಮಹಿಳೆ ಬ್ಲೌಸ್ ಹೊಲಿಯಲು ಟೈಲರ್‌ಗೆ ಮುಂಗಡವಾಗಿ 4,395 ರೂ.ಗಳನ್ನು ನೀಡಿದ್ದಳು. ಮದುವೆಗೆ ಮೊದಲು ಬ್ಲೌಸ್ ಅನ್ನು ಸಿದ್ಧಪಡಿಸುವುದಾಗಿ ಟೈಲರ್ ಭರವಸೆ ನೀಡಿದ್ದರು. ಹೀಗಿರುವಾಗ ಡಿಸೆಂಬರ್ 14 ರಂದು ಬ್ಲೌಸ್ ತೆಗೆದುಕೊಳ್ಳಲು ಹೋದಾಗ ಬ್ಲೌಸ್ ಹೇಳಿದ್ದ ಅಳತೆ ಹಾಗೂ ವಿನ್ಯಾಸದ ಪ್ರಕಾರವಾಗಿ ಹೊಲಿದಿರಲಿಲ್ಲ. ಸರಿ ಮಾಡಿ ಕೊಡುವುದಾಗಿ ಹೇಳಿದ್ದ ಟೈಲರ್ ಡಿಸೆಂಬರ್ 24 ದಾಟಿದರೂ ಮಹಿಳೆಯ ಕೈಗೆ ಬ್ಲೌಸ್ ತಲುಪಲಿಲ್ಲ.
ಕೊನೆಗೆ ಮಹಿಳಾ ಗ್ರಾಹಕಿಯೂ ಟೈಲರ್‌ಗೆ ಕಾನೂನು ನೋಟಿಸ್ ಕಳುಹಿಸಿ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆದರೆ ಟೈಲರ್ ಅಹಮದಾಬಾದ್ ಗ್ರಾಹಕ ವಿವಾದ ಪರಿಹಾರ ಆಯೋಗದ ಮುಂದೆ ಹಾಜರಾಗಲಿಲ್ಲ. ಆಯೋಗವು ಟೈಲರ್ ಬ್ರೌಸ್ ಒದಗಿಸಲು ವಿಫಲವಾಗಿರುವುದನ್ನು ಕಂಡು ಸೇವೆಯಲ್ಲಿ ಸ್ಪಷ್ಟವಾದ ಕೊರತೆ ಎಂದು ದೃಢಪಡಿಸಿದ್ದು ಹಾಗೂ ದೂರು ನೀಡಿದ್ದ ಮಹಿಳೆ ಮಾನಸಿಕ ಕಿರುಕುಳ ಅನುಭವಿಸಿದ್ದಾಳೆ ಎಂದು ತಿಳಿಸಿದೆ. ನ್ಯಾಯಾಲಯವು ಟೈಲರ್‌ಗೆ 4,395 ಮೊತ್ತವನ್ನು ಮರುಪಾವತಿಸಲು ಹೇಳಿದೆ. 7% ವಾರ್ಷಿಕ ಬಡ್ಡಿ ಮತ್ತು ಮಾನಸಿಕ ಯಾತನೆ ಮತ್ತು ಮೊಕದ್ದಮೆ ವೆಚ್ಚಗಳಿಗೆ ಹೆಚ್ಚುವರಿ ಪರಿಹಾರವನ್ನು ನೀಡಿದೆ.
























