Gl
ಕರಾವಳಿ

ಮಂಗಳೂರು- ಸುಬ್ರಹ್ಮಣ್ಯ ವಿದ್ಯುತ್ ಚಾಲಿತ ಪ್ಯಾಸೆಂಜ‌ರ್ ರೈಲು ಸಂಚಾರ ಸೆ.15ರಿಂದ!!

GL

ಈ ಸುದ್ದಿಯನ್ನು ಶೇರ್ ಮಾಡಿ

ಕಾಣಿಯೂರು: ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳ ನಡುವಿನ ಹಳಿ ವಿದ್ಯುದೀಕರಣ ಯೋಜನೆ ಪೂರ್ಣಗೊಂಡಿದ್ದು, ಸೆ.15ರಿಂದ ರೈಲುಗಳು ವಿದ್ಯುತ್ ಚಾಲಿತ ಎಂಜಿನ್ ಮೂಲಕ ಸಂಚರಿಸಲಿವೆ.

ಮುಂಜಾನೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಸುಬ್ರಹ್ಮಣ್ಯ ರೋಡ್ ತಲುಪುವ ಪ್ಯಾಸೆಂಜರ್ ರೈಲು ಅಲ್ಲಿಂದ ಮರಳಿ ಮಂಗಳೂರು ತಲುಪುತ್ತಿದೆ. ಇದೇ ರೈಲು ಸಂಜೆಯೂ ಇದೇ ರೀತಿ ಮಂಗಳೂರಿನಿಂದ ಸುಬ್ರಹ್ಮಣ್ಯ ರೋಡ್ ನಿಲ್ದಾಣಕ್ಕೆ ಬಂದು ರಾತ್ರಿ ಮಂಗಳೂರಿಗೆ ನಿರ್ಗಮಿಸುತ್ತದೆ.

ಇವೆರಡು ಸೇವೆಗಳಲ್ಲದೆ ಮಧ್ಯಾಹ್ನವೂ ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು ಸೇವೆಯಿದೆ. ಈ ಮೂರು ಸಮಯದ ರೈಲುಗಳು ಸೆ.15ರಿಂದ ವಿದ್ಯುತ್ ಚಾಲಿತ ಎಂಜಿನ್ ಮೂಲಕ ಸಂಚರಿಸಲಿವೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ರೈಲ್ವೆ ಇಲಾಖೆ ಮಾಡಿಕೊಂಡಿದೆ. ರೈಲು ಹಳಿಗಳ ಮೇಲ್ಬಾಗದಲ್ಲಿ ವಿದ್ಯುತ್‌ ತಂತಿಗಳನ್ನು ಜೋಡಿಸಲಾಗಿದ್ದು, ಇದಕ್ಕೆ ಎಂಜಿನ್ ಜತೆ ಸಂಪರ್ಕ ಕಲ್ಪಿಸಲಾಗುತ್ತದೆ. ಸೆ.10ರಂದು ವಿದ್ಯುತ್ ಚಾಲಿತ ಎಂಜಿನ್ ಮಂಗಳೂರು- ಸುಬ್ರಹ್ಮಣ್ಯ ರೋಡ್ ನಡುವೆ ಯಶಸ್ವಿ ಸಂಚಾರ ನಡೆಸಿತು. ಕಳೆದ ಜೂನ್‌ನಿಂದ ಸುಬ್ರಹ್ಮಣ್ಯ ರೋಡ್-ಎಡಕುಮೇರಿ- ಹಾಸನ ನಡುವಿನ ಹಳಿ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ಣಗೊಂಡ ಬಳಿಕ ಮಂಗಳೂರು-ಬೆಂಗಳೂರು ರೈಲುಗಳು ಕೂಡಾ ವಿದ್ಯುತ್ ಚಾಲಿತಗೊಳ್ಳಲಿವೆ. ಭವಿಷ್ಯದಲ್ಲಿ ಮಂಗಳೂರು- ಬೆಂಗಳೂರು ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭಗೊಳ್ಳಲು ಇದು ಅವಕಾಶ ಮಾಡಿಕೊಡಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts