ವಿದೇಶ

ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಕೀನ್ಯಾದ ಯುವ ನಾಯಕ

ಈ ಸುದ್ದಿಯನ್ನು ಶೇರ್ ಮಾಡಿ

ಕೀನ್ಯಾ: ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಕೀನ್ಯಾದ ಯುವ ನಾಯಕರೊಬ್ಬರು ಪ್ರಮಾಣವಚನ ಸ್ವೀಕರಿಸಿದ್ದು, ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.ಕೀನ್ಯಾದ ಈ ಯುವ ನಾಯಕನ ಹೆಸರು ಕ್ಯಾಲೆಬ್. ಮೊಂಬಾಸಾದ ಕೌಂಟಿಯಲ್ಲಿರುವ ವಿಧಾನಸಭೆಯಲ್ಲಿ ಈ ಘಟನೆ ನಡೆದಿದೆ. ಮೊಂಬಾಸಾ ಕೌಂಟಿಯ ಚಂಗಮ್ವೆ ಕ್ಷೇತ್ರವನ್ನು ಪ್ರತಿನಿಧಿಸುವ ಯುವ ಶಾಸಕ ಕ್ಯಾಲೆಬ್ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ.

“ಈ ನಡೆ ನಾಟಕೀಯವಲ್ಲ, ಪ್ರಚಾರಕ್ಕೂ ಅಲ್ಲ. ಆ ಭಾವ ಅವರ ಹೃದಯಲ್ಲಿ ಹುಟ್ಟಿಕೊಂಡಿರುವುದು, ಅದೇ ಸತ್ಯ, ಹಾಗೂ ಇದು ಉದ್ದೇಶ ಪೂರ್ವಕ ನಡೆ”. ಸಾರ್ವಜನಿಕ ಹುದ್ದೆಯು ಹೆಚ್ಚಾಗಿ ಪ್ರಬಲ ಧಾರ್ಮಿಕ ಸಂಪ್ರದಾಯಗಳೊಂದಿಗೆ ಹೆಣೆದುಕೊಂಡಿರುವ ರಾಷ್ಟ್ರದಲ್ಲಿ, ಭಗವದ್ಗೀತೆಯ ಮೇಲೆ ಪ್ರಮಾಣ ಮಾಡುವ ಕ್ಯಾಲೆಬ್ ಅವರ ನಿರ್ಧಾರವು ಹೊಸ ಭರವಸೆಯನ್ನು ಹುಟ್ಟುಹಾಕಿದೆ ಎಂದು ಇಸ್ಕಾನ್‌ನ ಓಂಕಾರ ಮುಕುಂದ ದಾಸ್ ತಿಳಿಸಿದ್ದಾರೆ.

ಕ್ಯಾಲೆಬ್ ಅವರು ಹರೇ ಕೃಷ್ಣ ಸಮುದಾಯದಲ್ಲಿರುವ ಭಕ್ತ. ಅವರ ಅಣ್ಣನ ಮೂಲಕ ಇಸ್ಕಾನ್‌ಗೆ ಸೇರಿಕೊಂಡರು. ಮೊಂಬಾಸಾದ ವಿದ್ಯಾರ್ಥಿಗಳಲ್ಲಿ ವೈಷ್ಣವ ಸಂಸ್ಕೃತಿಯನ್ನು ಹರಡಲು 2021ರಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯ ಆಧಾರಿತ ಉಪಕ್ರಮವಾದ ದಿ ಬೆಟರ್ ಯು ಕ್ಲಬ್‌ನ ಅಧ್ಯಕ್ಷರಾಗಿ, ಕ್ಯಾಲೆಬ್ ಕ್ಲಬ್ ಅನ್ನು 180 ಸದಸ್ಯರನ್ನು ಬೆಳೆಸಲು ಅವರು ಸಹಕರಿಸಿದ್ದಾರೆ.

ಧಾರ್ಮಿಕ ವೈವಿಧ್ಯತೆಯ ನಡುವೆ ತಮ್ಮ ವೈಯಕ್ತಿಕ ನಂಬಿಕೆಯನ್ನು ಗೌರವಪೂರ್ವಕವಾಗಿ ವ್ಯಕ್ತಪಡಿಸಿದ ಕ್ಯಾಲೆಬ್ ಅವರ ಈ ಕ್ರಮವು ಕೇವಲ ಪ್ರಮಾಣವಚನ ಕ್ಷಣವಲ್ಲ, ಸಹಿಷ್ಣುತೆ ಮತ್ತು ಆತ್ಮೀಯ ಸ್ವಾತಂತ್ರ್ಯದ ಸಂದೇಶವಾಗಿ ಗಮನ ಸೆಳೆದಿದೆ.

 

 


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ವೆನೆಜುವೆಲಾಕ್ಕೆ ಸ್ವಯಂಘೋಷಿತ ಅಧ್ಯಕ್ಷ! ಅಷ್ಟಕ್ಕೂ ಅಮೆರಿಕ ಅಧ್ಯಕ್ಷರಿಗೆ ಬೇಕಾಗಿರುವುದೇನು ಎಂದು ಪ್ರಶ್ನಿಸಿದ ನೆಟ್ಟಿಗರು!!

ವಾಷಿಂಗ್ಟನ್: ವೆನೆಜುವೆಲಾ ಅಧ್ಯಕ್ಷ ಮಡುರೊ ಅವರನ್ನು ಅಮೆರಿಕ ಅಪಹರಿಸಿ ಬಂಧಿಸಿದ್ದೇ ವಿಶ್ವಕ್ಕೆ…

“ನನ್ನ ಕುಟುಂಬ ಸರ್ವನಾಶ, ನಾನೂ ಸತ್ತಿದ್ರೆ ಚೆನ್ನಾಗಿತ್ತು, ಯಾರನ್ನು ಬಿಡಲ್ಲ”: ಉಗ್ರ ಮಸೂದ್ ಅಜ್ಹರ್ ಕಣ್ಣೀರು!

ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್‌ನ ಪ್ರಮುಖ ನೆಲೆ ಮರ್ಕಜ್ ಸುಭಾನ್ ಅಲ್ಲಾ…