ಪುತ್ತೂರು: ಸಂತ್ರಸ್ತೆಗೆ ಹೆಣ್ಣು ಮಗುವಿಗೆ ಗಂಡ ಬೇಕು. ಹುಟ್ಟಿದ ಗಂಡು ಮಗುವಿಗೆ ತಂದೆ ಬೇಕು. ಇಂತಹ ಸಂದರ್ಭದಲ್ಲಿ ತಪ್ಪು ಯಾರದ್ದು ಎಂದು ಹುಡುಕುವುದಕ್ಕಿಂತ, ಎರಡು ಮನಸ್ಸುಗಳನ್ನು ಒಂದು ಮಾಡುವ ಕೆಲಸ ಆಗಬೇಕಿದೆ. ಈ ಸಂದರ್ಭದಲ್ಲಿ ಜಾತಿ, ಆಚಾರ – ವಿಚಾರಕ್ಕಿಂತಲೂ ಮಾನವೀಯತೆ ಮುಖ್ಯ ಎಂದು ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.
ಮದುವೆಯ ಆಮಿಷಕ್ಕೆ ಒಳಗಾಗಿ ಮಗುವಿನ ಜನ್ಮವಿತ್ತ ಸಂತ್ರಸ್ತ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡುವ ಮೊದಲು ಬೊಳುವಾರು ವಿಶ್ವಕರ್ಮ ಸಮುದಾಯ ಭವನದಲ್ಲಿ ಮಾತನಾಡಿದರು.
ನ್ಯಾಯಾಂಗ ವ್ಯವಸ್ಥೆ ಹೆಣ್ಣು ಮಕ್ಕಳನ್ನು ಕೈ ಬಿಟ್ಟ ಉದಾಹರಣೆ ಭಾರತದ ಇತಿಹಾಸದಲ್ಲಿ ಇಲ್ಲ. ಹಾಗಾಗಿ ವಿಶ್ವಕರ್ಮ ಸಮಾಜದ ಬಂಧುವಿನ ಪರವಾಗಿ ಯಾವುದೇ ಹಂತಕ್ಕೂ ಹೋದರೂ ಕೂಡ ಇಡಿ ವಿಶ್ವಕರ್ಮ ಸಮಾಜ ಸಂತ್ರಸ್ತೆಯ ಮತ್ತು ಕುಟುಂಬದ ಬೆನ್ನ ಹಿಂದೆ ನಿಲ್ಲಬೇಕು ಎಂದರು.
ಇಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬ ತೀರ್ಮಾನ ಬೇಡ. ಹೆಣ್ಣು ಮಗುವಿಗೆ ಜೀವನ ಬೇಕು. ಆಕೆಗೆ ಗಂಡ ಬೇಕು. ಹುಟ್ಟಿದ ಗಂಡು ಮಗುವಿಗೆ ಅಪ್ಪ ಬೇಕು. ಇದನ್ನು ಜೋಡಿಸುವ ಕೆಲಸ ನಾವು ಮಾಡಬೇಕು. ಕೆಲವೊಮ್ಮೆ ಎಲ್ಲವನ್ನು ಮೀರಿ ಇಂತಹ ಸನ್ನಿವೇಶ ಎದುರಾಗುತ್ತದೆ. ಆಗ ಮಾನವಿಯತೆ ಮುಖ್ಯ. ಜಾತಿ, ಆಚಾರ – ವಿಚಾರಗಳಲ್ಲ. ಸಮಾಜದಲ್ಲಿ ಇಂತಹ ಘಟನೆ ನಡೆದಾಗ ಒಗ್ಗಟ್ಟಾಗಬೇಕು. ಇವತ್ತು ಆ ಮನೆಗೆ ಕಷ್ಟ ಇರಬಹುದು. ಆದರೆ ಸಮಾಜಕ್ಕಿಲ್ಲ. ಯಾವುದೆ ಕಾರಣಕ್ಕೂ ಆ ಹೆಣ್ಣು ಮಗುವಿಗೆ ಭವಿಷ್ಯದಲ್ಲಿ ಕಷ್ಟ ಅನ್ನುವುದಕ್ಕೆ ಈ ಸಮಾಜ ಬಿಡುವುದಿಲ್ಲ. ಅದು ಎಂತಹ ಸನ್ನಿವೇಶ ಬಂದರೂ ಸರಿ ನೀವೆಲ್ಲ ಆ ಮನೆಗೆ ಬೆನ್ನೆಲುಬಾಗಿ ನಿಂತಿದ್ದೀರಿ. ರಕ್ಷಣೆ ಮಾಡಿದ್ದೀರಿ ಎಂದರು.
ಈಗ ಕಾನೂನು ವ್ಯಾಪ್ತಿಯಲ್ಲಿ ಈ ವಿಷಯ ಸೇರಿದೆ. ಹಾಗಾಗಿ ನಾವು ಕಾನೂನು ಮೂಲಕ ಹೋರಾಟ ಮಾಡಬೇಕು. ಕಾನೂನು ಮೂಲಕವೆ ನಮಗೆ ನ್ಯಾಯ ಸಿಗಬೇಕು. ಕೋರ್ಟು ನಮ್ಮನ್ನು ಕೈ ಬಿಡುವುದಿಲ್ಲ. ನ್ಯಾಯಾಂಗ ವ್ಯವಸ್ಥೆ ಹೆಣ್ಣು ಮಕ್ಕಳನ್ನು ಕೈ ಬಿಟ್ಟ ಉದಾಹರಣೆ ಭಾರತದ ಇತಿಹಾಸದಲ್ಲಿ ಇಲ್ಲ. ಈ ಕುರಿತು ಎನು ಘಟನೆ ನಡೆದಿಯೋ ಅದನ್ನು ಆ ಹುಡುಗನ ತಂದೆ ತಾಯಿಗೆ ಮನವರಿಕೆ ಮಾಡಿಸೋಣ. ಹುಡುಗನಿಗೆ ಶಿಕ್ಷೆ ಆಗಬೇಕೆಂಬುದು ನಮ್ಮ ದೈಯ ಅಲ್ಲ. ನಡೆದಿರುವ ಘಟನೆಗೆ ಇಬ್ಬರು ಕಾರಣರಾಗಿರುವುದರಿಂದ ಹುಟ್ಡಿದ ಮಗು ಬಲಿಯಾಗಬಾರದು. ಈ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಾಗಿ ಆ ಕುಟುಂಬದ ಬೆನ್ನಹಿಂದೆ ನಿಲ್ಲೋಣ. ಇದು ಯಾವುದೇ ಹಂತಕ್ಕೂ ಹೋದರೂ ಕೂಡ ಇಡಿ ವಿಶ್ವಕರ್ಮ ಸಮಾಜ ಸಂತ್ರಸ್ತೆಯ ಮತ್ತು ಕುಟುಂಬದ ಬೆನ್ನ ಹಿಂದೆ ನಿಲ್ಲಬೇಕೆಂದರು.
ಅವರಿಗೆ ಕಾನೂನು ಪ್ರಕಾರ ಎನೆಲ್ಲ ಬೇಕೊ ಅದಕ್ಕೆ ನಾನು ನಿಮ್ಮ ಜೊತೆ ಇದ್ದೆನೆ. ನೀವು ಎಲ್ಲಿ ಕರೆದರೂ ಬರುತ್ತೇನೆ. ನೀವು ಹಾಕಿಕೊಳ್ಳುವ ಎಲ್ಲಾ ಯೋಜನೆಯಲ್ಲಿ ನಾನು ನಿಮ್ಮ ಜೊತೆ ಇದ್ದೇನೆ ಎಂದರು.
ವಿಶ್ವಕರ್ಮ ಸಮುದಾಯ ಸಂಘದ ವಿವಿಧ ಸಂಘಟನೆಗಳ ಪರವಾಗಿ ವಿಶ್ವಕರ್ಮ ಮಹಾಸಭಾದ ರಾಜ್ಯ ಅಧ್ಯಕ್ಷ ಕೆ ಪಿ ನಂಜುಂಡಿ ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು.
ವಿಶ್ವಕರ್ಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಮೈಸೂರು ವಿಶ್ವಕರ್ಮ ಜಿಲ್ಲಾ ಸಂಘದ ಅಧ್ಯಕ್ಷ ರಿಷಿ ಆಚಾರ್ಯ, ಪುತ್ತೂರು ಮಾಜಿ ಪುರಸಭೆ ಸದಸ್ಯ ಸುರೇಂದ್ರ ಆಚಾರ್ಯ, ಕರ್ನಾಟಕ ರಾಜ್ಯ ಸಂಘದ ಅಧ್ಯಕ್ಷ ಮದ್ದೂರು ಬಸವರಾಜ್, ಮಂಡ್ಯದ ಸೇವಂತ್ ಆಚಾರ್ಯ, ದಕ್ಷಿಣ ಕನ್ನಡ ವಿಶ್ವಕರ್ಮ ಹಿತರಕ್ಷಣಾ ಸಂಘದ ಸುರೆಂದ್ರ ಆಚಾರ್ಯ, ಯುವ ಸಮಾಜ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಇಂದಿರಾ ಪಿ ಆಚಾರ್ಯ, ಶ್ರಿ ಗುರುದೇವಾ ಪರಿಷತ್ ಅದ್ಯಕ್ಷ ಪುರುಷೋತ್ತಮ ಆಚಾರ್ಯ, ಯುವ ಮಿಲನ ಕಾರ್ಯದರ್ಶಿ ದಿವಾಕರ ಆಚಾರ್ಯ, ಬೀರಮಲೆ ವಿಶ್ವಕರ್ಮ ಸಂಘದ ಅಧ್ಯಕ್ಷ ಗಂಗಾದರ ಆಚಾರ್ಯ, ಬೀರಮಲೆ ಯುವಕ ಸಂಘದ ಅಧ್ಯಕ್ಷ ಜ್ಞಾನೇಶ್ , ಉಪ್ಪಿನಂಗಡಿ ಸಹಿತ ಹಲವು ಉಪ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಶ್ವಬ್ರಾಹ್ಮಣ ಸೇವಾ ಸಮಾಜದ ಅಧ್ಯಕ್ಷ ಶ್ರೀಧರ್ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.