Gl harusha
ಕರಾವಳಿ

ನೀರಜೆ: ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮ

SKSSF ಆತೂರು ಕ್ಲಸ್ಟರ್ ವತಿಯಿಂದ ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮ ನ. 18ರಂದು ನೂರುಲ್ ಹುದಾ ಮದರಸ, ಶಂಸುಲ್ ಉಲಮಾ ವೇದಿಕೆ ನೀರಜೆಯಲ್ಲಿ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಕೊಯಿಲ : SKSSF ಆತೂರು ಕ್ಲಸ್ಟರ್ ವತಿಯಿಂದ ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮ ನ. 18ರಂದು ನೂರುಲ್ ಹುದಾ ಮದರಸ, ಶಂಸುಲ್ ಉಲಮಾ ವೇದಿಕೆ ನೀರಜೆಯಲ್ಲಿ ನಡೆಯಿತು.

srk ladders
Pashupathi
Muliya

SKSSF ಅತೂರು ಕ್ಲಸ್ಟರ್ ಅಧ್ಯಕ್ಷ ಎನ್ ಸಿದ್ದಿಕ್ ಧ್ವಜಾರೋಹಣ ಮಾಡಿದರು. ಬೆಳಿಗ್ಗೆ ನಡೆದ ಉದ್ಘಾಟನೆ ಸಮಾರಂಭದಲ್ಲಿ ಸೌಕಾತ್ ಅಲಿ ಫೈಝಿ ದುಆ ಮಾಡಿದರು. ಸತ್ತರ್ ಅಸ್ಲಾಮಿ ಉದ್ಘಾಟನೆ ಮಾಡಿದರು.

ಕಲೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ, ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಶಂಸುಲ್ ಉಲಮಾ ಮೌಲಿದ್  ಮಗ್ರಿಬ್ ನಮಾಝಿನ ಬಳಿಕ ಶಂಸುಲ್ ಉಲಮಾ ವೇದಿಕೆ ನೀರಜೆಯಲ್ಲಿ ನಡೆಯಿತು. 

ಶಂಸುಲ್ ಉಲಮಾ ಮೌಲಿದ್ ಗೆ ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಗಳ್ ನೇತೃತ್ವ ನೀಡಿ ದುಆ ಮಾಡಿದರು. SKSSF ಆತೂರು ಕ್ಲಸ್ಟರ್ ಅಧ್ಯಕ್ಷರಾದ ಎನ್ ಸಿದ್ದಿಕ್ ಅಧ್ಯಕ್ಷತೆ ವಹಿಸಿದರು. ನೀರಜೆ ಮದರಸ ಸದರ್ ಉಸ್ತಾದ್ ಹಾರಿಸ್ ಆಝ್ ಹರಿ ಉದ್ಘಾಟನೆ ಮಾಡಿದರು. ಅತೂರು ರೇಂಜ್ ಅಧ್ಯಕ್ಷರಾದ ರಫೀಕ್ ಆರ್ಷದಿ ಅನುಸ್ಮರಣೆ ಭಾಷಣ ಮಾಡಿದರು.

