ಕರಾವಳಿ

ಪುತ್ತೂರು ಕೋ- ಆಪರೇಟಿವ್ ಟೌನ್ ಬ್ಯಾಂಕಿನ ಮೊದಲ ಶಾಖೆ ವಿಟ್ಲದಲ್ಲಿ ಉದ್ಘಾಟಿಸಿ; ಕೃಷಿಕರ ಕಷ್ಟಕ್ಕೆ ನೆರವಾಗುವ ಬ್ಯಾಂಕ್: ಕಿಶೋರ್ ಕುಮಾರ್ ಪುತ್ತೂರು

ಬ್ಯಾಂಕ್ ರಿಸರ್ವ್ ಬ್ಯಾಂಕಿನ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಹಾಗು ಅನುಸರಣಾ ವರದಿಯನ್ನು ಸಲ್ಲಿಸಲಾಗಿದೆ. ಕೋರ್ ಬ್ಯಾಂಕಿಂಗ್‌ ಅಳವಡಿಸಲಾಗಿದೆ. ಹೆಚ್ಚಿನ ತೆರಿಗೆ ವ್ಯವಸ್ಥೆ ಸಮರ್ಪಕಗೊಳಿಸಲಾಗಿದೆ.ಬ್ಯಾಂಕಿನಲ್ಲಿ 15 ಕೆ.ವಿಸೋಲಾರ್‌ಗ್ರಿಡ್ ಅಳವಡಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಕಷ್ಟದಲ್ಲಿರುವವರಿಗೆ ಸಾಲ ನೀಡಿ, ಸಹಕರಿಸುವ ಕೆಲಸ ಬ್ಯಾಂಕಿನಿಂದ ನಡೆಯಬೇಕು. ಸಮಾಜಕ್ಕೆ ಮಾಡಿದ ಉಪಕಾರದಿಂದ ಪ್ರತಿಯೊಬ್ಬರು ನೆನಪಿಡುವ ಕಾರ್ಯವಾಗುತ್ತದೆ. ಕೃಷಿಕರಿಗೆ ಕಷ್ಟದಲ್ಲಿ ಸ್ಪಂದಿಸುವ ಕಾರ್ಯವನ್ನು ಟೌನ್ ಬ್ಯಾಂಕ್ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.

ವಿಟ್ಲ ಎಂಪೈರ್ ಮಾಲ್ ನಲ್ಲಿ ಪುತ್ತೂರು ಕೋ ಓಪರೇಟಿವ್‌ ಟೌನ್ ಬ್ಯಾಂಕ್ ನೂತನ ವಿಟ್ಲ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

SRK Ladders

ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಮಾತನಾಡಿ, ಜಿಡಿಪಿಯಲ್ಲಿ ಶೇ.25ರಷ್ಟು ಸಹಕಾರಿಯ ಕೊಡುಗೆಯಿದೆ. ದೇಶದಲ್ಲಿ 52 ರೀತಿಯ ಸಹಕಾರಿ ಸಂಸ್ಥೆಗಳಿದ್ದು. 8.5 ಲಕ್ಷದಷ್ಟು ಸಂಸ್ಥೆ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ನಿಯಮಾವಳಿಗಳನ್ನು ಡಿಸೆಂಬರ್ ನಲ್ಲಿ ಜಾರಿಗೆ ತರಲಾಗುತ್ತಿದೆ. ಸರಸ್ವತಿಯಿಂದ ಕೋಟಿ ಠೇವಣಿ ಕೊಟ್ಟು ಬೆಂಬಲಿಸುವ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.

ಮೊಳಹಳ್ಳಿ ಶಿವರಾಯರ ಭಾವ ಚಿತ್ರ ಅನಾವರಣ ಮಾಡಲಾಯಿತು. ಗೋವರ್ಧನ ವಿಟ್ಲ ಅವರಿಗೆ ಪ್ರಥಮ ಠೇವಣಿ ಪತ್ರವನ್ನು ಹಸ್ತಾಂತರ ಮಾಡಲಾಯಿತು. 2025ನೇ ಸಾಲಿನ ಕ್ಯಾಲೆಂಡರಿನ ಬಿಡುಗಡೆ ನಡೆಯಿತು. ಕಟ್ಟಡ ಮಾಲೀಕ ಪೀಟರ್ ಪ್ರಾನ್ಸಿಸ್ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಕೋ ಓಪರೇಟಿವ್‌ ಟೌನ್ ಬ್ಯಾಂಕ್ ನ ಅಧ್ಯಕ್ಷ ಎನ್. ಕಿಶೋ‌ರ್ ಕೊಳತ್ತಾಯ ವಹಿಸಿದ್ದರು.

ವಿಟ್ಲ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಕರುಣಾಕರ ನಾಯೊಟ್ಟು, ನಿರ್ದೇಶಕರಾದ ಸದಾಶಿವ ಪೈ, ಕಿರಣ್ ಕುಮಾ‌ರ್ ರೈ, ಚಂದ್ರಶೇಖರ ಗೌಡ ಕೆ., ನಾರಾಯಣ ಎ. ಬಿ., ವಿನೋದ್ ಕುಮಾರ್ ಜಿ., ಮಲ್ಲೇಶ್ ಕುಮಾ‌ರ್, ಜಯಂತಿ, ಹೇಮಾವತಿ, ವೃತ್ತಿಪರ ನಿರ್ದೇಶಕ ಅರವಿಂದ ಕೃಷ್ಣ ಬಿ. ಮತ್ತಿತರರು ಉಪಸ್ಥಿತರಿದ್ದರು.

