pashupathi
ದೇಶ

ಅರಬ್ಬಿ ಸಮುದ್ರದಲ್ಲಿ ಯುದ್ಧ ಸನ್ನದ್ಧತೆ

tv clinic
ಪಾಕಿಸ್ತಾನ ಗಡಿಯಲ್ಲಿ ಅನಿಶ್ಚಿತತೆ ಹೆಚ್ಚುತ್ತಿದ್ದಂತೆ ಭಾರತೀಯ ನೌಕಾಪಡೆಯು ತನ್ನ ಸನ್ನದ್ಧತೆಯನ್ನು ಪ್ರದರ್ಶಿಸಿದೆ. ಭಾರತೀಯ ಯುದ್ಧನೌಕೆಗಳು ಅರೇಬಿಯನ್ ಸಮುದ್ರದಲ್ಲಿ ಹಲವಾರು ಆ್ಯಂಟಿ-ಶಿಪ್ ಫೈರಿಂಗ್‌ ನಡೆಸಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಪಾಕಿಸ್ತಾನ ಗಡಿಯಲ್ಲಿ ಅನಿಶ್ಚಿತತೆ ಹೆಚ್ಚುತ್ತಿದ್ದಂತೆ ಭಾರತೀಯ ನೌಕಾಪಡೆಯು ತನ್ನ ಸನ್ನದ್ಧತೆಯನ್ನು ಪ್ರದರ್ಶಿಸಿದೆ. ಭಾರತೀಯ ಯುದ್ಧನೌಕೆಗಳು ಅರೇಬಿಯನ್ ಸಮುದ್ರದಲ್ಲಿ ಹಲವಾರು ಆ್ಯಂಟಿ-ಶಿಪ್ ಫೈರಿಂಗ್‌ ನಡೆಸಿದೆ. ನೌಕಾಪಡೆಯು ರಾಷ್ಟ್ರದ ಹಿತಾಸಕ್ತಿಗಳನ್ನು ರಕ್ಷಿಸಲು ಯುದ್ಧಕ್ಕೆ ಸಿದ್ದವಾಗಿದೆ ಎಂದು ಪ್ರತಿಪಾದಿಸುವುದರೊಂದಿಗೆ, ದೀರ್ಘ-ಶ್ರೇಣಿಯ ನಿಖರ ದಾಳಿಗಳಿಗೆ ಸಿದ್ಧತೆಯ ಪ್ರದರ್ಶನ ಮಾಡಿದೆ.

ಸಮುದ್ರದ ಮಧ್ಯದಲ್ಲಿ ಯುದ್ಧನೌಕೆಗಳಿಂದ ಬ್ರಹ್ಮಸ್ ಆ್ಯಂಟಿ ಶಿಪ್ ಮತ್ತು ಆ್ಯಂಟಿ ಸರ್ಫೇಸ್ ಕ್ರೂಸ್ ಕ್ಷಿಪಣಿಗಳನ್ನು ಹಾರಿಸುತ್ತಿರುವ ದೃಶ್ಯಗಳನ್ನು ನೌಕಾಪಡೆಯು ಹಂಚಿಕೊಂಡಿದೆ. ಈ ಯುದ್ಧನೌಕೆಗಳಲ್ಲಿ ಕೋಲ್ಕತಾ-ವರ್ಗದ ವಿಧ್ವಂಸಕ ನೌಕೆಗಳು ಮತ್ತು ನೀಲಗಿರಿ ಮತ್ತು ಕ್ರಿವಾಕ್-ವರ್ಗದ ಯುದ್ಧನೌಕೆಗಳು ಸೇರಿವೆ.

“ಭಾರತೀಯ ನೌಕಾಪಡೆಯ ಹಡಗುಗಳು ದೀರ್ಘ-ಶ್ರೇಣಿಯ ನಿಖರ ಆಕ್ರಮಣಕಾರಿ ದಾಳಿಗೆ ವೇದಿಕೆಗಳು, ವ್ಯವಸ್ಥೆಗಳು ಮತ್ತು ಸಿಬ್ಬಂದಿಗಳ ಸನ್ನದ್ಧತೆಯನ್ನು ಮರುಮೌಲ್ಯಮಾಪನ ಮಾಡಲು ಮತ್ತು ಪ್ರದರ್ಶಿಸಲು ಹಲವಾರು ಆ್ಯಂಟಿ ಶಿಪ್ ಗುಂಡಿನ ದಾಳಿಗಳನ್ನು ಯಶಸ್ವಿಯಾಗಿ ಕೈಗೊಂಡಿವೆ. ಯಾವುದೇ ಸಮಯದಲ್ಲಿ ಎಲ್ಲಿಯಾದರೂ ಹೇಗಾದರೂ ರಾಷ್ಟ್ರದ ಕಡಲ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಭಾರತೀಯ ನೌಕಾಪಡೆ ಯುದ್ಧ-ಸಿದ್ಧ, ವಿಶ್ವಾಸಾರ್ಹ ಮತ್ತು ಭವಿಷ್ಯಕ್ಕೆ ಸಿದ್ಧವಾಗಿದೆ’ ಎಂದು ಭಾರತೀಯ ನೌಕಾಪಡೆ ಆನ್‌ಲೈನ್ ಪೋಸ್ಟ್‌ನಲ್ಲಿ ತಿಳಿಸಿದೆ.

ಅರೇಬಿಯನ್ ಸಮುದ್ರ ಪ್ರದೇಶದಲ್ಲಿ ಗುಂಡಿನ ದಾಳಿಗೆ ಪಾಕಿಸ್ತಾನ ಅಧಿಸೂಚನೆ ಹೊರಡಿಸಿದೆ.

ಪಹಲ್ಲಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಭಾರತೀಯ ನೌಕಾಪಡೆಯ ಯುದ್ಧ ಸನ್ನದ್ಧತೆ ಮಹತ್ವ ಪಡೆದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts