ಕರಾವಳಿ

ಮಂಗಳೂರು: ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ!!

ಸಹಾಯ ಮಾಡುವ ನೆಪದಲ್ಲಿ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಯುವಕನೋರ್ವ ತನ್ನ ಮೇಲೆ ಅತ್ಯಾಚಾರ ನಡೆಸಿರುವುದು ಮಾತ್ರವಲ್ಲದೆ, 62 ಸಾವಿರ ರೂ. ನಗದು ಕಳವು ಮಾಡಿದ್ದಾನೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಸಹಾಯ ಮಾಡುವ ನೆಪದಲ್ಲಿ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಯುವಕನೋರ್ವ ತನ್ನ ಮೇಲೆ ಅತ್ಯಾಚಾರ ನಡೆಸಿರುವುದು ಮಾತ್ರವಲ್ಲದೆ, 62 ಸಾವಿರ ರೂ. ನಗದು ಕಳವು ಮಾಡಿದ್ದಾನೆ.

akshaya college

ಆತನ ಅಣ್ಣನೂ ತನ್ನ ಲೈಂಗಿಕ ಕಿರುಕುಳ ನೀಡಿ ಮಾನಭಂಗಕ್ಕೆ ಯತ್ನಿಸಿರುವುದಾಗಿ ಯುವತಿಯೊಬ್ಬಳು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜು.21ರಂದು ದೂರುದಾರ ಯುವತಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕದ್ರಿಯಲ್ಲಿ ಕಾರು ಕೆಟ್ಟು ಹೋಗಿದೆ. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್‌ ಸವಾರ ಮೊಹಮ್ಮದ್ ಶಫಿನ್ ಕಾರನ್ನು ಸರಿಪಡಿಸಿ, ಬಳಿಕ ಆಕೆಯನ್ನು ಅದೇ ಕಾರಿನಲ್ಲಿ ಕೊಡಿಯಾಲ ಬೈಲಿನ ಅಪಾರ್ಟ್‌ಮೆಂಟ್ ಒಂದರಲ್ಲಿರುವ ಆಕೆಯ ಮನೆಗೆ ಬಿಟ್ಟು ಬಂದಿದ್ದ. ಈ ವೇಳೆ ಆತ ಆಕೆಯ ಮೊಬೈಲ್ ನಂಬರ್ ಪಡೆದಿದ್ದ.ಆ. 8ರಂದು ಯುವತಿಯ ಮನೆಯ ಫ್ರಿಡ್ಜ್ ಕೆಟ್ಟು ಹೋಗಿದ್ದು, ಮನೆಯಲ್ಲಿ ಒಬ್ಬಳೇ ವಾಸವಿರುವುದರಿಂದ ಯುವತಿ ಸಹಾಯಕ್ಕಾಗಿ ಶಫಿನ್‌ ಗೆ ಕರೆ ಮಾಡಿದ್ದಾಳೆ. ತನ್ನ ಪರಿಚಿತ ರಿಪೇರಿಯವನನ್ನು ಯುವತಿಯ ಮನೆಗೆ ಕರೆದುಕೊಂಡು ಬಂದು ರಿಪೇರಿ ಮಾಡಿಸಿದ್ದ. ಬಳಿಕ ಎಲೆಕ್ಟ್ರೀಷನ್ ನನ್ನು ಬಿಟ್ಟು ಬರುತ್ತೇನೆ ಎಂದು ಹೇಳಿ ಅಲ್ಲಿಯವರೆಗೆ ಫ್ರಿಡ್ಜ್ ಆನ್ ಮಾಡಬೇಡಿ ಎಂದು ಸೂಚಿಸಿದ್ದ. ಕೆಲವು ಹೊತ್ತಿನ ಬಳಿಕ ಶಫಿನ್ ವಾಪಸು ಬಂದಿದ್ದು, ಈ ವೇಳೆ ಹಣ್ಣು ಹಾಗೂ ಜ್ಯೂಸ್ ತಂದಿದ್ದ. ಜ್ಯೂಸ್ ಕುಡಿದ ಯುವತಿ ನಿದ್ದೆಗೆ ಜಾರಿದ್ದು, ಎಚ್ಚರಗೊಂಡಾಗ ಅನುಮಾನಗೊಂಡು ವಿಚಾರಿಸಿದಾಗ ಆತ ದೈಹಿಕ ಸಂಪರ್ಕ ನಡೆಸಿರುವುದಾಗಿ ತಿಳಿಸಿದ್ದ. ಜತೆಗೆ ಮುಂದೆಯೂ ಸಹಕರಿಸಬೇಕು. ಇಲ್ಲದಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಮಾಡಿರುವ ವೀಡಿಯೋವನ್ನು ಹಾಕುವುದಾಗಿ ಬೆದರಿಕೆ ಹಾಕಿ ಬ್ಲಾಕ್‌ಮೆàಲ್ ಮಾಡಿದ್ದಾನೆ ಜತೆಗೆ ಯುವತಿಯ ಕಾರನ್ನು ತನ್ನಲ್ಲಿ ಇಟ್ಟುಕೊಂಡಿದ್ದ.ಮನೆಗೆ ಅಕ್ರಮ ಪ್ರವೇಶ, ನಗದು ಕಳವು ಈ ನಡುವೆ ಯುವತಿಯ ಮನೆಯವರು ಕಾರನ್ನು ಕೇಳಿದ್ದಾರೆ. ಆತನಿಂದ ಕಾರನ್ನು ಪಡೆದುಕೊಳ್ಳಬೇಕು ಎಂದು ಅ. 25ರಂದು ಆತನ ವಿಳಾಸವನ್ನು ಹುಡುಕಿಕೊಂಡು ದೇರಳಕಟ್ಟೆಯ  ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಹೋದಾಗ ಕಾರು ಪಾರ್ಕಿಂಗ್ ಸ್ಥಳದಲ್ಲಿ ಕಂಡುಬಂದಿದೆ. ವಾಚ್‌ಮನ್ ಬಳಿ ಮನೆಯ ವಿಳಾಸ ಪಡೆದು ಹೋಗಿ ಆತನ ತಾಯಿಯಲ್ಲಿ ಕಾರು ವಾಪಸು ನೀಡುವಂತೆ ವಿನಂತಿಸಿದಾಗ ಅಲ್ಲಿದ್ದ ಶಫಿನ್‌ನ ಅಣ್ಣ ಮೊಹಮ್ಮದ್ ಶಿಯಾಬ್, ಅತ್ಯಾಚಾರ ಮಾಡಲು ಯತ್ನಿಸಿದ್ದ. ಜತೆಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ. ಆತನಿಂದ ತಪ್ಪಿಸಿಕೊಂಡು ಯುವತಿ ಮನೆಗೆ ಬಂದಿದ್ದಾಳೆ. ಅ. 27ರಂದು ರಾತ್ರಿ 9 ಗಂಟೆ ವೇಳೆ ಮೊಹಮ್ಮದ್ ಶಫೀನ್ ಅಕ್ರಮವಾಗಿ ಯುವತಿಯ ಮನೆಗೆ ಪ್ರವೇಶಿಸಿ, ಆಕೆಯ ಬ್ಯಾಗ್‌ನಲ್ಲಿದ್ದ 62 ಸಾವಿರ ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜನಾರ್ದನ ಪೂಜಾರಿ ಅವರಿಂದ ಕೋಮು ವೈಷಮ್ಯ ಬಿತ್ತುವ ಕೆಲಸ: ಎಚ್. ಮಹಮ್ಮದ್ ಆಲಿ | ಚರ್ಚ್’ನಲ್ಲಿ ದಫನವಿಲ್ಲ: ಮೌರಿಸ್ ಮಸ್ಕರೇನಸ್

ಪುತ್ತೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಶವಗಳ ಶೋಧ ಪ್ರಕರಣದಲ್ಲಿ ಮುಸ್ಲಿಮ್ ಮತ್ತು…

ಧರ್ಮಸ್ಥಳ: ನೂರಾರು ಶವಗಳ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ- ಶಾಸಕ ಅಶೋಕ್ ರೈ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣದ…