ಕಡಬ : ಕೆಎಸ್ಆರ್ ಟಿಸಿ ಬಸ್ ಮತ್ತು ಮಿನಿ ಗೂಡ್ಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಹೊಸಮಠ ಸಮೀಪದ ದೇರಾಜೆಯಲ್ಲಿ ನಡೆದಿದೆ.
ಕಡಬದಿಂದ ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಹಾಗು ಬಲ್ಯದಿಂದ ಕಡಬ ಕಡೆಗೆ ಹೋಗುತ್ತಿದ್ದ ಮಿನಿ ಗೂಡ್ಸ್ ವಾಹನದ ಮಧ್ಯೆ ಈ ಅಪಘಾತ ಸಂಭವಿಸಿದ್ದು ಪರಿಣಾಮ ಗೂಡ್ಸ್ ವಾಹನದ ಬಾಗಿಲು ಹಾಗು ಕೆಎಸ್ಆರ್ ಟಿಸಿ
ಬಸ್’ನ ಮುಂಭಾಗದ ಗಾಜು ಒಡೆದಿದೆ
ಸದ್ಯ ಅಪಘಾತದಲ್ಲಿ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯದೊಂದಿಗೆ ಪ್ರಯಾಣಿಕರು ಹಾಗು ಚಾಲಕರು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ವೇಗದ ಚಾಲನೆಯೇ ಈ ರಸ್ತೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ ಕೆಎಸ್ಆರ್ ಟಿಸಿ