ಬೆಂಗಳೂರು: ಗೋವಾದಲ್ಲಿ ನಡೆದ ಐರನ್ ಮ್ಯಾನ್ 70.3 ಸ್ಪರ್ಧೆಯನ್ನು ಸಂಸದ ತೇಜಸ್ವಿ ಸೂರ್ಯ ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಗೋವಾದಲ್ಲಿ ನಡೆದ ವಾಕಿಂಗ್, ಸ್ವಿಮ್ಮಿಂಗ್ ಹಾಗೂ ಸೈಕ್ಲಿಂಗ್ ಮೂರು ರೀತಿಯ ಐರನ್ ಮ್ಯಾನ್ 70.3 ಸ್ಪರ್ಧೆಯಲ್ಲಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಭಾಗವಹಿಸಿ, ಪೂರ್ಣಗೊಳಿಸುವ ಮೂಲಕ ವಿಜೇತರಾದ ಪ್ರಥಮ ಜನಪ್ರತಿನಿಧಿಯಾಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಸ್ಪರ್ಧೆಯು 1.9 ಕಿಮೀ ಈಜು, 90 ಕಿಮೀ ಸೈಕ್ಲಿಂಗ್ ಮತ್ತು 21.1 ಕಿಮೀ ಓಟ ಸೇರಿದಂತೆ ಒಟ್ಟು 113 ಕಿಮೀ ದೂರ ಕ್ರಮಿಸಬೇಕಿತ್ತು. ತೇಜಸ್ವಿ ಸೂರ್ಯ ಸಾಧನೆಯನ್ನು ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದಾರೆ.
ತೇಜಸ್ವಿ ಸೂರ್ಯ, ಐರನ್ ಮ್ಯಾನ್ 70.3 ಗೋವಾ ಸ್ಪರ್ಧೆಯೂ ಕ್ರೀಡೆಗೆ ಹೆಚ್ಚು ಪ್ರಸಿದ್ಧವಾಗಿದೆ. ಈ ಸ್ಪರ್ಧೆಯಲ್ಲಿ 50 ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಆ ಮೂಲಕ ಭಾರತ ಮತ್ತು ವಿಶ್ವದಾದ್ಯಂತ ಕ್ರೀಡಾಪಟುಗಳು ಮತ್ತು ಫಿಟ್ನೆಸ್ ಪ್ರಿಯರ ಪ್ರಮುಖ ಸ್ಪರ್ಧೆ ಆಗಿದೆ ಎಂದಿದ್ದಾರೆ.