ದೇಶ

ಅಮೆರಿಕಕ್ಕೆ ಅಂಚೆ ಕಳುಹಿಸದ ಭಾರತ: ಪೋಸ್ಟಲ್ ವಾರ್!!

ಈ ಸುದ್ದಿಯನ್ನು ಶೇರ್ ಮಾಡಿ

ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ 50% ಸುಂಕ ವಿಧಿಸಿದ ಬೆನ್ನಲ್ಲೇ ಭಾರತೀಯ ಅಂಚೆ ಇಲಾಖೆ ಶನಿವಾರ ಅಮೆರಿಕಕ್ಕೆ ಎಲ್ಲಾ ಅಂಚೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ ಎಂದು ವರದಿಯಾಗಿದೆ.

akshaya college

ಆಗಸ್ಟ್ 29ರಿಂದಲೇ ಅಮೆರಿಕಕ್ಕೆ ಅಂಚೆ ಸೇವೆಗಳನ್ನು ಭಾರತ ಸ್ಥಗಿತಗೊಳಿಸಲಿದೆ.

ಜುಲೈ 30ರಂದು ಅಮೆರಿಕ ಸರಕಾರ ಹೊರಡಿಸಿದ ಕಾರ್ಯನಿರ್ವಾಹಕ ಆದೇಶವನ್ನು ಅಂಚೆ ಇಲಾಖೆ ಗಮನಿಸಿದೆ. ಆದೇಶ ಸಂಖ್ಯೆ 14324ರ ಅನ್ವಯ, 800 ಡಾಲರ್ ವರೆಗಿನ ಮೌಲ್ಯದ ವಸ್ತುಗಳಿಗೆ ನೀಡುತ್ತಿದ್ದ ತೆರಿಗೆ ವಿನಾಯಿತಿ ಆಗಸ್ಟ್ 29ರಂದು ರದ್ದುಗೊಳ್ಳಲಿದೆ ಎಂದು ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಆಗಸ್ಟ್ 29ರಿಂದ ಅಮೆರಿಕಾಗೆ ಕಳುಹಿಸುವ ಎಲ್ಲಾ ಅಂತಾರಾಷ್ಟ್ರೀಯ ಅಂಚೆ ಸರಕುಗಳಿಗೆ, ಮೌಲ್ಯ ಎಷ್ಟೇ ಇರಲಿ ಅಮೆರಿಕಾ ದೇಶದ IEEPA ಅಡಿ ತೆರಿಗೆ ವಿಧಿಸಲಾಗುತ್ತದೆ. ಆದರೆ, 100 ಡಾಲರ್ ಮೌಲ್ಯದವರೆಗಿನ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಮುಂದುವರಿಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts