ಆರೋಗ್ಯ

ಹಕ್ಕಿ ಜ್ವರ ಆತಂಕ: ಭಾರತದ ಕೋಳಿ ಮಾಂಸ, ಮೊಟ್ಟೆ ಆಮದಿಗೆ ಸೌದಿ ನಿಷೇಧ

GL

ಈ ಸುದ್ದಿಯನ್ನು ಶೇರ್ ಮಾಡಿ

ರಿಯಾಧ್:  ಹಕ್ಕಿ ಜ್ವರ ಸೇರಿದಂತೆ ವಿವಿಧ ಪ್ರಾಣಿಜನ್ಯ ರೋಗಗಳ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಆಮದು ಮಾಡಿಕೊಳ್ಳುವುದನ್ನು ಸೌದಿ ಆಡಳಿತ ನಿಷೇಧಿಸಿದೆ. ಸೌದಿಯ ಆಹಾರ ಮತ್ತು ಔಷಧ ಪ್ರಾಧಿಕಾರವಾದ ಸೌದಿ ಅರೇಬಿಯಾದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ ಈ ಕುರಿತು ಅಧಿಕೃತ ಪ್ರಕಟಣೆ ನೀಡಿದೆ.

chennai-shopping
maithri

ಸ್ಥಳೀಯ ಮಾರುಕಟ್ಟೆಯಲ್ಲಿ ಆಹಾರ ಸುರಕ್ಷತೆ ಖಚಿತಪಡಿಸಿಕೊಳ್ಳುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.ಭಾರತದ ಜೊತೆಗೆ ಚೀನಾ, ಬಾಂಗ್ಲಾದೇಶ, ಇಂಡೋನೇಷ್ಯಾ, ಇರಾನ್, ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಹಲವು ದೇಶಗಳಿಂದ ಪೂರೈಕೆಯಾಗುವ ಕೋಳಿ ಮಾಂಸ ಮತ್ತು ಮೊಟ್ಟೆಗಳಿಗೆ ಸೌದಿಯಲ್ಲಿ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಜಾಗತಿಕವಾಗಿ ಹಕ್ಕಿ ಜ್ವರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 40 ದೇಶಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್ ಸೇರಿದಂತೆ 16 ದೇಶಗಳ ಕೆಲವು ನಿರ್ದಿಷ್ಟ ಪ್ರದೇಶಗಳಿಂದ ಬರುವ ಉತ್ಪನ್ನಗಳಿಗೆ ಮಾತ್ರ ಭಾಗಶಃ ನಿರ್ಬಂಧ ಜಾರಿಯಾಗಿದೆ.

ಭಾರತದಿಂದ ಸೌದಿ ಅರೇಬಿಯಾಗೆ ಕೋಳಿ ಮಾಂಸ ಮತ್ತು ಮೊಟ್ಟೆಗಳ ರಫ್ತು ಪ್ರಮಾಣ ಹೆಚ್ಚು ಇಲ್ಲ. 2024ರಲ್ಲಿ ಡೈರಿ ಉತ್ಪನ್ನಗಳು, ಮೊಟ್ಟೆ, ಜೇನು ಸೇರಿದಂತೆ ವಿವಿಧ ಆಹಾರ ವಸ್ತುಗಳ ಒಟ್ಟು ರಫ್ತು ಮೌಲ್ಯ ಸುಮಾರು 64 ಮಿಲಿಯನ್ ಡಾಲರ್ (ಸುಮಾರು 500 ಕೋಟಿ ರೂ.) ಆಗಿದೆ. ಇದರಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಗಳ ಪಾಲು ಇನ್ನೂ ಕಡಿಮೆ. ಹೀಗಾಗಿ ಸೌದಿಯ ಈ ನಿಷೇಧದಿಂದ ಭಾರತಕ್ಕೆ ಸೀಮಿತ ಮಟ್ಟದ ಆರ್ಥಿಕ ಪರಿಣಾಮ ಮಾತ್ರ ಎದುರಾಗುವ ಸಾಧ್ಯತೆ ಇದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಏ. 11: ಬೆಳ್ಳಾರೆ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಮಧುಮೇಹ, ಥೈರಾಯ್ಡ್, ರಕ್ತದೊತ್ತಡ ಉಚಿತ ತಪಾಸಣಾ ಶಿಬಿರ

ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಬೆಳ್ಳಾರೆ ಶಾಖೆಯಲ್ಲಿ ಏ. 11ರಂದು ಮಧುಮೇಹ, ಥೈರಾಯ್ಡ್,…