ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಉದ್ಯೋಗಿನಿ ಯೋಜನೆಯಡಿ ಸಬ್ಸಿಡಿ ಹಾಗೂ ಸಾಲ ಪಡೆಯಬಹುದಾಗಿದೆ.
ಉದ್ಯೋಗಿನಿ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಶೇಕಡಾ 30 ರಷ್ಟು ಸಬ್ಸಿಡಿ ಹಾಗೂ ಗರಿಷ್ಠ 3 ಲಕ್ಷ ರೂ ಗಳವರೆಗೆ ಸಾಲವನ್ನು ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆ ಕಡ್ಡಾಯ.
* 18 ರಿಂದ 55 ವರ್ಷದೊಳಗಿನ ಮಹಿಳೆಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
* ಸಾಲಕ್ಕೆ ಯಾವುದೇ ಗ್ಯಾರಂಟಿ ನೀಡುವ ಅಗತ್ಯವಿಲ್ಲ.
* ಮಹಿಳೆಯ ಕುಟುಂಬದ ಆದಾಯ ರೂ. 1.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ.
* ವಿಧವೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಯಾವುದೇ ಆದಾಯ ಮಿತಿ ಇಲ್ಲ.
* ಈ ಸಾಲಕ್ಕಾಗಿ ನೀವು ಯಾವುದೇ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
* ವಿಧವೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಯಾವುದೇ ಆದಾಯ ಮಿತಿ ಇಲ್ಲ.
ಬೇಕಾಗುವ ಅಗತ್ಯ ದಾಖಲೆಗಳು:
* ಆಧಾರ್ ಕಾರ್ಡ್
* ಬಿಪಿಎಲ್ ಕಾರ್ಡ್
* ಪಾನ್ ಕಾರ್ಡ್
* ಜಾತಿ ಪ್ರಮಾಣಪತ್ರ, ಇತ್ಯಾದಿ
ಈ ಯೋಜನೆ ಅಥವಾ ಯೋಜನೆಗೆ ಅರ್ಜಿದಾರರು ಅಗತ್ಯವಿರುವ ಎಲ್ಲ ದಾಖಲಾತಿಗಳೊಂದಿಗೆ ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡಬಹುದು. ಇಲ್ಲವೇ ಉದ್ಯೋಗಿನಿ ಕಾರ್ಯಕ್ರಮದ ಅಡಿಯಲ್ಲಿ ಸಾಲ ನೀಡುವ ಬ್ಯಾಂಕ್‌ಗಳ ಅಧಿಕೃತ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಆನ್ ಲೈನ್ ನಲ್ಲಿ ಸಾಲದ ಅರ್ಜಿಯನ್ನು ತುಂಬಿ ಸಲ್ಲಿಸಬಹುದಾಗಿದೆ.