ಪುತ್ತೂರು: ಮೊಬೈಲ್, ಚಲನಚಿತ್ರ ಇತ್ಯಾದಿಗಳನ್ನು ಸಾಕಷ್ಟು ತಲ್ಲೀನರಾಗಿ, ಕುತೂಹಲ ಆಸಕ್ತಿಯಿಂದ ಉತ್ಸಾಹಭರಿತವಾಗಿ ವೀಕ್ಷಿಸುತ್ತೇವೆ. ಆಗ ಯಾರಿಗೂ ಪೋಷಕರ ಸಹಾಯ ಬೇಕಾಗುವುದಿಲ್ಲ. ಅಷ್ಟೇ ಆಸಕ್ತಿಯಿಂದ ಗಣಿತವನ್ನೂ ಕಲಿತರೆ ಅದು ಕರಗತವಾಗಿಬಿಡುತ್ತದೆ. ಆದರೆ ತಲ್ಲೀನತೆ, ಕುತೂಹಲ, ಆಸಕ್ತಿ, ಉತ್ಸಾಹ ಇವುಗಳನ್ನೆಲ್ಲ ಖರೀದಿಸಲು ಸಾಧ್ಯವಾಗುವುದಿಲ್ಲ, ನಾವೇ ಬೆಳೆಸಿಕೊಳ್ಳಬೇಕು ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಗಣಿತ ಶಿಕ್ಷಕಿ ವೀಣಾ ಸರಸ್ವತಿ ಹೇಳಿದರು.
ಅವರು ಸಂಸ್ಥೆಯಲ್ಲಿ ಆಯೋಜಿಸಲಾದ ಅಂತಾರಾಷ್ಟಿçÃಯ ಗಣಿತದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸೋಮವಾರ ಮಾತನಾಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಮಾತನಾಡಿ ಗಣಿತ ಅನ್ನುವುದು ಎಲ್ಲಾ ವಿಷಯಕ್ಕೂ ಅಡಿಪಾಯ ಇದ್ದ ಹಾಗೆ. ನಾವು ಪ್ರಕೃತಿಯಲ್ಲಿ ಗಣಿತವನ್ನು ಗುರುತಿಸದಿರುವುದೇ ಗಣಿತ ಕಷ್ಟವಾಗಲು ಕಾರಣ. ಗಣಿತದ ಮೂಲಧಾತುವಾದ ಮಗ್ಗಿಯನ್ನು ಗಟ್ಟಿಮಾಡಿಕೊಂಡಲ್ಲಿ ಗಣಿತವು ಸುಲಭವೆನಿಸುತ್ತದೆ ಎಂದರು.
ಆರನೇ ತರಗತಿಯ ವಿದ್ಯಾರ್ಥಿನಿ ಪ್ರಣಮ್ಯ ಅವರು ರಾಮಾನುಜನ್ ಕುರಿತಾಗಿ ಮಾತನಾಡಿದರು. ನಾಲ್ಕನೇಯ ತರಗತಿಯ ವಿದ್ಯಾರ್ಥಿ ಅನ್ಶ್ ಕಾಮತ್ ನಿಜ ಜೀವನದಲ್ಲಿನ ಗಣಿತದ ಉಪಯೋಗವನ್ನು ತಿಳಿಸಿಕೊಟ್ಟರು. ವಿದ್ಯಾಭಾರತಿಯ ರಾಷ್ಟಿçÃಯ ಮಟ್ಟದ ಗಣಿತ ಮಾದರಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ೯ನೇ ತರಗತಿಯ ಸಾತ್ವಿಕ್ ಜಿ ಅವರು ತನ್ನ ಮಾದರಿಯನ್ನು ಪ್ರದರ್ಶಿಸಿ ವಿವರಿಸಿದರು.
ವೇದಿಕೆಯಲ್ಲಿ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ಉಪಸ್ಥಿತರಿದ್ದರು.
ಏಳನೆಯ ತರಗತಿಯ ವಿದ್ಯಾರ್ಥಿ ಸಂಹಿತ್ ಸ್ವಾಗತಿಸಿ, ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಐಶಾನೀ ರೈ ವಂದಿಸಿದರು. ಎಂಟನೇ ತರಗತಿ ವಿದ್ಯಾರ್ಥಿನಿ ಪೂರ್ವಿ ವಿ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾಲಯದ ಶಿಕ್ಷಕಿ ಕೃತ್ತಿಕಾ ಸಹಕರಿಸಿದರು.



























