ಕರಾವಳಿ

ಮಂಗಳೂರು ಏರ್ಪೋರ್ಟ್: ಕೆ 9 ಹೀರೋ ಜಾಕ್ ನಿಧನ!!

12 ವರ್ಷದ ಲ್ಯಾಬ್ರಡಾರ್ ತಳಿಯ ಶ್ವಾನ ಜಾಕ್‌ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಶುಕ್ರವಾರ(ನ22) ಭಾವನಾತ್ಮಕ ವಿದಾಯ ಹೇಳಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್‌ (CISF) canine squad ಅಂಗವಾಗಿ 12 ವರ್ಷದ ಲ್ಯಾಬ್ರಡಾರ್ ತಳಿಯ ಶ್ವಾನ ಜಾಕ್‌ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಶುಕ್ರವಾರ(ನ22) ಭಾವನಾತ್ಮಕ ವಿದಾಯ ಹೇಳಿದೆ

SRK Ladders

ಜ್ಯಾಕ್ ತನ್ನ 13 ನೇ ಹುಟ್ಟುಹಬ್ಬ ಆಚರಿಸಿ ಮೂರು ದಿನಗಳಲ್ಲಿ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದಾಗಿ ಕೊನೆಯುಸಿರೆಳೆದಿದೆ. ನಿಷ್ಠೆ ಮತ್ತು ಸಮರ್ಪಣೆ ಮೂಲಕ ಎಲ್ಲರ ಮೆಚ್ಚಿನ ಶ್ವಾನವಾಗಿತ್ತು.

ಜ್ಯಾಕ್ ಒಂದು ದಶಕದ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ CISF ನ K9 ತಂಡವನ್ನು ಸೇರಿಕೊಂದಿತ್ತು. ಬಹಳ ಬೇಗನೆ ಭದ್ರತಾ ತಂಡದ ಅಮೂಲ್ಯ ಸದಸ್ಯನಾಗಿತ್ತು. ತೀಕ್ಷ್ಮವಾದ ಪ್ರವೃತ್ತಿ ಮತ್ತು ದಣಿವರಿಯದ ಕೆಲಸಕ್ಕೆ ಹೆಸರುವಾಸಿಯಾದ ಜ್ಯಾಕ್ ವಿಮಾನ ನಿಲ್ದಾಣದ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅಚಲ ಸೇವೆಯು ಜಾಕ್‌ ಸಿಐಎಸ್‌ಎಫ್‌ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣದ ಸಿಬಂದಿಗಳಿಗೆ ಅಚ್ಚುಮೆಚ್ಚಿನ ಶ್ವಾನವಾಗಿತ್ತು.

ಡೆಪ್ಯುಟಿ ಕಮಾಂಡೆಂಟ್. ಎಸ್. ಎಂ. ಮೈತೇಯ್ ನೇತೃತ್ವದ ಸಿಐಎಸ್‌ಎಫ್‌ ತಂಡವು ಜ್ಯಾಕ್ ಸೇವೆಗೆ ಸೂಕ್ತವಾದ ಗೌರವವನ್ನು ನೀಡಿ ಅಂತಿಮ ನಮನ ಸಲ್ಲಿಸಿದರು. 


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…