ಕರಾವಳಿ

ಪುತ್ತೂರು ಬಸ್‌ನಿಲ್ದಾಣ: ತಿರುವು ತೆರವಿಗೆ ಶಾಸಕರ ಸೂಚನೆ

ಪುತ್ತೂರು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿಯಿಂದ ಎಪಿಎಂಸಿ ರಸ್ತೆಗೆ ತೆರಳುವಲ್ಲಿ ನಿಲ್ದಾಣದ ಬಳಿಯ ತಿರುವನ್ನು ತೆರವು ಮಾಡುವಂತೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿಯಿಂದ ಎಪಿಎಂಸಿ ರಸ್ತೆಗೆ ತೆರಳುವಲ್ಲಿ ನಿಲ್ದಾಣದ ಬಳಿಯ ತಿರುವನ್ನು ತೆರವು ಮಾಡುವಂತೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.

akshaya college

ಈ ತೆರವಿನ ಬಳಿಕ ಸರಕಾರಿ ವಸತಿಗೃಹ ಇದ್ದು ಇದರ ಆವರಣಗೋಡೆ ಬಳಿ ಇರುವ ಮಣ್ಣಿನ‌ದಿಬ್ಬಗಳನ್ನು ತೆರವು ಮಾಡಿ ರಸ್ತೆ ಅಗಲೀಕರಣ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದಾರೆ.

ಮಣ್ಣಿನದ ದಿಬ್ಬ ರಸ್ತೆಗೆ ತಾಗಿಕೊಂಡೇ ಇರುವ ಕಾರಣ ಈ ರಸ್ತೆ ಅಗಲ ಕಡಿಮೆಯಾಗಿದ್ದು ಸುಳ್ಯ ಕಡೆಯಿಂದ ಬರುವ ಕೆಎಸ್ ಆರ್ ಟಿ ಸಿ ಬಸ್ಸುಗಳು ಈ ಮೂಲಕವೇ ನಿಲ್ದಾಣ ಪ್ರವೇಶ ಮಾಡುತ್ತಿದೆ. ರಸ್ತೆ ಅಗಲ ಕಿರಿದಾಗಿರುವ ಕಾರಣ ಇತರೆ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ತಕ್ಷಣ ಕ್ರಮಕೈಗೊಳ್ಳುವಂತೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ. ಸ್ಥಳೀಯ ರಿಕ್ಷಾ ಚಾಲಕರು, ಸಾರ್ವಜನಿಕರು ರಸ್ತೆ ಅಗಲೀಕರಣ ಮಾಡುವಂತೆ ಮನವಿಯನ್ನು‌ಮಾಡಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಆ. 30ರಂದು ದ.ಕ. ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ | ಸಾರ್ವಜನಿಕರಿಗೂ ಜಿಲ್ಲಾಧಿಕಾರಿ ನೀಡಿದ್ದಾರೆ ಸೂಚನೆ

ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ…