ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇಂಟಿರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ “ಎಲೈಟ್” ಇಂಟಿರಿಯರ್ ಡಿಸೈನ್ ಸಂಘಟನೆ ಹಾಗೂ ಭಾರತ್ ಅಕಾಡಮಿ ಆಫ್ ಲಿಬರಲ್ ಎಜುಕೇಷನ್ (ಬೇಸ್) ಆರಂಭಿಸಿದ ಆಟೋ ಡೆಸ್ಕ್ – 3 ಡಿಎಸ್ ಮ್ಯಾಕ್ಸ್ & 3ಡಿ ರೆಂಡರಿಂಗ್ ವಿಷಯದಲ್ಲಿ ಕಾರ್ಯಾಗಾರ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲ್, ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿಯನ್ನು ನೀಡುವುದರ ಜೊತೆಗೆ ವಿಷಯಗಳನ್ನು ಮನದಟ್ಟು ಮಾಡಲು ಸಹಕಾರಿ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಆಡಳಿತಾಧಿಕಾರಿ ಅರ್ಪಿತ್ ಟಿ.ಎ., ಉಪ ಪ್ರಾಂಶುಪಾಲ ರಕ್ಷಣ ಟಿ.ಆರ್ ಉಪಸ್ಥಿತರಿದ್ದರು.
ಬೇಸ್ ಅಕಾಡಮಿ ಸ್ಥಾಪಕ ನವೀನ್ ಗುರುರಾಜ್ ವಿದ್ಯಾರ್ಥಿಗಳಿಗೆ ಆಟೋ ಡೆಸ್ಕ್ – 3 ಡಿಎಸ್ ಮ್ಯಾಕ್ಸ್ & 3ಡಿ ರೆಂಡರಿಂಗ್ ವಿಷಯದ ಬಗ್ಗೆ ಮಾರ್ಗದರ್ಶನ ನೀಡಿದರು.
ಇಂಟೀರಿಯರ್ ಡಿಸೈನ್ ವಿಭಾಗದ ಮುಖ್ಯಸ್ಥ ರಕ್ಷಣ ಟಿ.ಆರ್. ಕಾರ್ಯಕ್ರಮ ನಿರೂಪಿಸಿದರು. ನಿರ್ವಾಹಕಿ ಸುಧಾ ಜಯರಾಮ್, ಇಂಟಿರಿಯರ್ ಡಿಸೈನ್ ವಿಭಾಗದ ಸಹಪ್ರಾಧ್ಯಾಪಕಿ ಕಾವ್ಯ ಸಹಕರಿಸಿದರು.