ಆರೋಗ್ಯ

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್‌ ದೃಢ!!

ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣ ಪುಣೆಯ ಎನ್‌ಐವಿ ಲ್ಯಾಬ್‌ನಲ್ಲಿ ಸೋಂಕು ದೃಢಪಟ್ಟಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ಪುಣೆಯ ಎನ್‌ಐವಿ ಲ್ಯಾಬ್‌ನಲ್ಲಿ ಸೋಂಕು ದೃಢಪಟ್ಟಿದ್ದು, ಕಳೆದ 14 ವರ್ಷಗಳಿಂದ ದುಬೈನಲ್ಲಿ ವಾಸವಿದ್ದ ಸೋಂಕಿತ, ಇತ್ತೀಚೆಗೆ ಅಂದರೆ ಜನವರಿ 17ರಂದು ಮಂಗಳೂರಿಗೆ ಭೇಟಿ ನೀಡಿದ್ದರು.

akshaya college

40 ವರ್ಷದ ವ್ಯಕ್ತಿಯಲ್ಲಿ ಜ್ವರ, ಗುಳ್ಳೆ ಕಾಣಿಸಿಕೊಂಡಿತ್ತು. ತಕ್ಷಣ ಐಸೋಲೆಟ್ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವ್ಯಕ್ತಿಯ ಸ್ಯಾಂಪಲ್ಲು ಬೆಂಗಳೂರು ಮೆಡಿಕಲ್ ಕಾಲೇಜು ಹಾಗೂ ಪುಣೆಯ ಎನ್‌ಐವಿ ಲ್ಯಾಬ್‌ಗೆ ರವಾನಿಸಲಾಗಿತ್ತು. ಇದೀಗ ಎನ್‌ಐವಿ ಲ್ಯಾಬ್‌ ರಿಪೋರ್ಟ್‌ನಲ್ಲಿ ಮಂಕಿಪಾಕ್ಸ್ ಸೋಂಕು ದೃಢ ಪಟ್ಟಿದೆ.

ಸೋಂಕಿತನ ಆರೋಗ್ಯ ಸ್ಥಿರವಾಗಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಲಿದ್ದಾರೆ. ಇನ್ನು ಏರ್‌ಪೋರ್ಟ್‌ನಲ್ಲಿ ಸೋಂಕಿತ ಪತಿಯನ್ನು ನೋಡಲು ಬಂದಿದ್ದ ಪತ್ನಿಯನ್ನು ಐಸೋಲೇಷನ್‌ನಲ್ಲಿರಲು ಸೂಚನೆ ನೀಡಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜಿಲ್ಲಾಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್!! ಮೊಬೈಲ್ ಬೆಳಕಲ್ಲೇ ಹೆರಿಗೆ ಮಾಡಿಸಿದ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ.!!

ಆಸ್ಪತ್ರೆಯಲ್ಲಿ ಮಂಗಳವಾರ ಇಡೀ ರಾತ್ರಿ ಏಕಾಏಕಿ ವಿದ್ಯುತ್‌ ಕೈ ಕೊಟ್ಟ ಪರಿಣಾಮ ವೈದ್ಯರು ಮೊಬೈಲ್…