ಉಪ್ಪಿನಂಗಡಿ: ರಾಮನಗರ ಮೇಘಾಸ್ ಕಿಡ್ಸ್ ವರ್ಲ್ಡ್ ಹಾಗೂ ಜ್ಞಾನ ಬೆಳಕು ಚಾರಿಟೇಬಲ್ ಟ್ರಸ್ಟ್ ಸಹಕಾರದಲ್ಲಿ ಸೆ. 5ರವರೆಗೆ ನಡೆಯುವ ಕಲಿಯುತ್ತಾ ನಲಿ ಮಕ್ಕಳ ಮೋಜಿನ ಶಿಬಿರದ ಉದ್ಘಾಟನೆ ಸೆ. 2ರಂದು ನಡೆಯಿತು.
ಪಡಿ ಸಂಸ್ಥೆಯ ಕೋಆರ್ಡಿನೇಟರ್ ವಿಜಯ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ, ಶುಭಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ರಾಕೇಶ್ ಆಚಾರ್ಯ ರಂಗಾಯಣ ಅವರು ಮಕ್ಕಳಲ್ಲಿ ನಗು ತುಂಬುವಂತೆ ಹಾಗೂ ಮಕ್ಕಳ ಕ್ರಿಯಾಶೀಲತೆಗೆ ಉತ್ತೇಜನ ನೀಡುವಂತಹ ಚಟುವಟಿಕೆಯನ್ನು ನಡೆಸಿಕೊಟ್ಟರು. ರಂಗಭೂಮಿಯಲ್ಲಿ ಮಕ್ಕಳ ತೊಡಗಿಸಿಕೊಳ್ಳುವಿಕೆಯ ಬಗ್ಗೆಯೂ ಮಾಹಿತಿ ನೀಡಿದರು.
ಮಕ್ಕಳಿಗೆ ಸಿಹಿ ತಿಂಡಿ ನೀಡುವ ಮೂಲಕ ಶಿಬಿರಕ್ಕೆ ಸ್ವಾಗತಿಸಲಾಯಿತು. ಮೇಘ ಆಚಾರ್ಯ, ನಳಿನಿ ಕಾರ್ಯಕ್ರಮ ನಿರೂಪಿಸಿದರು.
30 ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದರು. ಶಿಬಿರದಲ್ಲಿ ವಿಶೇಷ ವ್ಯಕ್ತಿಗಳು ಹಾಗೂ ಸಿನಿಮಾ ನಟರು ಭಾಗವಹಿಸಿ, ಶಿಬಿರದ ಆಕರ್ಷಣೆ ಹೆಚ್ಚಿಸಲಿದ್ದಾರೆ.