ಕರಾವಳಿ

ಎಚ್.ಪಿ.ಸಿ.ಎಲ್. ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಎಂ.ಜಿ. ಕೊಚ್ಚಿಗೆ ವರ್ಗಾವಣೆ: ಬೀಳ್ಕೊಡುಗೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (HPCL) ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಎಂ.ಜಿ ಕೊಚ್ಚಿಗೆ ವರ್ಗಾವಣೆಗೊಂಡಿದ್ದು, ಏ. 9ರಂದು ಎಕ್ಕೂರಿನ ಎ.ಜೆ. ಎಲೈಟ್ ಹೋಟೆಲ್ ನಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು.

chennai-shopping
maithri

ಅವರು ಕಳೆದ ನಾಲ್ಕು ವರ್ಷಗಳಿಂದ ಮೈಸೂರು, ಕೊಡಗು, ದಕ್ಷಿಣ ಕನ್ನಡ, ಹಾಸನ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳನ್ನೊಳಗೊಂಡ ಮಂಗಳೂರು ಪ್ರಾದೇಶಿಕ ವಿಭಾಗದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿದ್ದರು.

ಕಾರ್ಯಕ್ರಮದಲ್ಲಿ HPCL MACO ಸೊಸೈಟಿ ಪೆಟ್ರೋಲ್ ಪಂಪ್‌ನ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ನವೀನ್ ಕುಮಾರ್ ಅವರ ಸೇವೆಯನ್ನು ಶ್ಲಾಘಿಸಿದರು.

HPCL ಮಂಗಳೂರು ಟರ್ಮಿನಲ್‌ನ ಡಿಜಿಎಂ ಅನಿಲ್ ಕೌಶಿಕ್, ಮಂಗಳೂರು ಸೇಲ್ಸ್ ಅಧಿಕಾರಿ ಇಶಿತಾ ಗರ್ಗ್, ಉಡುಪಿ ಸೇಲ್ಸ್ ಅಧಿಕಾರಿ ಅನುಷ್ ಲಾಲ್, ಪ್ಲಾನಿಂಗ್ ಮ್ಯಾನೇಜರ್ ರಾಜೇಂದ್ರ, MIS ಮ್ಯಾನೇಜರ್ ದಿನೇಶ್ ಬಂಗೇರ ಉಪಸ್ಥಿತರಿದ್ದರು.

ನಿವೃತ್ತ HPCL ಅಧಿಕಾರಿಗಳಾದ ವಸಂತ ರೈ ಮತ್ತು ಪ್ರಕಾಶ್ ಪುತ್ತೂರು, ನಿರಂಜನ್ ಕಾಮತ್, ಲವ ನಾಯಕ್, ರಾಘವೇಂದ್ರ ಪ್ರಭು, ನಂದಕುಮಾರ್ ಕುಡ್ವ, ವಿಜಯ್ ಕುಮಾರ್, ಡಾ. ಶಾಂತಿಪ್ರಸಾದ್, ಚಂದ್ರಶೇಖರ್ ತಾಳ್ತಾಜೆ, ಮುರಳೀಕೃಷ್ಣ ಹಸಂತ್ತಡ್ಕ, ಲುಶಿಂಗ್ಟನ್, ಧೀರಜ್ ಕೊಳಕ್ಕೆಮಾರ್, ರವಿ ಶೃಂಗೇರಿ, ವೈ. ಕೃಷ್ಣ, ರಾಘವೇಂದ್ರ ಕೊಟ್ಟಿಗೆಹಾರ ಮೊದಲಾದವರು ಭಾಗವಹಿಸಿದ್ದರು.

ಅಖಿಲ ಭಾರತ ಪೆಟ್ರೋಲಿಯಂ ಒಕ್ಕೂಟದ ಕಾರ್ಯದರ್ಶಿ ವಿಶ್ವಾಸ್ ಶೆಣೈ, ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಪೆಟ್ರೋಲಿಯಂ ಸಂಘದ ಮಾಜಿ ಅಧ್ಯಕ್ಷ ಸತೀಶ್ ಕಾಮತ್, ಮಾಜಿ ಕಾರ್ಯದರ್ಶಿ ಸುಧೀರ್ ಭಟ್, ಪ್ರಸ್ತುತ ಖಜಾಂಚಿ ಪ್ರಕಾಶ್ ಶೆಣೈ, ರಾಜ್ಯ ಪೆಟ್ರೋಲಿಯಂ ಒಕ್ಕೂಟದ ಮುರಳೀಧರ ಪ್ರಭು, ಮಾಜಿ ಡೀಲರ್ ಪದ್ಮನಾಭ ಪೈ ಹಾಗೂ ಇತರ ಡೀಲರ್‌ಗಳು ಸೇರಿ ನವೀನ್ ಕುಮಾರ್ ಗೌರವ ಸಲ್ಲಿಸಿದರು.

ಚಿಕ್ಕಮಗಳೂರು, ಕಡೂರು, ಶ್ರೀಂಗೇರಿ ಹಾಗೂ ಮಲೆನಾಡು ಪರಿಸರದ ಅನೇಕ ಡೀಲರ್‌ಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts