ಪುತ್ತೂರು: ಪುತ್ತೂರಿನಲ್ಲಿ ವಿನೂತನ ಪದವಿ ಕೋರ್ಸುಗಳನ್ನು ಪರಿಚಯಿಸಿ ಶೈಕ್ಷಣಿಕ ಕ್ಷೇತ್ರದೊಂದಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲೂ ಹಲವು ಸಾಧನೆ ಮಾಡುತ್ತಿರುವ ಸಂಪ್ಯದ ಅಕ್ಷಯ ಕಾಲೇಜಿನಲ್ಲಿ ಪೆ. 16ರ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 12.30 ರ ವರೆಗೆ “ದಿಕ್ಸೂಚಿ-4” ಕಾರ್ಯಕ್ರಮ ಆಯೋಜಿಸಲಾಗಿದೆ.
ಏನಿದು “ದಿಕ್ಸೂಚಿ”?
ಕಳೆದ 3 ವರ್ಷಗಳಿಂದ ಸಂಸ್ಥೆಯು ಪುತ್ತೂರು ಹಾಗು ಪುತ್ತೂರಿನ ಆಸುಪಾಸಿನ ತಾಲೂಕುಗಳ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪಿ.ಯು.ಸಿ ಬಳಿಕ ಇರುವ ಆಯ್ಕೆ, ವೃತ್ತಿ ಶಿಕ್ಷಣಕ್ಷೇತ್ರದ ಪ್ರಾಮುಖ್ಯತೆ ವಿಷಯಗಳಲ್ಲಿ ಸಮಗ್ರ ರೂಪುರೇಷೆಯನ್ನು ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದೆ.
“ದಿಕ್ಸೂಚಿ-4” ವಿಶೇಷತೆಯೇನು?
ಪ್ರಸ್ತುತ ಆಯೋಜಿಸಿರುವ “ದಿಕ್ಸೂಚಿ-4”ರಲ್ಲಿ ವಿಶೇಷವಾಗಿ ದ್ವಿತೀಯ ಪಿ.ಯು.ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿ ಪರೀಕ್ಷೆಯಲ್ಲಿ ಉತ್ತರಿಸುವ ಬಗೆ, ಪರೀಕ್ಷೆಯಲ್ಲಿ ಸಮಯದ ನಿರ್ವಹಣೆ, ಅತ್ಯುತ್ತಮ ಅಂಕಗಳಿಸುವಲ್ಲಿ ಬೇಕಾದ ಪೂರ್ವಸಿದ್ದತೆ, ವಿಷಯವನ್ನು ಮನನ ಮಾಡಿಕೊಳ್ಳುವ ವಿಧಾನ ಇವೇ ಮೊದಲಾದ ಅತ್ಯುತ್ತಮ ಮತ್ತು ವಿಶೇಷ ಮಾರ್ಗದರ್ಶನ ನೀಡಲಾಗುವುದು. ಖ್ಯಾತ ಸಂಪನ್ಮೂಲ ವ್ಯಕ್ತಿ ರಾಮಕುಂಜ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ ಸತೀಶ್ ಬಿಳಿನೆಲೆ ಅವರು ನೀಡಲಿದ್ದಾರೆ.
ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿಯ ಕಿಟ್ ನೀಡಲಿದ್ದು ಯಾವುದೇ ದಾಖಲಾತಿ ಶುಲ್ಕ ಇರುವುದಿಲ್ಲ ಹಾಗೂ ಮಧ್ಯಾಹ್ನ ಭೋಜನದ ವ್ಯವಸ್ಥೆಯಿದೆ. ಈ ಉತ್ತಮ ಮಾರ್ಗದರ್ಶಿ ಕಾರ್ಯಕ್ರಮದ ಪ್ರಯೋಜನವನ್ನು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಪಡೆದುಕೊಳ್ಳುವಂತೆ ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ- 8088381678, 9141160704