Gl jewellers
ಕರಾವಳಿ

ರಸ್ತೆ ಅಗಲೀಕರಣ  ಮೂರು ಅಂತಸ್ತಿನ  ಕಟ್ಟಡವೇ ಸ್ಥಳಾಂತರ..!!

Karpady sri subhramanya
ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮೂರಂತಸ್ತಿನ ಕಟ್ಟಡವೊಂದನ್ನು ಸುಮಾರು 20 ಅಡಿಗಳಷ್ಟು ಹಿಂದಕ್ಕೆ ತಳ್ಳುವ ಸಾಹಸ ನಡೆಯುತ್ತಿದೆ. ಹಿರಿಯೂರು ನಗರದ ಅವಧಾನಿ ಬಡಾವಣೆ ಮುಂಭಾಗದ ಹೋಟೆಲ್ ಕಟ್ಟಡವನ್ನು ಹಿಂದಕ್ಕೆ ತಳ್ಳಿ ಯಥಾಸ್ಥಿತಿಯಲ್ಲಿಯೇ ಕೂರಿಸುವ ಕಾಮಗಾರಿಯ ಮೊದಲ ಭಾಗವಾಗಿ ಸೋಮವಾರ ಸುಮಾರು 5 ಅಡಿಯಷ್ಟು ಹಿಂದಕ್ಕೆ ಜರುಗಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

SRK Ladders
Akshaya College

ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ

ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮೂರಂತಸ್ತಿನ ಕಟ್ಟಡವೊಂದನ್ನು ಸುಮಾರು 20 ಅಡಿಗಳಷ್ಟು ಹಿಂದಕ್ಕೆ ತಳ್ಳುವ ಸಾಹಸ ನಡೆಯುತ್ತಿದೆ. ಹಿರಿಯೂರು ನಗರದ ಅವಧಾನಿ ಬಡಾವಣೆ ಮುಂಭಾಗದ ಹೋಟೆಲ್ ಕಟ್ಟಡವನ್ನು ಹಿಂದಕ್ಕೆ ತಳ್ಳಿ ಯಥಾಸ್ಥಿತಿಯಲ್ಲಿಯೇ ಕೂರಿಸುವ ಕಾಮಗಾರಿಯ ಮೊದಲ ಭಾಗವಾಗಿ ಸೋಮವಾರ ಸುಮಾರು 5 ಅಡಿಯಷ್ಟು ಹಿಂದಕ್ಕೆ ಜರುಗಿಸಲಾಗಿದೆ.

Sampya jathre

ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಅಂಚಿನಲ್ಲಿದ್ದ ಕೆಲವು ಕಟ್ಟಡಗಳನ್ನು ತೆರವುಗೊಳಿಸಲು ಆದೇಶಿಸಲಾಗಿದೆ. ಈ ಹೋಟೆಲ್ ಕಟ್ಟಡದ ಮುಂಭಾಗವನ್ನು ತೆರವು ಮಾಡಬೇಕಿತ್ತು. ಕಟ್ಟಡದ ಅರ್ಧ ಭಾಗ ರಸ್ತೆ ವಿಸ್ತರಣೆಗೆ ಹೋಗುವ ಸ್ಥಿತಿಯಲ್ಲಿ ಇದ್ದದ್ದರಿಂದ ಕಟ್ಟಡ ಮಾಲೀಕರು ಹೋಟೆಲನ್ನು ಹಿಂದಿನ ಖಾಲಿ ಜಾಗಕ್ಕೆ ಕಟ್ಟಡ ಜರಗಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ.

ತಮಿಳುನಾಡಿನ ಹೈಡ್ರಾಲಿಕ್ ಜಾಕ್ ಬಳಸಿ ಕಟ್ಟಡ ತಳ್ಳುವ ಪಾರಮೌಂಟ್ ಕಂಪನಿ 20 ಅಡಿಯಷ್ಟು ಕಟ್ಟಡವನ್ನು ಹಿಂದೆ ತಳ್ಳುವ ಕಾಮಗಾರಿಯನ್ನು 22 ಲಕ್ಷ ರೂ.ಗೆ ವಹಿಸಿಕೊಂಡಿದೆ. 37 ಅಡಿ ಎತ್ತರ ಹಾಗೂ 37 ಅಡಿ ಅಗಲದ ಮೂರಂತಸ್ತಿನ ಕಟ್ಟಡವನ್ನು 400ಕ್ಕೂ ಹೆಚ್ಚು ಹೈಡ್ರಾಲಿಕ್ ಜಾಕ್ ಬಳಸಿಕೊಂಡು ಹಿಂದಕ್ಕೆ ಸ್ಥಳಾಂತರಿಸುವ ಕಾಮಗಾರಿ ಭರದಿಂದ ಸಾಗಿದೆ.