ವೇದಿಕೆಯಲ್ಲಿ ಅದ್ನಾನ್ ಅನ್ಸಾರಿ, ಮನ್ಸೂರ್ ಯಾಮಾನಿ, ಎನ್ ಬಿ ದಾರಿಮಿ, ಇಸ್ಮಾಯಿಲ್ ದಾರಿಮಿ, ಝಕರಿಯಾ ಮುಸ್ಲಿಯಾರ್, ಬದ್ರುದ್ದಿನ್ ಮುಸ್ಲಿಯಾರ್, ಅಬ್ದುಲ್ ರಝಕ್ ಫೈಝಿ, ಇಸ್ಮಾಯಿಲ್ ಅಸ್ಲಾಮಿ, ಜಂಶೀರ್ ಫೈಝಿ, ಶಮೀರ್ ದಾರಿಮಿ, ಹಕೀಮ್ ಜಾಹರಿ, ಹಸೈನಾರ್ ಹಾಜಿ ಕೊಯಿಲ, ಅಹಮದ್ ಕುಂಞಿ, ಪೊಡಿಕುಂಞಿ ನೀರಜೆ, ಸಿರಾಜ್ ಬಡ್ಡಮೆ, ಅಬ್ದುಲ್ ರಝಕ್ ಬಿ ಕೆ, ರಫೀಕ್ ಗಂಡಿಬಾಗಿಲು, ಖಲಿಲ್ ಹಾಜಿ, ಇಸಾಕ್ ಬಿ, ಹನೀಫ್ ಜನಪ್ರಿಯ, ನಝಿರ್ ಕೊಯಿಲ, ಯೂಸುಫ್ ನೀರಜೆ, ಖಲಂದರ್ ಎಸ್ ಪಿ, ಬಷೀರ್ ಪೆರಿಯಡ್ಕ, ಅಝೀಝ್ ಪಲ್ತಾಡಿ, ಅಝೀಝ್ ಪೆರಿಯಡ್ಕ, ಹನೀಫ್ ಪೆರಿಯಡ್ಕ, ಇಸ್ಮಾಯಿಲ್ ಆತೂರುಬೈಲ್, ಅಝೀಝ್ ಹಲ್ಯಾರ, ಕರೀಂ ಹೆಂತಾರ್, ಇಸ್ಮಾಯಿಲ್ ಗೊಳಿತ್ತಾಡಿ, ಅನ್ಸಾರ್, ಪುತ್ತುಕುಂಞಿ, ಸಿರಾಜ್, ಅಶ್ರಫ್, ಸಿದ್ದಿಕ್, ಮುಸ್ತಾಫಾ, ಜೈನದ್ದಿನ್ ಆತೂರು, ಸಾಜಿ, ಫಾರೂಕ್ ಉಪಸ್ಥಿತರಿದ್ದರು.

SKSSF ಅತೂರು ಕ್ಲಸ್ಟರ್ ಪರಿಸರದ ಜಮಾಹತ್ ಅಧ್ಯಕ್ಷರಿಗೆ, ಮದರಸ ಸದರ್ ಉಸ್ತಾದ್ ರಿಗೆ ಹಾಗೂ ಶಾಖೆ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು.

ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಕಲೋತ್ಸವ ಕಾರ್ಯಕ್ರಮದಲ್ಲಿ SKSSF ಆತೂರು ಶಾಖೆ ಚಾಂಪಿಯನ್ ವಾಗಿ ಮೂಡಿ ಬಂತು. SKSSF ನೀರಜೆ ಶಾಖೆ ರನ್ನರ್ ಶಿಪ್ ಪಡೆಯಿತು.

ಯಾಹ್ಯ ಫೈಝಿ ಸ್ವಾಗತ ಭಾಷಣ ಮಾಡಿದರು. ಶರೀಫ್ ನಿಝಮಿ ವಂದಿಸಿದರು. ಅಶ್ರಫ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಚಿಣ್ಣರ ಪಾರ್ಕ್’ನಲ್ಲಿ ಚಂದ್ರಮಂಡಲ ಚರಿತೆ ಯಕ್ಷಗಾನ | ಕರಾವಳಿಯ ಗಂಡು ಕಲೆಗೆ ಹೆಜ್ಜೆ ಹಾಕಿದ ತುಮಕೂರಿನ ಕಲಾವಿದರು

ಪುತ್ತೂರು: ದ್ವಾರಕಾ ಪ್ರತಿಷ್ಠಾನ, ತುಮಕೂರು ಯಕ್ಷದೀವಿಗೆ ಪ್ರಸ್ತುತಿಯಲ್ಲಿ ನಾಳೆಗೂ ಉಳಿಯಲಿ…

ಕಾಂತೇರಿ ಜುಮಾದಿಗೆ ‘ಕಾಂತಾರ’ದಂತ ಭೀತಿ!! ಇದು ದಂತಕಥೆಯಲ್ಲ; ನೈಜಕಥೆ-  ಸೆಝ್’ನಿಂದ ಹೊಸ ತಪರಾಕಿ!

ಮಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಯೊಂದು ತುಳುನಾಡಿನ ದೈವಾರಾಧನೆಗೆ ತಡೆಯೊಡ್ಡುವ ಮೂಲಕ…