ವಿದೇಶ

ತಾರಕಕ್ಕೇರಿದ ಇರಾನ್ – ಇಸ್ರೇಲ್ ಯುದ್ಧ! ಮಂಗಳೂರು: ರದ್ದಾದ ವಿಮಾನಗಳ ಡೀಟೈಲ್ಸ್ ಇಲ್ಲಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಅಮೆರಿಕ ಮತ್ತು ಇಸ್ರೇಲ್ ಎರಡು ರಾಷ್ಟ್ರಗಳು ಇರಾನ್ ಮೇಲೆ ಶನಿವಾರ (ಫೆ.28) ದಾಳಿ ನಡೆಸಿವೆ. ಇದರ ಪರಿಣಾಮ ಭಾರತ, ಯುಕೆ, ಯುರೋಪ್, ಮಧ್ಯಪ್ರಾಚ್ಯ ಮತ್ತು ಉತ್ತರ ಅಮೆರಿಕದ ಮಧ್ಯ ನಾಗರಿಕನ್ನು ಹೊತ್ತು ಸಂಚಾರ ನಡೆಸಬೇಕಿದ್ದ ವಿಮಾನಗಳ ಕಾರ್ಯಾಚರಣೆ ಅಸ್ತವ್ಯಸ್ಥಗೊಂಡಿದೆ. ಯುದ್ಧದಿಂದಾಗಿ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಸಾವಿರಾರು ವಿಮಾನ ಪ್ರಯಾಣಿಕರು ಪರದಾಡುವಂತಾಯಿತು.

ಇರಾನ್ ಮತ್ತು ಇಸ್ರೇಲ್ ನಡುವೆ ಉದ್ವಿಗ್ನತೆ ತೀವ್ರಗೊಂಡು ಯುದ್ಧದ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ, ಇರಾನ್ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಇದರ ಪರಿಣಾಮವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ಹಲವು ವಿಮಾನಗಳು ರದ್ದಾಗಿವೆ ಹಾಗೂ ಕೆಲವು ಮಧ್ಯದಲ್ಲೇ ವಾಪಸ್ ಆಗಿವೆ.

ಟೇಕಾಫ್ ಆದ ವಿಮಾನ ಮತ್ತೆ ವಾಪಸ್

ಮಂಗಳೂರಿನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX 831 ನಿಗದಿತ ವೇಳೆಗೆ ಟೇಕಾಫ್ ಆದರೂ, ಇರಾನ್ ವಾಯುಮಾರ್ಗ ಲಭ್ಯವಿಲ್ಲದ ಕಾರಣ ಮಧ್ಯದಲ್ಲೇ ಮಂಗಳೂರು ಕಡೆಗೆ ಮರಳಿತು.ಮಧ್ಯಾಹ್ನ 3 ಗಂಟೆಯ ಸುಮಾರಿಗೆ ವಿಮಾನವನ್ನು ಅಧಿಕೃತವಾಗಿ ರದ್ದುಗೊಳಿಸಲಾಯಿತು. 174 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಸುರಕ್ಷಿತವಾಗಿ ಇಳಿದರು.

ದೋಹಾ ವಿಮಾನ ಮುಂಬೈಗೆ ಡೈವರ್ಟ್

ಮಂಗಳೂರಿನಿಂದ ದೋಹಾಗೆ ತೆರಳುತ್ತಿದ್ದ IX 821 ವಿಮಾನವನ್ನು ತುರ್ತಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದೆ. ವಾಯುಮಾರ್ಗ ಬದಲಾವಣೆ ಮತ್ತು ಇಂಧನ ನಿರ್ವಹಣೆಯ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.ಇದಲ್ಲದೆ, ಇಂಡಿಗೋ ಸಂಸ್ಥೆಯ 6E 1467 (ಮಂಗಳೂರು–ದುಬೈ) ವಿಮಾನವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ರದ್ದಾದ ಪ್ರಮುಖ ವಿಮಾನಗಳ ಪಟ್ಟಿ

ಮಂಗಳೂರಿನಿಂದ ಹೊರಡಬೇಕಿದ್ದ ವಿಮಾನಗಳು:
IX 847 (ದಮ್ಮಾಮ್)
IX 813 (ದುಬೈ)
IX 851 (ಕುವೈತ್)
IX 815 (ಅಬುಧಾಬಿ)

ಗಲ್ಫ್‌ನಿಂದ ಮಂಗಳೂರಿಗೆ ಬರಬೇಕಿದ್ದ ವಿಮಾನಗಳು
IX 822 (ದೋಹಾ–ಮಂಗಳೂರು)
IX 832 (ದುಬೈ–ಮಂಗಳೂರು)

