ಕರಾವಳಿ

 ನ.14: ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್ ನ ನೂತನ ವಿಟ್ಲ ಶಾಖೆ ಶುಭಾರಂಭ

ಪುತ್ತೂರು ಕೋ ಓಪರೇಟಿವ್ ಟೌನ್‌ಬ್ಯಾಂಕ್‌ಲಿ.ನ ನೂತನ ವಿಟ್ಲ ಶಾಖೆಯ ಉದ್ಘಾಟನಾ ಸಮಾರಂಭ ನ.14 ಗುರುವಾರ ವಿಟ್ಲ ಎಂಪೈರ್ ಮಾಲ್‌ನ ಒಂದನೇ ಮಹಡಿಯಲ್ಲಿ ನಡೆಯಲಿದೆ ಎಂದು ಬ್ಯಾಂಕ್‌ನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಕಿಶೋರ್ ಕೊಳತ್ತಾಯ ತಿಳಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ಕೋ ಓಪರೇಟಿವ್ ಟೌನ್‌ಬ್ಯಾಂಕ್‌ಲಿ.ನ ನೂತನ ವಿಟ್ಲ ಶಾಖೆಯ ಉದ್ಘಾಟನಾ ಸಮಾರಂಭ ನ.14 ಗುರುವಾರ ವಿಟ್ಲ ಎಂಪೈರ್ ಮಾಲ್‌ನ ಒಂದನೇ ಮಹಡಿಯಲ್ಲಿ ನಡೆಯಲಿದೆ ಎಂದು ಬ್ಯಾಂಕ್‌ನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಕಿಶೋರ್ ಕೊಳತ್ತಾಯ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 1909 ರಲ್ಲಿ ಅಂದರೆ 115 ವರ್ಷಗಳ ಹಿಂದೆ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರಿಂದ ಸ್ಥಾಪಿಸಲ್ಪಟ್ಟ ಪುತ್ತೂರು ಕೊ ಓಪರೇಟಿವ್ ಟೌನ್‌ಬ್ಯಾಂಕ್‌ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಿದೆ. 2019 ರ ಸಾಲಿನಲ್ಲಿ ಒಟ್ಟು 98 ಕೋಟಿ ಇದ್ದ ವ್ಯವಹಾರ ಪ್ರಸ್ತುತ 120 ಕೋಟಿಗೆ ಮಿಕ್ಕಿದೆ. ಮೀಸಲು ಕ್ಷೇಮನಿಧಿ 2.39 ಕೋಟಿ ಇದ್ದದ್ದು 4.81 ಕೋಟಿಗೂ ಅಧಿಕವಿದೆ. ಪ್ರಸ್ತುತ ವಾರ್ಷಿಕ ಲಾಭ 1.55 ಕೋಟಿ ರೂ. ಆಗಿರುತ್ತದೆ. 2023-24ನೇ ವರ್ಷದಲ್ಲಿ ಮೀಸಲು ನಿಧಿಗೆ 77 ಲಕ್ಷಕ್ಕೂ ಮಿಕ್ಕಿ ವರ್ಗಾಯಿಸಲಾಗಿದ್ದು, ಇದುವರೆಗಿನ ದಾಖಲೆಯಾಗಿದೆ. ಕಳೆದ ಬಾರಿ ಸದಸ್ಯರಿಗೆ 10 ಶೇ. ಡಿವಿಡೆಂಡ್ ನೀಡಲಾಗಿದ್ದು, ಈ ವರ್ಷ 12 ಶೇ. ಡಿವಿಡೆಂಟ್ ನೀಡಲಾಗಿದೆ. ರಿಸವ್‌ರ್ಬ್ಯಾಂಕ್‌ನಿಯಮದಂತೆ ಶೇ.10 ಕ್ಕಿಂತ ಜಾಸ್ತಿ ಅನುಪಾತವಿರಬೇಕು. ಆದರೆ ನಮ್ಮ ಬ್ಯಾಂಕ್‌ಈ ವರ್ಷ ಅನುಪಾತ ಶೇ.33 ಆಗಿದೆ. ಇದು ಬ್ಯಾಂಕ್‌ನ ಸದೃಢತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

SRK Ladders

ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್‌ಚೌಟ ಉದ್ಘಾಟನೆ ನೆರವೇರಿಸಲಿದ್ದು, ಬ್ಯಾಂಕ್‌ಅಧ್ಯಕ್ಷ ಎನ್.ಕಿಶೋರ್ ಕೊಳತ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್‌ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭದ್ರತಾ ಕೊಠಡಿ, ಮಾಜಿ ಶಾಸಕ ಸಂಜೀವ ಮಠಂದೂರು ಗಣಕಯಂತ್ರ ಉದ್ಘಾಟಿಸುವರು. ಕ್ಯಾಂಸ್ಕೋ ಲಿ.ನ ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಪ್ರಥಮ ಠೇವಣಿ ಪತ್ರ ಹಸ್ತಾಂತರ ಮಾಡುವರು. ಅತಿಥಿಗಳಾಗಿ ಎಸ್‌ಸಿಡಿಸಿಸಿ ಬ್ಯಾಂಕ್‌ನಿರ್ದೇಶಕ ಶಶಿಕುಮಾರ್ ಬಾಲ್ಗೊಟ್ಟು, ದ.ಕ.ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ರಮೇಶ್, ವಿಟ್ಲ ಪಟ್ಟಣ ಪಂಚಾಯತ್‌ಅಧ್ಯಕ್ಷ ಕರುಣಾಕರ ನಾಯೊಟ್ಟು, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ, ವಿಟ್ಲ ಅರಮನೆಯ ಬಂಗಾರು ಅರಸರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…