Thursday, November 21
Share News

ನವದೆಹಲಿ: ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಜಯ್ ಮಾಣಿಕ್ ರಾವ್ ಖಾನ್ವಿಲ್ಕರ್ ಅವರು ಲೋಕಪಾಲ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಭಾನುವಾರ ಸಂಜೆ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಗಳು ಖಾನ್ವಿಲ್ಕರ್ ಅವರಿಗೆ ಲೋಕಪಾಲ್ ಅಧ್ಯಕ್ಷರಾಗಿ ಪ್ರಮಾಣ ವಚನ ಬೋಧಿಸಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

66 ವರ್ಷದ ನ್ಯಾಯಮೂರ್ತಿ ಖಾನ್ವಿಲ್ಕರ್ ಅವರು ಮೇ 13, 2016 ರಿಂದ ಜುಲೈ 29, 2022 ರವರೆಗೆ ಸುಪ್ರೀಂ ಕೋರ್ಟ್’ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.

ಮೇ 27, 2022 ರಂದು ಪಿನಾಕಿ ಚಂದ್ರ ಘೋಷ್ ಅವರ ನಿವೃತ್ತಿಯ ನಂತರ ಲೋಕಪಾಲ ಅಧ್ಯಕ್ಷರ ಹುದ್ದೆ ಖಾಲಿಯಾಗಿತ್ತು. ಅಲ್ಲಿಮದ ಸುಮಾರು ಎರಡು ವರ್ಷಗಳ ನಂತರ ನ್ಯಾಯಮೂರ್ತಿ (ನಿವೃತ್ತ) ಖಾನ್ವಿಲ್ಕರ್ ಅವರನ್ನು ಕಳೆದ ತಿಂಗಳು ಭ್ರಷ್ಟಾಚಾರ ವಿರೋಧಿ ಲೋಕಪಾಲ್ ಅಧ್ಯಕ್ಷರಾಗಿ ನೇಮಿಸಲಾಯಿತು.


Share News

Comments are closed.

Exit mobile version