ದೇಶ

ಸ್ವೀಟ್’ಗೂ ‘ಪಾಕ್’ ನಂಟು!: ಬಿಡುವುದು ಉಂಟೇ?

ಈ ಸುದ್ದಿಯನ್ನು ಶೇರ್ ಮಾಡಿ

ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಭುಗಿಲೇಳುತ್ತಿದ್ದಂತೆಯೇ ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ಜನರು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದು, ರೈತರು ಪಾಕಿಸ್ತಾನಕ್ಕೆ ರಫ್ತಾಗುತ್ತಿದ್ದ ಆಹಾರ ಪದಾರ್ಥಗಳನ್ನು ಸ್ಥಗಿತಗೊಳಿಸಿದರೆ, ವ್ಯಾಪಾರಸ್ಥರು ಪಾಕಿಸ್ತಾನ ಮತ್ತು ಅದರ ಮಿತ್ರ ರಾಷ್ಟ್ರಗಳೊಂದಿಗಿನ ವ್ಯಾಪಾರ ಸಂಬಂಧವನ್ನೇ ಕಡಿತಗೊಳಿಸಿದ್ದ ಸುದ್ದಿಗಳನ್ನು ನಾವು ಹಿಂದೆ ನೋಡಿದ್ದೆವು.

ಪಟ್ಟಿಗೆ ಇದೀಗ ಸ್ವೀಟ್ ಶಾಪ್ ಗಳೂ ಕೂಡ ಸೇರ್ಪಡೆಯಾಗಿದ್ದು, ವಿನೂತನ ರೀತಿಯಲ್ಲಿಪಾಕ್ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮೈಸೂರು ಪಾಕ್ ಹೆಸರು ಬದಲು:

ಭಾರತಪಾಕಿಸ್ತಾನ ಸಂಘರ್ಷದ ಬಳಿಕ ಭಾರತೀಯರಲ್ಲಿ ಪಾಕ್ದ್ವೇಷ ಹೆಚ್ಚಾಗಿದ್ದು ಹಿನ್ನೆಲೆಯಲ್ಲಿ ರಾಜಸ್ಥಾನದ ಜೈಪುರದ ಅಂಗಡಿ ಮಾಲೀಕರುಪಾಕ್‌’ ಹೆಸರಿರುವ ತಿನಿಸುಗಳ ಹೆಸರನ್ನೇ ಬದಲಾಯಿಸಿದ್ದಾರೆ. ಅದರಲ್ಲೂ ಕರ್ನಾಟಕದ ಮೈಸೂರಿನ ಪ್ರಸಿದ್ಧಮೈಸೂರು ಪಾಕ್ಹೆಸರನ್ನೂ ಕೂಡ ಬದಲಾಯಿಸಲಾಗಿದೆ.

ಮೈಸೂರು ಪಾಕ್ಹೆಸರನ್ನುಮೈಸೂರು ಶ್ರೀಎಂದು ಬದಲಾಯಿಸಲಾಗಿದ್ದು, ಮೈಸೂರು ಪಾಕ್ ಮಾತ್ರವಲ್ಲದೇಪಾಕ್ಹೆಸರು ಬರುವ ಎಲ್ಲ ಸಿಹಿತಿನಿಸುಗಳ ಹೆಸರುಗಳನ್ನುಶ್ರೀಗೆ ಬದಲಿಸಲಾಗಿದೆ. ಸಿಹಿ ತಿನಿಸುಗಳಲ್ಲಿನಪಾಕ್ಪದಕ್ಕೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲದಿದ್ದರೂ, ಪಾಕ್ ಎಂಬ ಹೆಸರು ಇರಬಾರದು ಎಂದು ವ್ಯಾಪಾರಿಗಳು ನಿರ್ಧಾರ ಕೈಗೊಂಡಿದ್ದಾರೆ.