ಕಟ್ಟಡ ಸರಿಸುವ ಕೆಲಸ ಹಿರಿಯೂರು ನಗರಕ್ಕೆ ಹೊಸದೇನು ಅಲ್ಲ. ಈಗಾಗಲೇ ಅಕ್ಷಯ ಪುಡ್ ಪಾರ್ಕ್‌ ಕಟ್ಟಡವನ್ನು 100 ಅಡಿಯಷ್ಟು ಹಿಂದೆ ಸರಿಸಲಾಗಿತ್ತು. ಶ್ರೀನಿವಾಸ ಲಾಡ್ಜ್, ವೇದಾವತಿ ನಗರದ ಮಸೀದಿ ಹಾಗೂ ಪುಷ್ಪಾಂಜಲಿ ಚಿತ್ರಮಂದಿರದ ಬಳಿಯ ಕಟ್ಟಡಗಳನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಇದೀಗ ಉದಯ ಹೋಟೆಲ್ ಕಟ್ಟಡವನ್ನು ಪ್ರತಿದಿನ 4 ರಿಂದ 5 ಅಡಿ ತಳ್ಳುವ ಗುರಿ ಇಟ್ಟುಕೊಂಡು ಕೆಲಸ ಆರಂಭಿಸಿದ್ದಾರೆ.

ಹೈಡ್ರಾಲಿಕ್ ಜಾಕ್, ಕಟ್ಟೆತುಂಡುಗಳು (ಮರದ ತುಂಡುಗಳು), ಆಂಗ್ಲರ್, ಕಬ್ಬಿಣದ ಶೀಟ್, ಕಬ್ಬಿಣದ ಲೀವರ್ ಹಾಗೂ ಬೇಕಾದ ಇನ್ನಿತರ ವಸ್ತುಗಳನ್ನು ಬಳಸಿ ಕಟ್ಟಡವನ್ನು ಇಂಚಿಂಚೇ ಜರಗಿಸಲಾಗುತ್ತದೆ. ಮೊದಲು ಕಟ್ಟಡದ ಒಳಭಾಗದಲ್ಲಿರುವ ಮಣ್ಣನ್ನು ಹೊರಗಡೆ ತೆಗೆದು ಹಾಕಲಾಗುತ್ತದೆ. ಬಳಿಕ ಮಧ್ಯ ಭಾಗದಲ್ಲಿರುವ ಪಿಲ್ಲರ್ ಕಂಬಗಳಿಗೆ ಜಾಕ್ ಕೂರಿಸುತ್ತಾರೆ. ನಂತರ ತಳಪಾಯದ ಸುತ್ತಲಿನ ಮಣ್ಣು ತೆಗೆದು ಕಟ್ಟಡಕ್ಕೆ ಇಂತಿಷ್ಟು ದೂರಕ್ಕೆ ಎಂಬಂತೆ ಕಬ್ಬಿಣದ ಆಂಗ್ಲರ್ ಹಾಕಿ ಅದರ ಮೇಲೆ ಒಂದೊಂದೇ ಜಾಕ್ ಅಳವಡಿಸಲಾಗುತ್ತದೆ. ಕಟ್ಟಡದ ಕಿಟಕಿ, ಬಾಗಿಲು ಸೇರಿದಂತೆ ಖಾಲಿ ಜಾಗಗಳಿಗೆ ಇಟ್ಟಿಗೆಗಳಿಂದ ಗೋಡೆ ನಿರ್ಮಾಣ ಮಾಡಿಕೊಳ್ಳುತ್ತಾರೆ. ಕಟ್ಟಡ ತಳ್ಳುವ ಜಾಗದಲ್ಲಿ ಹೊಸ ತಳಪಾಯ ಸಿದ್ದಪಡಿಸಿಕೊಳ್ಳುತ್ತಾರೆ. ಬಿಲ್ಡಿಂಗ್ ಹಿಂಭಾಗದಲ್ಲಿ ಕಬ್ಬಿಣದ ಆಂಗ್ಲರ್‌ಗಳೊಂದಿಗೆ ಗಾಲಿ ಚಕ್ರದ ಜಾಕ್ ಅಳವಡಿಸಿಕೊಂಡು ಕಬ್ಬಿಣದ ಲೀವರ್ ತಿರುಗಿಸುವ ಮೂಲಕ ಕಟ್ಟಡವನ್ನು ಇಂಚು ಇಂಚಾಗಿ ಸರಿಸುತ್ತಾ ಹೋಗುತ್ತಾರೆ. ಇದು ಕಟ್ಟಡ ತೆರವು ಮಾಡಿಕೊಂಡು ಮತ್ತೆ ಕಟ್ಟಿಸಿಕೊಳ್ಳುವುದಕ್ಕಿಂತ ಕಡಿಮೆ ಖರ್ಚಿನ ಕೆಲಸ ಎನ್ನಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಕನ್ನಡಕ್ಕೆ ಮತ್ತೊಂದು ಏಟು ನೀಡಿದ ಕೇರಳ ಸರಕಾರ!!ಕಾಸರಗೋಡು ಕನ್ನಡಿಗರ ಮೇಲಿನ ದಬ್ಬಾಳಿಕೆ ಮುಂದುವರಿಕೆ!

ಕನ್ನಡಿಗರ ಮೇಲೆ ಕೇರಳ ಸರಕಾರದ ದಬ್ಬಾಳಿಕೆ ಮುಂದುವರಿದಿದ್ದು, ಈಗ ಕನ್ನಡಿಗರಿಂದ ಕನ್ನಡಿಗರಿಗೆ…

ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಪುತ್ತೂರು  ಆದರ್ಶ ಆಸ್ಪತ್ರೆ ಬಳಿ ನಿವಾಸಿ ಗುರುಪ್ರಸಾದ್ ದೇವಾಡಿಗ…