ಕರಾವಳಿ

ಈಶ್ವರಮಂಗಲ: ಪ್ರವಾದಿ ನಿಂದನಾತ್ಮಕ ಭಿತ್ತಿಪತ್ರ ಪ್ರಕರಣ; ಸಮಾಜ‌ಘಾತುಕ ಶಕ್ತಿಗಳನ್ನು‌ ಮಟ್ಟಹಾಕಿ: ಪೊಲೀಸ್ ಇಲಾಖೆಗೆ ಶಾಸಕರ ಸೂಚನೆ

ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪುಳಿತ್ತಡಿ ಎಂಬಲ್ಲಿ ಬಸ್ ತಂಗುದಾಣದಲ್ಲಿ ಪ್ರವಾದಿಯವರನ್ನು ನಿಂದಿಸಿ ಭಿತ್ತಿ ಪತ್ರ ಅಂಟಿಸಲಾಗಿದ್ದು , ಇದು ಸಮಾಜದಲ್ಲಿ ಶಾಂತಿ ಕದಡುವ ಸಮಾಜಘಾತುಕ ಶಕ್ತಿಗಳ ಕೃತ್ಯವಾಗಿ ಇಂಥಹ ಶಕ್ತಿಗಳನ್ನು ಮಟ್ಟಹಾಕುವಂತೆ ಶಾಸಕ ಅಶೋಕ್ ರೈ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. 

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪುಳಿತ್ತಡಿ ಎಂಬಲ್ಲಿ ಬಸ್ ತಂಗುದಾಣದಲ್ಲಿ ಪ್ರವಾದಿಯವರನ್ನು ನಿಂದಿಸಿ ಭಿತ್ತಿ ಪತ್ರ ಅಂಟಿಸಲಾಗಿದ್ದು , ಇದು ಸಮಾಜದಲ್ಲಿ ಶಾಂತಿ ಕದಡುವ ಸಮಾಜಘಾತುಕ ಶಕ್ತಿಗಳ ಕೃತ್ಯವಾಗಿ ಇಂಥಹ ಶಕ್ತಿಗಳನ್ನು ಮಟ್ಟಹಾಕುವಂತೆ ಶಾಸಕ ಅಶೋಕ್ ರೈ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. 

ಪ್ರವಾದಿಯವರನ್ನು ನಿಂದಿಸಿ ಭಿತ್ತಿ ಪತ್ರ ಅಂಟಿಸಿರುವ ಆರೋಪಿಗಳ ವಿರುದ್ದ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮತ್ತು ಆರೋಪಿಗಳನ್ನು ಬಂಧಿಸಿ ಶಾಂತಿ ಕಾಪಾಡುವಂತೆ ಈಶ್ವರಮಂಗಲ ಮುಸ್ಲಿಂ ಒಕ್ಕೂಟದ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು‌.

ಈ ಸಂಧರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿದ ಶಾಸಕರು ಶಾಂತಿಯುತವಾಗಿರುವ ಪುತ್ತೂರಿನಲ್ಲಿ ಏನಾದರೂ‌ಮಾಡಿ ಗಲಭೆ ಎಬ್ಬಿಸಬೇಕು ಎಂಬ ಉದ್ದೇಶದಿಂದ ಕೆಲವೊಂದು ಕಿಡಿಗೇಡಿಗಳು ಧಾರ್ಮಿಕ ಮಹಾನ್ ವ್ಯಕ್ತಿಗಳಿಗೆ ನಿಂದನೆ ಮಾಡುವ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇಂಥವರಿಗೆ ತಕ್ಕ ಶಾಸ್ತಿಯಾಗಬೇಕು, ಪೊಲೀಸ್ ಇಲಾಖೆ ತಕ್ಷಣ ಆರೋಪಿಗಳನ್ನು ಬಂಧಿಸಬೇಕು. ಧರ್ಮದ ವಿಚಾರದಲ್ಲಿ‌ಜನರ ಭಾವನೆ ಕೆರಳಿಸುವ ಯಾರೇ ಆಗಲಿ ಬಂಧಿಸಿ‌ಮಟ್ಟ ಹಾಕಿ‌ಎಂದು ಸೂಚನೆ ನೀಡಿದರು.

ಈ‌ಸಂಧರ್ಭದಲ್ಲಿ‌ ಒಕ್ಕೂಟದ ಪ್ರಮುಖರಾದ ಮಹಮ್ಮದ್ ಬಡಗನ್ನೂರು, ಮೂಸಾನ್ ಕರ್ನೂರು,ಅಬ್ದುಲ್ ರಹಿಮಾನ್ ಮೇನಾಲ,ಸಿ ಎ ಅಬೂಬಕ್ಕರ್,ಇಬ್ರಾಹಿಂ ,ಕೆ ಎಂ ಮಹಮ್ಮದ್, ಮಹಮ್ಮದ್‌ಕುಂಞಿ‌ಮೊದಲಾದವರು ಉಪಸ್ಥಿತರಿದ್ದರು


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…