ಪುತ್ತೂರು: ಅಮೈ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ 2025-26ನೇ ಶೈಕ್ಷಣಿಕ ಸಾಲಿನ ಮುಖ್ಯಮಂತ್ರಿಯಾಗಿ 5ನೇ ತರಗತಿ ಲಬೀಬಾ, ಉಪ ಮುಖ್ಯಮಂತ್ರಿಯಾಗಿ 4ನೇ ತರಗತಿ ಅಫೀಫಾ ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ 5ನೇ ತರಗತಿಯ ತನ್ವಿತ್, ಸಹಾಯಕರಾಗಿ 3ನೇ ತರಗತಿಯ ಶಮ್ನಾ, ಹಣಕಾಸು ಮಂತ್ರಿಯಾಗಿ 5ನೇ ತರಗತಿಯ ಐನಾ ಸಹಾಯಕರಾಗಿ 3ನೇ ತರಗತಿಯ ಸಹಲ್, ಆರೋಗ್ಯ ಮಂತ್ರಿಯಾಗಿ 5ನೇ ತರಗತಿಯ ಸಿಂಚನ ಸಹಾಯಕರಾಗಿ 2ನೇ ತರಗತಿಯ ಹಾಶಿರ್, ಆಹಾರ ಮಂತ್ರಿಯಾಗಿ 4ನೇ ತರಗತಿಯ ಝಯೀಮ್ ಸಹಾಯಕರಾಗಿ 2ನೇ ತರಗತಿಯ ಶಾನ್ವಿತ್, ಕ್ರೀಡಾ ಮಂತ್ರಿಯಾಗಿ 4ನೇ ತರಗತಿಯ ನೌಶಾದ್ ಸಹಾಯಕರಾಗಿ 4ನೇ ತರಗತಿಯ ಪೂರ್ವಿಕಾ, ರಕ್ಷಣಾ ಮಂತ್ರಿಯಾಗಿ 5ನೇ ತರಗತಿಯ ಸಿದ್ದೀಕ್ ಸಹಾಯಕರಾಗಿ 2ನೇ ತರಗತಿಯ ಮೈಶಾ, ಸ್ವಚ್ಛತಾ ಮಂತ್ರಿಯಾಗಿ 4ನೇ ತರಗತಿಯ ಝಯೀಮ್ ಸಹಾಯಕರಾಗಿ 3ನೇ ತರಗತಿಯ ನಯನ, ಕಾನೂನು ಮಂತ್ರಿಯಾಗಿ 4ನೇ ತರಗತಿಯ ಅಫೀಫಾ, ಗ್ರಂಥಾಲಯ ಮಂತ್ರಿಯಾಗಿ 5ನೇ ತರಗತಿಯ ಶೈಮಾ, ತೋಟಗಾರಿಕೆ ಮಂತ್ರಿಯಾಗಿ 5ನೇ ತರಗತಿಯ ಲಬೀಬಾ ಸಹಾಯಕರಾಗಿ 3ನೇ ತರಗತಿಯ ಆಯಿಝಾ, ವಿರೋಧ ಪಕ್ಷದ ನಾಯಕನಾಗಿ 5ನೇ ತರಗತಿಯ ಸುಹೈಲ್ ಆಯ್ಕೆಯಾದರು.
ಶಿಕ್ಷಕಿ ಶರ್ಮಿಳಾರವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಶಾಲಾ ಮುಖ್ಯಗುರು ಜಗನ್ನಾಥ ಎಸ್ ಪ್ರಮಾಣ ವಚನ ಬೋಧಿಸಿದರು.