Gl
ಆರೋಗ್ಯ

5.2 ಕೆಜಿ ತೂಕದ ಶಿಶು ಜನನ!!

GL

ಈ ಸುದ್ದಿಯನ್ನು ಶೇರ್ ಮಾಡಿ

ಅಪರೂಪದಲ್ಲೇ ಅಪರೂಪದ ಪ್ರಕರಣದಲ್ಲಿ ತಾಯಿಯೊಬ್ಬಳು ಬರೊಬ್ಬರಿ 5.2 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದು, ಈ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

core technologies

ಮಧ್ಯಪ್ರದೇಶದ ಜಬಲ್ಪುರದ ರಾಣಿ ದುರ್ಗಾವತಿ ಎಲ್ಲಿನ್ ಆಸ್ಪತ್ರೆಯಲ್ಲಿ ಶುಕ್ರವಾರ ಮಹಿಳೆಯೊಬ್ಬರು 5.2 ಕೆಜಿ ತೂಕದ ಗಂಡು ಮಗುವಿಗೆ ಯಶಸ್ವಿಯಾಗಿ ಜನ್ಮ ನೀಡಿದ್ದಾರೆ.

ಪ್ರಸೂತಿ ತಜ್ಞೆ ಡಾ. ಭಾವನಾ ಮಿಶ್ರಾ ಅವರ ಮೇಲ್ವಿಚಾರಣೆಯಲ್ಲಿ ಸಿಸೇರಿಯನ್ ಮೂಲಕ ಸುರಕ್ಷಿತ ಹೆರಿಗೆ ಮೂಲಕ ಮಗುವನ್ನು ಹೊರಗೆ ತೆಗೆಯಲಾಗಿದೆ.

ಮಗುವಿನ ತೂಕ ನೋಡಿದ ಡಾ. ಭಾವನಾ ಮಿಶ್ರಾ ಅವರೇ ಅಚ್ಚರಿಯಾಗಿದ್ದು, ಅವರು ಇಷ್ಟು ತೂಕದ ನವಜಾತ ಶಿಶುವನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದಾರಂತೆ. ಅದೂ ಕೂಡ ತಾವು ಈ ಅತ್ಯಪರೂಪದ ಹೆರಿಗೆ ಮಾಡಿಸಿದ್ದು ಸಂತಸ ತಂದಿದೆ ಎಂದು ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ, ಜನನದ ಸಮಯದಲ್ಲಿ ಶಿಶುಗಳು 2.5 ರಿಂದ 3 ಕೆಜಿಗಳಷ್ಟು ತೂಕವಿರುತ್ತವೆ. ಈ ಹಾಗಿ ಇದು ಈ ಪ್ರಕರಣವನ್ನು ಅಸಾಧಾರಣ ಅಪರೂಪದ ಪ್ರಕರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಗುವಿನ ಗಾತ್ರಕ್ಕೆ ಸಂಬಂಧಿಸಿದ ಸವಾಲುಗಳ ಹೊರತಾಗಿಯೂ, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts