ಆರೋಗ್ಯ

ದ.ಕ. – ಉಡುಪಿ ಜಿಲ್ಲೆಯಲ್ಲಿ ಕುಷ್ಠರೋಗ ಏರಿಕೆ: ಆರು ತಿಂಗಳಲ್ಲಿ 439 ಮಂದಿಗೆ ಸೋಂಕು ಪತ್ತೆ!

GL

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಒಟ್ಟು 439 ಮಂದಿಯಲ್ಲಿ ಕುಷ್ಠರೋಗ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

chennai-shopping
maithri

ಈ ಪ್ರಕರಣಗಳಲ್ಲಿ 363 ಮಂದಿ ಮಲ್ಟಿಬ್ಯಾಸಿಲ್ಲರಿ (ಎರಡನೇ ಹಂತ) ಹಂತಕ್ಕೆ ಸೇರಿದವರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಮಾಹಿತಿ ತಿಳಿಸಿದೆ. ಕುಷ್ಠರೋಗವು ಸಾಮಾನ್ಯವಾಗಿ ಮೂರು ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ 1ರಿಂದ 5 ಮಚ್ಚೆಗಳು ಕಾಣಿಸಿಕೊಂಡು ಒಂದು ನರಕ್ಕೆ ಮಾತ್ರ ಸೋಂಕು ತಗುಲಿರುವ ಸ್ಥಿತಿಯನ್ನು ಪಾಸಿಬ್ಯಾಸಿಲ್ಲರಿ (ಪ್ರಥಮ ಹಂತ) ಎಂದು ಕರೆಯಲಾಗುತ್ತದೆ. ಆದರೆ, ದೇಹದಲ್ಲಿ 6ಕ್ಕಿಂತ ಹೆಚ್ಚು ಮಚ್ಚೆಗಳು ಉಂಟಾಗಿ ಒಂದಕ್ಕಿಂತ ಹೆಚ್ಚು ನರಗಳಿಗೆ ಸೋಂಕು ತಗುಲಿದರೆ ಅದನ್ನು ಮಲ್ಟಿಬ್ಯಾಸಿಲ್ಲರಿ (ಎರಡನೇ ಹಂತ) ಕುಷ್ಠರೋಗವೆಂದು ಗುರುತಿಸಲಾಗುತ್ತದೆ.

ಕರಾವಳಿ ಭಾಗದಲ್ಲಿ ಈ ಎರಡನೇ ಹಂತದ ಪ್ರಕರಣಗಳೇ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಕಳೆದ ಆರು ವರ್ಷಗಳ ಅಂಕಿಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿರುವ 295 ಪ್ರಕರಣಗಳಲ್ಲಿ 264 ಪ್ರಕರಣಗಳು ಎರಡನೇ ಹಂತಕ್ಕೆ ಸೇರಿವೆ. ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ 144 ಪ್ರಕರಣಗಳಲ್ಲಿ 99 ಪ್ರಕರಣಗಳು ಮಲ್ಟಿಬ್ಯಾಸಿಲ್ಲರಿ ಹಂತದ್ದಾಗಿವೆ. ದೇಹದಲ್ಲಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕಾಣಿಸಿಕೊಂಡರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ವಹಿಸುವುದರಿಂದ ರೋಗವು ಗಂಭೀರ ಸ್ಥಿತಿಗೆ ತಲುಪುವ ಸಾಧ್ಯತೆ ಹೆಚ್ಚುತ್ತಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಏ. 11: ಬೆಳ್ಳಾರೆ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಮಧುಮೇಹ, ಥೈರಾಯ್ಡ್, ರಕ್ತದೊತ್ತಡ ಉಚಿತ ತಪಾಸಣಾ ಶಿಬಿರ

ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಬೆಳ್ಳಾರೆ ಶಾಖೆಯಲ್ಲಿ ಏ. 11ರಂದು ಮಧುಮೇಹ, ಥೈರಾಯ್ಡ್,…