Gl jewellers
ಕರಾವಳಿ

ಪ್ರೇತ ಉಚ್ಚಾಟನೆ: ನಗರದ ಪ್ರಮುಖ ರಸ್ತೆ ಬಂದ್ !! 

Karpady sri subhramanya
ಪ್ರೇತ ಉಚ್ಚಾಟನೆಗೆ ನಗರದ ರಸ್ತೆಯನ್ನು ಬಂದ್‌ ಮಾಡಿದಂತಹ ವಿಚಿತ್ರ ಪ್ರಕರಣ ಒಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸದ್ಯ ಪ್ರೇತ ಉಚ್ಚಾಟನೆ ಬ್ಯಾನರ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

SRK Ladders
Akshaya College

ಮಂಗಳೂರು : ಪ್ರೇತ ಉಚ್ಚಾಟನೆಗೆ ನಗರದ ರಸ್ತೆಯನ್ನು

ಬಂದ್‌ ಮಾಡಿದಂತಹ ವಿಚಿತ್ರ ಪ್ರಕರಣ ಒಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸದ್ಯ ಪ್ರೇತ ಉಚ್ಚಾಟನೆ ಬ್ಯಾನರ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Sampya jathre

ಹೌದು, ನಗರದ ಕೊಟ್ಟಾರದಲ್ಲಿರುವ ಮಹಾದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಬಳಿ ರಣಕಾಳಿ ಹಾಗೂ ಬ್ರಹ್ಮರಾಕ್ಷಸ ಅನ್ಯಪ್ರೇತ ಉಚ್ಚಾಟನೆ ಹಿನ್ನೆಲೆ ಕೊಟ್ಟಾರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಾಡದಂತೆ ಸೂಚಿಸಿ ಬ್ಯಾನರ್ ಅಳವಡಿಸಲಾಗಿದೆ.

ಹೀಗಾಗಿ ನಿನ್ನೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 3 ಗಂಟೆಯವರೆಗೆ ಜನರು ಓಡಾಡದಂತೆ ಮನವಿ ಮಾಡಲಾಗಿತ್ತು. ಸದ್ಯ ಪ್ರೇತ ಉಚ್ಚಾಟನೆ ಬ್ಯಾನ‌ರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೈವ ಆರಾಧಕ ಪ್ರಜ್ವಲ್ ಹೇಳಿದ್ದೇನು?

ದೈವಸ್ಥಾನ ಜೀರ್ಣೋದ್ದಾರ ಮಾಡುವ ಸಲುವಾಗಿ ತಾಂಬೂಲ ಪ್ರಶ್ನೆ ಕೇಳಲಾಯಿತು. ಆಗ ಈ ಪ್ರದೇಶದಲ್ಲಿ ರಾಕ್ಷಸ, ಪ್ರೇತಾತ್ಮಗಳಿರುವುದು ಕಂಡು ಬಂದಿತ್ತು. ದೈವಸ್ಥಾನದ ಜೀರ್ಣೋದ್ಧಾರಕ್ಕೂ ಮೊದಲು ಈ ಪ್ರೇತಾತ್ಮಗಳ ಉಚ್ಚಾಟನೆ ಆಗಬೇಕು ಎಂದು ಬಂದಿತ್ತು. ಅಮವಾಸ್ಯೆ ರಾತ್ರಿ 12 ಗಂಟೆ ವೇಳೆಗೆ ಪ್ರೇತಾತ್ಮ ಉಚ್ಚಾಟಣೆ ನಡೆಯಲಿದೆ. ಆಗ ಸುತ್ತಮುತ್ತ ಉಚ್ಚಾಟನೆ ವಿಧಿ ವಿಧಾನ ನಡೆಯುತ್ತೆ ಎಂದು ಹೇಳಿದ್ದರು.

ಅಲ್ಲದೆ ಮಂಗಳೂರು ಪೊಲೀಸ್ ಇಲಾಖೆಗೂ ಆಯೋಜಕರು ಮನವಿ ಮಾಡಲಾಗಿತ್ತು. ಸುಮಾರು 3-4 ಕಿಮೀ ರಸ್ತೆಯಲ್ಲಿ ವಾಹನ ಹಾಗೂ ಜನ ಸಂಚಾರವನ್ನು ನಿಷೇಧಿಸಿದ್ದು, ಅಂದರೆ ಸುಮಾರು ಐದು ಗಂಟೆಗಳ ಕಾಲ ಮಂಗಳೂರಿನ ಪ್ರಮುಖ ರಸ್ತೆ ಕೊಟ್ಟಾರ ಬಂದ್‌ ಆಗಿತ್ತು ಎನ್ನಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಕನ್ನಡಕ್ಕೆ ಮತ್ತೊಂದು ಏಟು ನೀಡಿದ ಕೇರಳ ಸರಕಾರ!!ಕಾಸರಗೋಡು ಕನ್ನಡಿಗರ ಮೇಲಿನ ದಬ್ಬಾಳಿಕೆ ಮುಂದುವರಿಕೆ!

ಕನ್ನಡಿಗರ ಮೇಲೆ ಕೇರಳ ಸರಕಾರದ ದಬ್ಬಾಳಿಕೆ ಮುಂದುವರಿದಿದ್ದು, ಈಗ ಕನ್ನಡಿಗರಿಂದ ಕನ್ನಡಿಗರಿಗೆ…

ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಪುತ್ತೂರು  ಆದರ್ಶ ಆಸ್ಪತ್ರೆ ಬಳಿ ನಿವಾಸಿ ಗುರುಪ್ರಸಾದ್ ದೇವಾಡಿಗ…

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…