ನಾವು ನಮ್ಮ ಸಿಹಿ ತಿನಿಸುಗಳ ಹೆಸರಿನಿಂದಪಾಕ್ಪದವನ್ನು ತೆಗೆದುಹಾಕಿದ್ದೇವೆ. ‘ಮೋತಿ ಪಾಕ್ಅನ್ನುಮೋತಿ ಶ್ರೀಎಂದು, ‘ಗೊಂಡ್ ಪಾಕ್ಅನ್ನುಗೊಂಡ್ ಶ್ರೀಎಂದೂ, ‘ಮೈಸೂರು ಪಾಕ್ಅನ್ನುಮೈಸೂರು ಶ್ರೀಎಂದು ಮರುನಾಮಕರಣ ಮಾಡಿದ್ದೇವೆಎಂದು ಅಂಗಡಿ ಮಾಲೀಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪಾಕ್ಹೆಸರಿಗೆ ವಿರೋಧ

ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಪಾಕಿಸ್ತಾನದ ವಿರುದ್ಧ ದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ನೇರಪರೋಕ್ಷ ವಸ್ತು ಅಥವಾ ಹೆಸರಿಗೆ ಸ್ಥಳೀಯರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದ್ನಲ್ಲಿ ಕರಾಚಿ ಬೇಕರಿ ಮೇಲೂ ದಾಳಿ ನಡೆದಿತ್ತು. ಪಾಕಿಸ್ತಾನದ ನಗರ ಕರಾಚಿ ಹೆಸರು ಇರುವ ಕಾರಣಕ್ಕೆ ಕರಾಚಿ ಬೇಕರಿಯ ಬೋರ್ಡ್ಗಳನ್ನು ಉದ್ರಿಕ್ತರು ಕಿತ್ತು ಹಾಕಿದ್ದರು.

ಪಾಕ್ಗೂ ಪಾಕಿಸ್ತಾನಕ್ಕೂ ಏನು ಸಂಬಂಧ?

ಸಿಹಿ ತಿನಿಸುಗಳಲ್ಲಿರುವಪಾಕ್ಎಂಬ ಪದಕ್ಕೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕನ್ನಡ ಪದವಾಗಿದ್ದು, ಪಾಕ ಪದವನ್ನು ಸಿಹಿ ತಿನಿಸುಗಳ ಹೆಸರಿನ ಜೊತೆ ಪಾಕ್ಎಂದು ಬಳಸಲಾಗಿದೆ. ಕನ್ನಡದಲ್ಲಿ ಸಕ್ಕರೆ ಪಾಕ, ಬೆಲ್ಲದ ಪಾಕ ಹೀಗೆ ಪದಗಳು ಚಾಲ್ತಿಯಲ್ಲಿದ್ದು, ಇದೇ ರೀತಿ ಮೈಸೂರ್ಪಾಕ್ಪದ ಬಂದಿದೆ. ‘ಮೈಸೂರು ಪಾಕ್ಸಿಹಿ ತಿನಿಸು ಕರ್ನಾಟಕದ ಮೈಸೂರು ಮೂಲದ ಸಿಹಿ ತಿನಿಸಾಗಿದ್ದು, ಇಲ್ಲಿಪಾಕ್ಎಂದರೆ ಸಕ್ಕರೆ ಪಾಕ ಎಂದರ್ಥ. ಆದರೆ ಇದರ ಅರ್ಥ ಗೊತ್ತಿಲ್ಲದೆ ವ್ಯಾಪಾರಿಗಳು ಹೆಸರನ್ನೇ ಬದಲಾಯಿಸಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ಮೀಮ್ ಗಳ ಸುರಿಮಳೆ

ಪಾಕಿಸ್ತಾನ ಮತ್ತು ಭಾರತದ ಸಂಘರ್ಷದ ನಡುವಿನ ಸಂದರ್ಭದಲ್ಲಿ ಮೈಸೂರ್ಪಾಕ್ಹೆಸರನ್ನು ಮೈಸೂರ್ಭಾರತ್ಮಾಡಬೇಕು ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ಗಳು ಹರಿದಾಡಿದ್ದವು. ಇದನ್ನೀಗ ವ್ಯಾಪಾರಿಗಳು ನಿಜ ಮಾಡಿದ್ದು, ಮೈಸೂರ್ ಪಾಕ್ಹೆಸರನ್ನೂ ಬದಲಾಯಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts