ಪುತ್ತೂರು: ಧರ್ಮಸ್ಥಳದ ವಿಚಾರದಲ್ಲಿ ಜನಾರ್ದನ ಪೂಜಾರಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ್ದ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ ಅವರು ವಿಶ್ವಗುರು ನಾರಾಯಣ ಗುರು ಅವರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್ ಆಪಾದಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿವಾದಕ್ಕೆ ನಾರಾಯಣ ಗುರುಗಳನ್ನು ಎಳೆದು ತರುವ ಅಗತ್ಯ ಇರಲಿಲ್ಲ. ವಿಶ್ವ ಗುರು, ಮೊದಲ ಬಾರಿಗೆ ವಿಶ್ವಧರ್ಮ ಸಮ್ಮೇಳನ ನಡೆಸಿದ್ದ ನಾರಾಯಣ ಗುರುಗಳನ್ನು ಅವಮಾನಿಸಿದ್ದ ಮಹಮ್ಮದಾಲಿ ಯಾರು? ಇದು ಷಡ್ಯಂತ್ರದ ಒಂದು ಭಾಗ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಅಲಿಗೇನು ಗೊತ್ತು ಆಲದ ಮರದ ಆಳ – ಅಗಲ. ಮಹಮ್ಮದಾಲಿ ಅವರನ್ನು ಪಕ್ಷ ಎಲ್ಲಿಟ್ಟಿದೆ ಎನ್ನುವುದು ನಮಗೆ ತಿಳಿದಿದೆ. ಅಧಿಕಾರ ಇರುವಾಗ ಜನಾರ್ದನ ಪೂಜಾರಿ ಅವರ ಕಾಲು ಹಿಡಿದಿದ್ದ ಆಲಿ ಅವರು, ಇದೀಗ ದೂರುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾ ಶಿವಕುಮಾರ್, ಪುರುಷೋತ್ತಮ್ ಮುಂಗ್ಲಿಮನೆ, ಸುಂದರ್ ಪೂಜಾರಿ ಬಡಾವು, ನಿರಂಜನ್ ಉಪಸ್ಥಿತರಿದ್ದರು.