Gl harusha
ಕರಾವಳಿ

13 ವರ್ಷಗಳ ಹಿಂದಿನ ಪ್ರಕರಣ: ಲಾರಿ ಚಾಲಕನಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ ಕೋರ್ಟ್!!

ಮರದ ತುಂಡುಗಳನ್ನು ಲೋಡ್ ಮಾಡುತ್ತಿದ್ದ ವೇಳೆ ಚಾಲಕ ಏಕಾಏಕಿ ಲಾರಿ ಚಲಾಯಿಸಿದ ಪರಿಣಾಮ ಮರದ ತುಂಡು ಬಿದ್ದು ವ್ಯಕ್ತಿಯೋರ್ವನ ಸಾವಿಗೆ ಕಾರಣನಾದ ಚಾಲಕನಿಗೆ ಪುತ್ತೂರು ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಕಡಬ: ಮರದ ತುಂಡುಗಳನ್ನು ಲೋಡ್ ಮಾಡುತ್ತಿದ್ದ ವೇಳೆ ಚಾಲಕ ಏಕಾಏಕಿ ಲಾರಿ ಚಲಾಯಿಸಿದ ಪರಿಣಾಮ ಮರದ ತುಂಡು ಬಿದ್ದು ವ್ಯಕ್ತಿಯೋರ್ವನ ಸಾವಿಗೆ ಕಾರಣನಾದ ಚಾಲಕನಿಗೆ ಪುತ್ತೂರು ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

srk ladders
Pashupathi
Muliya

ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ವೀರ ಮಂಗಲ ನಿವಾಸಿ ಲಾರಿ ಚಾಲಕ ಗೌಸ್ ಬ್ಯಾರಿ ಶಿಕ್ಷೆಗೊಳಗಾದ ಆರೋಪಿ.

2011 ರಲ್ಲಿ ಕಡಬ ಜೂನಿಯರ್ ಕಾಲೇಜು ಮೈದಾನದ ಬಳಿ ಲಾರಿಯಲ್ಲಿ ಮರದ ತುಂಡುಗಳನ್ನು ಅಬ್ದುಲ್ ಕುಂಞ ಎಂಬವರು ಲಾರಿಗೆ ಲೋಡು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಲಾರಿ ಚಾಲಕ ಅಜಾಗರುಕತೆ ಮತ್ತು ನಿರ್ಲಕ್ಷದಿಂದ ಚಲಾಯಿಸಿದ ಪರಿಣಾಮ ಮರದ ತುಂಡುಗಳು ಬಿದ್ದು ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು.

ಈ ಬಗ್ಗೆ ಕುಟ್ರುಪ್ಪಾಡಿ ಗ್ರಾಮದ ಅಲೆಕ್ಕಾಡಿ ಯ ಅಬ್ದುಲ್ ರಹಿಮಾನ್ ಎಂಬವರು ನೀಡಿದ ದೂರಿನಂತೆ ಕಡಬ ಠಾಣಾ ಆ. ಕ್ರ. 139/2011 ಕಲಂ 304(A) ಪ್ರಕರಣ ದಾಖಲಾಗಿತ್ತು.

ಇದೀಗ ಮಾನ್ಯ ಪುತ್ತೂರು ನ್ಯಾಯಾಲಯವು ಪ್ರಕರಣದ ವಾರಂಟ್ ಆರೋಪಿ ಚಾಲಕನಿಗೆ ರವರು 6 ತಿಂಗಳ ಜೈಲು ಶಿಕ್ಷೆ ಮತ್ತು ದಂಡ ₹1000/-ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಚಿಣ್ಣರ ಪಾರ್ಕ್’ನಲ್ಲಿ ಚಂದ್ರಮಂಡಲ ಚರಿತೆ ಯಕ್ಷಗಾನ | ಕರಾವಳಿಯ ಗಂಡು ಕಲೆಗೆ ಹೆಜ್ಜೆ ಹಾಕಿದ ತುಮಕೂರಿನ ಕಲಾವಿದರು

ಪುತ್ತೂರು: ದ್ವಾರಕಾ ಪ್ರತಿಷ್ಠಾನ, ತುಮಕೂರು ಯಕ್ಷದೀವಿಗೆ ಪ್ರಸ್ತುತಿಯಲ್ಲಿ ನಾಳೆಗೂ ಉಳಿಯಲಿ…