pashupathi
ದೇಶ

ಇರಾನ್ :ತೈಲ ಸಾಗಾಣೆಯ ಸಮುದ್ರ ಮಾರ್ಗವನ್ನು ಮುಚ್ಚಲು ನಿರ್ಧಾರ..!

tv clinic
ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ದಾಳಿ ನಡೆಸುತ್ತಿದ್ದಂತೆ ಯುದ್ಧೋನ್ಮದ ಮತ್ತಷ್ಟು ಬಿಗಡಾಯಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ದಾಳಿ ನಡೆಸುತ್ತಿದ್ದಂತೆ ಯುದ್ಧೋನ್ಮದ ಮತ್ತಷ್ಟು ಬಿಗಡಾಯಿಸಿದೆ. ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವ ಇರಾನ್ ವಿಶ್ವಕ್ಕೆ ಶಾಕ್ ಕೊಡಲು ಮುಂದಾಗಿದೆ. ಪ್ರಮುಖ ತೈಲ ಹಡಗು ಮಾರ್ಗ ಹೊರ್ಮುಜ್ ಜಲಸಂಧಿ ಮುಚ್ಚಲು ಮುಂದಾಗಿದೆ. ಒಂದು ವೇಳೆ ಹೊರ್ಮುಜ್ ಜಲಸಂಧಿ ಬಂದ್ ಆದ್ರೆ ಭಾರತ ಸೇರಿ ಹಲವು ರಾಷ್ಟ್ರಗಳ ಮೇಲೆ ಭಾರಿ ಪರಿಣಾಮ ಬೀರಲಿದೆ.

akshaya college

ಮಧ್ಯಪ್ರಾಚ್ಯದಲ್ಲಿ ಮಿಸೈಲ್ ಗಳ ಮಹಾಸಮರಕ್ಕೆ ದೊಡ್ಡಣ್ಣ ಅಮೆರಿಕ ಎಂಟ್ರಿ ಕೊಟ್ಟಿದ್ದು ಇರಾನ್ ನ 3 ಪರಮಾಣು ನೆಲೆಗಳನ್ನು ನಾಶ ಮಾಡಿದೆ. ರೊಚ್ಚಿಗೆದ್ದಿರುವ ಇರಾನ್ ಸರ್ಕಾರ ಪ್ರಮುಖ ತೈಲ ಹಡಗು ಮಾರ್ಗ ಹೊರ್ಮುಜ್ ಜಲಸಂಧಿಯನ್ನು ಮುಚ್ಚಲು ಮುಂದಾಗಿದೆ. ಇದಕ್ಕೆ ಸಂಸತ್ ನಲ್ಲಿ ಅನುಮೋದನೆ ಕೂಡ ಸಿಕ್ಕಿದೆ. ಜಾಗತಿಕವಾಗಿ ತೈಲ ಸಾಗಣೆಗೆ ಪ್ರಮುಖ ಹೆದ್ದಾರಿ ಆಗಿರುವ ಹೊರ್ಮುಜ್ ಬಂದ್ ಮಾಡುವ ತೀರ್ಮಾನ ತೈಲ ಆಮದು ರಾಷ್ಟ್ರಗಳಿಗೆ ಬಿಗ್ ಶಾಕ್ ನೀಡಿದೆ. ಬಂದ್ ಕ್ರಮ ಕುರಿತು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯು ಸದ್ಯ ತೀರ್ಮಾನ ಕೈಗೊಳ್ಳೋದಷ್ಟೆ ಬಾಕಿ ಇದೆ.

ಹೊರ್ಮುಜ್ ಜಲಸಂಧಿ ಪ್ರಮುಖ ಪಾಯಿಂಟ್ ಗಳಲ್ಲಿ ಒಂದಾಗಿದ್ದು 33 ಕಿ.ಮೀ ಅಗಲ ಇದೆ ಜೊತೆಗೆ 3 ಕಿ.ಮೀ ನಡುವೆ ಉಭಯ ಮಾರ್ಗಗಳಲ್ಲಿ ಹಡಗು ಸಂಚಾರ ನಡೆಯುತ್ತಿದೆ.. ಇದು ಒಮನ್, ಇರಾನ್ ನಡುವೆ ಹಾದು ಹೋಗಲಿರುವ ಜಲಸಂಧಿ ಆಗಿದ್ದು, ಗಲ್ಫ್ ರಾಷ್ಟ್ರಗಳು ಹಾಗೂ ಅರಬ್ಬಿ ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ.. ವಿಶ್ವದ ವಿವಿಧ ರಾಷ್ಟ್ರಗಳಿಗೆ ಈ ಮಾರ್ಗದ ಮೂಲಕವೇ ಶೇ.30ರಷ್ಟು ತೈಲ, ಅನಿಲ ಪೂರೈಕೆ ಆಗುತ್ತಿದೆ. ಪ್ರತಿದಿನ ಈ ಮಾರ್ಗದಲ್ಲಿ 2.1 ಕೋಟಿ ಬ್ಯಾರಲ್ ತೈಲ ಪೂರೈಕೆ ಆಗಲಿದೆ.

ಭಾರತಕ್ಕೆ ಪ್ರತಿದಿನ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಇದೇ ಜಲ ಮಾರ್ಗದಿಂದ ಆಮದು ಆಗುತ್ತಿದ್ದು, ಭಾರತದ ಕಚ್ಚಾ ತೈಲ ಬೇಡಿಕೆಯ ಶೇ.85ರಷ್ಟು ಆಮದು ಅಲ್ಲಿಂದ ಆಗುತ್ತಿದೆ. ಇದರಿಂದ ತೀವ್ರ ನಷ್ಟ ಮತ್ತು ಕಚ್ಚಾ ತೈಲದ ಕೊರತೆ ಉಂಟಾಗಲಿದೆ.

ಈ ಮಧ್ಯೆ ಹೊರ್ಮುಜ್ ಜಲಸಂಧಿ ಮುಚ್ಚಲು ಮುಂದಾಗಿರುವ ಇರಾನ್ ಗೆ ಅಮೆರಿಕಾ ಎಚ್ಚರಿಕೆ ನೀಡಿದೆ. ಇದು ಇರಾನ್‌ನ ಆರ್ಥಿಕ ಆತ್ಮಹತ್ಯೆ ಎಂದು ಅಮೆರಿಕಾ ಬುದ್ಧಿಮಾತು ಹೇಳಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts