Gl harusha
ಕರಾವಳಿ

ಚಿಣ್ಣರ ಪಾರ್ಕ್’ನಲ್ಲಿ ಚಂದ್ರಮಂಡಲ ಚರಿತೆ ಯಕ್ಷಗಾನ | ಕರಾವಳಿಯ ಗಂಡು ಕಲೆಗೆ ಹೆಜ್ಜೆ ಹಾಕಿದ ತುಮಕೂರಿನ ಕಲಾವಿದರು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದ್ವಾರಕಾ ಪ್ರತಿಷ್ಠಾನ, ತುಮಕೂರು ಯಕ್ಷದೀವಿಗೆ ಪ್ರಸ್ತುತಿಯಲ್ಲಿ ನಾಳೆಗೂ ಉಳಿಯಲಿ ನೆಲ – ಜಲ ಧ್ಯೇಯವಾಕ್ಯದ ಚಂದ್ರಮಂಡಲ ಚರಿತೆ ಯಕ್ಷಗಾನ ಮಾ. 30ರಂದು ಸಂಜೆ ಕಿಲ್ಲೆ ಮೈದಾನ ಬಳಿಯ ಚಿಣ್ಣರ ಪಾರ್ಕಿನಲ್ಲಿ ಪ್ರಸ್ತುತಿಗೊಂಡಿತು.ಪ್ರಾರಂಭದಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು.ವಿನೂತನ ವಿಭಿನ್ನ ಕಥನದ ಚಂದ್ರಮಂಡಲ ಚರಿತೆ ಪ್ರಸಂಗವನ್ನು ಗಣರಾಜ ಕುಂಬ್ಳೆ ರಾಮಕುಂಜ ಬರೆದಿದ್ದು, ಆರತಿ ಪಟ್ರಮೆ ಅವರು ಸಂಯೋಜನೆ, ತರಬೇತಿ ನೀಡಿರುತ್ತಾರೆ.ಈ ಯಕ್ಷಗಾನದ ವಿಶೇಷವೆಂದರೆ, ತುಮಕೂರಿನ ಕಲಾವಿದರು ಹೆಜ್ಜೆ ಹಾಕಿರುವುದು. ಆರತಿ ಪಟ್ರಮೆ ಹಾಗೂ ಸಿಬ್ಬಂಥಿ ಪದ್ಮನಾಭ್ ಅವರ ಮುಂದಾಳುತ್ವದಲ್ಲಿ ತುಮಕೂರಿನಲ್ಲಿ ಯಕ್ಷದೀವಿಗೆ ಎಂಬ ಹೆಸರಿನಲ್ಲಿ ಒಂದಷ್ಟು ಕಲಾವಿದರನ್ನು ಹುಟ್ಟುಹಾಕುವ ಪ್ರಯತ್ನ ನಡೆದಿದೆ. ಯಕ್ಷಗಾನದಲ್ಲಿ ಆಸಕ್ತಿ ಹೊಂದಿರುವ ತುಮಕೂರಿನ ಕಲಾವಿದರಿಗೆ ತರಬೇತಿ ನೀಡಿ, ಅವರನ್ನು ಪುತ್ತೂರಿಗೆ ಕರೆದುಕೊಂಡು ಬಂದು ಯಕ್ಷಗಾನ ಪ್ರದರ್ಶನ ನೀಡಲಾಗಿದೆ. ತುಮಕೂರಿನ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರು ಹೆಜ್ಜೆ ಹಾಕಿದರು. ಶನಿವಾರ ಸುಳ್ಯದಲ್ಲಿ ಇದೇ ಪ್ರಸಂಗ ಪ್ರಸ್ತುತಿಗೊಂಡಿತ್ತು.ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಳಕೆ:ಕಳೆದ ಹಲವು ವರ್ಷಗಳಿಂದ ಸುಧಾರಿಕೆಯ ಕನಸು ಕಾಣುತ್ತಿದ್ದ ಚಿಣ್ಣರ ಪಾರ್ಕ್ ಇದೀಗ ದ್ವಾರಕಾ ಪ್ರತಿಷ್ಠಾನದ ನಿರ್ವಹಣೆಗೊಳಪಟ್ಟಿದೆ. ದ್ವಾರಕಾ ಪ್ರತಿಷ್ಠಾನದ ವತಿಯಿಂದ ಚಿಣ್ಣರ ಪಾರ್ಕಿನಲ್ಲಿ ಮೊದಲ ಕಾರ್ಯಕ್ರಮವಾಗಿ ಚಂದ್ರಮಂಡಲ ಚರಿತೆ ಯಕ್ಷಗಾನ ಪ್ರಸ್ತುತಿಗೊಂಡಿದೆ. ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇಂಗಿತ ಹೊಂದಿದ್ದು, ಸಾರ್ವಜನಿಕರು ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಈ ವೇದಿಕೆಯನ್ನು ಬಳಸಿಕೊಳ್ಳಬಹುದು ಎಂದು ