ದೇಶ

ಕೂಡಲೇ ಪಿಒಕೆ ತೆರವು ಮಾಡಿ: ಮತ್ತೆ ಎಚ್ಚರಿಕೆ ನೀಡಿದ ಭಾರತ

ಭಾರತೀಯ ಸೇನಾಪಡೆಗಳು, ಪ್ರಧಾನಿ ನರೇಂದ್ರ ಮೋದಿ ಅನಂತರ, ಇದೀಗ ಕೇಂದ್ರ ವಿದೇ­ಶಾಂಗ ಸಚಿವಾಲಯವೂ ಪಾಕಿಸ್ಥಾನಕ್ಕೆ ಖಡಕ್‌ ಸಂದೇಶ ರವಾನಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಹೊಸದಿಲ್ಲಿ: ಭಾರತೀಯ ಸೇನಾಪಡೆಗಳು, ಪ್ರಧಾನಿ ನರೇಂದ್ರ ಮೋದಿ ಅನಂತರ, ಇದೀಗ ಕೇಂದ್ರ ವಿದೇ­ಶಾಂಗ ಸಚಿವಾಲಯವೂ ಪಾಕಿಸ್ಥಾನಕ್ಕೆ ಖಡಕ್‌ ಸಂದೇಶ ರವಾನಿಸಿದೆ.

akshaya college

ಜಮ್ಮು-ಕಾಶ್ಮೀರ ವಿಚಾರದಲ್ಲಿ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ­ಯಿಲ್ಲ. ಪಾಕ್‌ ಆಕ್ರಮಿಸಿಕೊಂಡಿ­ರುವ ಕಾಶ್ಮೀರದ (ಪಿಒಕೆ) ಭಾಗವನ್ನು ಕೂಡಲೇ ತೆರವು ಮಾಡಬೇಕು ಎಂದು ಮಾಧ್ಯಮಗಳಿಗೆ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್‌ ಜೈಸ್ವಾಲ್‌ ಹೇಳಿದರು.

ಕದನ ವಿರಾಮ ಏರ್ಪಟ್ಟ ಕುರಿತು ವಿವರಣೆ ನೀಡಿದ ಜೈಸ್ವಾಲ್‌, ಪಾಕಿಸ್ಥಾನದ ಡಿಜಿಎಂಒ (ಸೇನಾ ಕಾರ್ಯಾಚರಣೆ ನಿರ್ದೇಶಕ) ಭಾರತದ ಡಿಜಿ­ಎಂಒ ಜತೆಗೆ ಮಾತಾಡಿದ ನಂತರ ಸೇನಾ ದಾಳಿ ನಿಲ್ಲಿಸುವ ನಿರ್ಧಾರ ಮಾಡಲಾಯಿತು ಎಂದು ಹೇಳಿದ್ದಾರೆ.

ಸಿಂಧೂ ಒಪ್ಪಂದ ರದ್ದು ಮುಂದುವರಿಯುತ್ತದೆ

ಪಾಕ್‌ನೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದು ಮುಂದುವರಿಯುತ್ತದೆ. ಪಾಕ್‌ ಉಗ್ರವಾದ ನಿಲ್ಲಿಸುವವರೆಗೆ ಇದರಲ್ಲಿ ಬದಲಾವಣೆ­ಯಿಲ್ಲ ಎಂದು ಜೈಸ್ವಾಲ್‌ ಹೇಳಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts