ಪುತ್ತೂರು: ತಮ್ಮ ವಾಸದ ಮನೆಯನ್ನು ಧ್ವಂಸಗೊಳಿಸಿದ ಅಧಿಕಾರಿಗಳ ನಡೆ ಖಂಡಿಸಿ ವೃದ್ಧ ದಂಪತಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ ರಾತ್ರಿ 2ನೇ ದಿನಕ್ಕೆ ಕಾಲಿಟ್ಟಿದೆ.
ಮಂಗಳವಾರ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಪ್ರತಿಭಟನೆ ನಿರತ ಪುತ್ತೂರು ತಾಲೂಕು ಆಡಳಿತ ಸೌಧ ಮುಂಭಾಗಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದ್ದಾರೆ. ಸಹಾಯಕ ಆಯುಕ್ತೆ ತಮ್ಮ ಕಚೇರಿಗೆ ಓರ್ವರನ್ನು ಕರೆಸಿಕೊಂಡು, ಒಂದು ತಿಂಗಳ ಕಾಲಾವಕಾಶ ಕೇಳಿ, ಪ್ರತಿಭಟನೆ ಹಿಂದೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
ಇದಾವುದಕ್ಕೂ ಜಗ್ಗದ ವೃದ್ಧ ದಂಪತಿ ನ್ಯಾಯ ಸಿಗುವವರೆಗೆ ಅಹೋರಾತ್ರಿ ಧರಣಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.


























