Gl harusha
ಕರಾವಳಿ

ಪುಣಚ: ಪತಿಯಿಂದ ಪತ್ನಿಯ ಕೊಲೆ; ಆರೋಪಿ ಪತಿ ಪೊಲೀಸ್ ವಶಕ್ಕೆ..!

ಗಂಡ ಹೆಂಡತಿ ಜಗಳದಲ್ಲಿ ಗಂಡ ಹೆಂಡತಿಯನ್ನು ದೂಡಿ ಹಾಕಿ ಗಂಭೀರ ಗಾಯಗೊಂಡು ಮಹಿಳೆ ಮೃತಪಟ್ಟ ಘಟನೆ ವಿಟ್ಲ ಸಮೀಪದ ಪುಣಚದಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುಣಚ: ಗಂಡ ಹೆಂಡತಿ ಜಗಳದಲ್ಲಿ ಗಂಡ ಹೆಂಡತಿಯನ್ನು ದೂಡಿ ಹಾಕಿ ಗಂಭೀರ ಗಾಯಗೊಂಡು ಮಹಿಳೆ ಮೃತಪಟ್ಟ ಘಟನೆ ವಿಟ್ಲ ಸಮೀಪದ ಪುಣಚದಲ್ಲಿ ನಡೆದಿದೆ.

srk ladders
Pashupathi
Muliya

ಮೃತ ದುರ್ದೈವಿಯನ್ನು ದೇವಿನಗರ ನಿವಾಸಿ ಲೀಲಾ (45) ಎಂದು ಗುರುತಿಸಲಾಗಿದೆ.

ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತಿದ್ದ ಸಂಜೀವ ಮೊನ್ನೆ ಕೂಡ ಗಲಾಟೆ ಮಾಡಿ ಹೆಂಡತಿಯನ್ನು ದೂಡಿ ಹಾಕಿದ್ದಾನೆ ಎಂಬ ಮಾಹಿತಿ ಸಾರ್ವಜನಿಕರಿಂದ ತಿಳಿದು ಬಂದಿದೆ. ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಮಹಿಳೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಹಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇದೀಗ ನಿನ್ನೆ ಮುಂಜಾನೆ ಲೀಲಾರವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮಂಗಳೂರು ವೆನ್ಸಾಕ್ ಆಸ್ಪತ್ರೆಗೆ ವಿಟ್ಲ ಪೋಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಮೊದಲಿಗೆ ಈ ಪ್ರಕರಣ ಸಹಜ ಸಾವಿನಂತಿದ್ದರೂ ಬಳಿಕ ಪೊಲೀಸ್‌ ತನಿಖೆಯಿಂದ ಇದು ಕೊಲೆ ಎಂದು ಸಾಬೀತಾಗಿದೆ. ಆರೋಪಿ ಸಂಜೀವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಚಿಣ್ಣರ ಪಾರ್ಕ್’ನಲ್ಲಿ ಚಂದ್ರಮಂಡಲ ಚರಿತೆ ಯಕ್ಷಗಾನ | ಕರಾವಳಿಯ ಗಂಡು ಕಲೆಗೆ ಹೆಜ್ಜೆ ಹಾಕಿದ ತುಮಕೂರಿನ ಕಲಾವಿದರು

ಪುತ್ತೂರು: ದ್ವಾರಕಾ ಪ್ರತಿಷ್ಠಾನ, ತುಮಕೂರು ಯಕ್ಷದೀವಿಗೆ ಪ್ರಸ್ತುತಿಯಲ್ಲಿ ನಾಳೆಗೂ ಉಳಿಯಲಿ…

ಕಾಂತೇರಿ ಜುಮಾದಿಗೆ ‘ಕಾಂತಾರ’ದಂತ ಭೀತಿ!! ಇದು ದಂತಕಥೆಯಲ್ಲ; ನೈಜಕಥೆ-  ಸೆಝ್’ನಿಂದ ಹೊಸ ತಪರಾಕಿ!

ಮಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಯೊಂದು ತುಳುನಾಡಿನ ದೈವಾರಾಧನೆಗೆ ತಡೆಯೊಡ್ಡುವ ಮೂಲಕ…