ಪ್ರಯಾಣಿಕರ ಪರದಾಟ
ಗಲ್ಫ್ ರಾಷ್ಟ್ರಗಳಿಗೆ ತೆರಳಲು ಸಜ್ಜಾಗಿದ್ದ ನೂರಾರು ಪ್ರಯಾಣಿಕರು ಅನಿಶ್ಚಿತತೆಯಲ್ಲಿ ಸಿಲುಕಿದ್ದಾರೆ. ವೀಸಾ ಅವಧಿ ಮುಗಿಯುವ ಹಂತದಲ್ಲಿರುವವರು ಹಾಗೂ ತುರ್ತು ಕೆಲಸಗಳಿಗಾಗಿ ತೆರಳಬೇಕಿದ್ದವರು ಆತಂಕ ವ್ಯಕ್ತಪಡಿಸಿದ್ದಾರೆ.ವಿಮಾನ ಸಂಚಾರ ಸಹಜ ಸ್ಥಿತಿಗೆ ಮರಳಲು ಯುದ್ಧ ಪರಿಸ್ಥಿತಿ ಶಮನವಾಗಬೇಕಿದೆ ಎಂದು ವಿಮಾನ ನಿಲ್ದಾಣ ಮೂಲಗಳು ಸೂಚಿಸಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯ ಆಧಾರದಲ್ಲಿ ವಿಮಾನ ಸೇವೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಏನಿದು ಯುದ್ಧ ಪರಿಸ್ಥಿತಿ?

ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಕ್ಷಿಪಣಿ ದಾಳಿ, ಪ್ರತಿದಾಳಿ ಆರೋಪಗಳು ಹೆಚ್ಚಾಗಿವೆ. ಪರಸ್ಪರ ಆರೋಪ–ಪ್ರತ್ಯಾರೋಪಗಳ ನಡುವೆ ಭದ್ರತಾ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಇರಾನ್ ತನ್ನ ವಾಯುಪ್ರದೇಶವನ್ನು ನಾಗರಿಕ ವಿಮಾನ ಸಂಚಾರಕ್ಕೆ ಮುಚ್ಚಿದೆ.ಭಾರತದಿಂದ ಮಧ್ಯಪ್ರಾಚ್ಯ ದೇಶಗಳಿಗೆ ತೆರಳುವ ಬಹುತೇಕ ವಿಮಾನಗಳು ಇರಾನ್ ವಾಯುಮಾರ್ಗವನ್ನು ಬಳಸುತ್ತವೆ. ಈ ಮಾರ್ಗ ಬಂದ್ ಆಗಿರುವುದರಿಂದ ವಿಮಾನಯಾನ ಸಂಸ್ಥೆಗಳು ದೀರ್ಘ ಪರ್ಯಾಯ ಮಾರ್ಗಗಳನ್ನು ಪರಿಗಣಿಸಬೇಕಾಗಿದೆ. ಆದರೆ ಆ ಮಾರ್ಗಗಳಿಗೆ ಹೆಚ್ಚಿನ ಇಂಧನ, ಹೆಚ್ಚುವರಿ ಸಮಯ ಮತ್ತು ಕಾರ್ಯಾಚರಣಾ ವೆಚ್ಚ ಬೇಕಾಗಿರುವುದರಿಂದ ಅನೇಕ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ವೆನೆಜುವೆಲಾಕ್ಕೆ ಸ್ವಯಂಘೋಷಿತ ಅಧ್ಯಕ್ಷ! ಅಷ್ಟಕ್ಕೂ ಅಮೆರಿಕ ಅಧ್ಯಕ್ಷರಿಗೆ ಬೇಕಾಗಿರುವುದೇನು ಎಂದು ಪ್ರಶ್ನಿಸಿದ ನೆಟ್ಟಿಗರು!!

ವಾಷಿಂಗ್ಟನ್: ವೆನೆಜುವೆಲಾ ಅಧ್ಯಕ್ಷ ಮಡುರೊ ಅವರನ್ನು ಅಮೆರಿಕ ಅಪಹರಿಸಿ ಬಂಧಿಸಿದ್ದೇ ವಿಶ್ವಕ್ಕೆ…

“ನನ್ನ ಕುಟುಂಬ ಸರ್ವನಾಶ, ನಾನೂ ಸತ್ತಿದ್ರೆ ಚೆನ್ನಾಗಿತ್ತು, ಯಾರನ್ನು ಬಿಡಲ್ಲ”: ಉಗ್ರ ಮಸೂದ್ ಅಜ್ಹರ್ ಕಣ್ಣೀರು!

ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್‌ನ ಪ್ರಮುಖ ನೆಲೆ ಮರ್ಕಜ್ ಸುಭಾನ್ ಅಲ್ಲಾ…