ಅದ್ವಿಕಾ ಪ್ರಾರ್ಥಿಸಿದರು. ಉಪಾಧ್ಯಕ್ಷ ಕುಡ್ಗಿ ವಿಶ್ವಾಸ್‌ ಶೆಣೈ ಸ್ವಾಗತಿಸಿದರು. ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ ಪ್ರಸ್ತಾವನೆಗೈದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ ಶೆಟ್ಟಿ ವಂದಿಸಿದರು. ವಿಟ್ಲ ಶಾಖಾ ವ್ಯವಸ್ಥಾಪಕ ಚೇತನ್ ಕಾರ್ಯಕ್ರಮ ನಿರೂಪಿಸಿದರು. ವಿಟ್ಲ ಶಾಖೆಯ ಪವನ್, ಉದಯ ಸಹಕರಿಸಿದರು.

ಬ್ಯಾಂಕ್‌ ನ ಪ್ರಮುಖ ಸಾಧನೆಗಳು

ಬ್ಯಾಂಕ್ ರಿಸರ್ವ್ ಬ್ಯಾಂಕಿನ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಹಾಗು ಅನುಸರಣಾ ವರದಿಯನ್ನು ಸಲ್ಲಿಸಲಾಗಿದೆ. ಕೋರ್ ಬ್ಯಾಂಕಿಂಗ್‌ ಅಳವಡಿಸಲಾಗಿದೆ. ಹೆಚ್ಚಿನ ತೆರಿಗೆ ವ್ಯವಸ್ಥೆ ಸಮರ್ಪಕಗೊಳಿಸಲಾಗಿದೆ. ಬ್ಯಾಂಕಿನಲ್ಲಿ 15 ಕೆ.ವಿಸೋಲಾರ್‌ಗ್ರಿಡ್ ಅಳವಡಿಸಲಾಗಿದೆ.ಬ್ಯಾಂಕಿನ ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ಸಿದ್ದತೆ ನಡೆದಿದೆ. ಸದಸ್ಯರಿಗೆ ಶೇ.12 ಡಿವಿಡೆಂಡ್ ಮತ್ತು ಸಭೆಗೆ ಹಾಜರಾದವರಿಗೆ ಉತ್ತಮ ಕೊಡುಗೆ ನೀಡಿದೆ.ಸಿಬ್ಬಂದಿಗಳಿಗೆ ವಸ್ತ್ರಸಂಹಿತೆ ಜಾರಿಗೊಳಿಸಿ ಅವರಿಗೆ ಹಲವು ಕಾರ್ಯಾಗಾರ ನಡೆಸಿದ್ದೇವೆ. ಕಳೆದ ಆರ್ಥಿಕ ವರ್ಷದಲ್ಲಿ ನಿವ್ವಳ ಅನುತ್ಪಾದಕ ಆಸ್ತಿಯನ್ನು ಶೂನ್ಯಕ್ಕೆ ಇಳಿಸಿದ್ದೇವೆ-

ಕಿಶೋರ್ ಕೊಳತ್ತಾಯ ಎನ್.  ಅಧ್ಯಕ್ಷರು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್

ಪುತ್ತೂರು ರಸ್ತೆಗೆ ಲಾಟನ್ ದೀಪದ ಬೆಳಕು ನೀಡಿದ ಬ್ಯಾಂಕ್

115 ವರ್ಷಗಳ ಹಿಂದೆ ಬ್ಯಾಂಕ್ ಆರಂಭ ಆಗುವ ಸಂದರ್ಭದಲ್ಲೇ ಸಮಾಜಮುಖಿ ಸೇವೆಗಳನ್ನು ಬ್ಯಾಂಕ್ ಆರಂಭಿಸಿದೆ.ಆಗ ಗ್ರಂಥಾಲಯಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಪುತ್ತೂರಿನ ಪೇಟೆಯಲ್ಲಿ ಇರುವ ಆಗಿನ ಎರಡು ಮುಖ್ಯ ರಸ್ತೆಗಳಿಗೆ ರಾತ್ರಿ ಬೆಳಕಿರಲಿಲ್ಲ.ವಿದ್ಯುತ್ ಸಂಪರ್ಕವೂ ಇರಲಿಲ್ಲ.ಅಂತಹ ಸಮಯದಲ್ಲಿ ಪ್ರತಿ ರಸ್ತೆಯ ಬದಿಯಲ್ಲೂ ಲಾಟನ್ ದೀಪದ ಬೆಳಕು ನೀಡಿದ ಕೀರ್ತಿ ನಮ್ಮ ಬ್ಯಾಂಕ್‌ಗೆ ಇದೆ. ಇವತ್ತು ಅದೇ ಬ್ಯಾಂಕ್ ಸೋಲಾರ್ ಸಿಸ್ಟಮ್ ಮೂಲಕ ಮೆಸ್ಕಾಂ ಇಲಾಖೆಗೆ ವಿದ್ಯುತ್ ನೀಡುತ್ತಿದೆ. ಅದೇ ರೀತಿ ಹೈನುಗಾರಿಕೆ ವಲಯದಲ್ಲೂ ಬಹಳ ಹಿಂದೆಯೇ ಬ್ಯಾಂಕ್ ಮುಂಚೂಣಿಯಲ್ಲಿದ್ದು ಸಹಾಯ ಮಾಡುತ್ತಿತ್ತು.ಎತ್ತನ್ನು ಸಾಕಿ ಅದರ ಮೂಲಕ ಹೈನುಗಾರಿಕೆಗೆ ಸಹಕಾರ ನೀಡುತ್ತಿತ್ತು

ಚಂದ್ರಶೇಖರ್ ರಾವ್ ಬಪ್ಪಳಿಗೆ ನಿರ್ದೇಶಕರು, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಪುತ್ತೂರು


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…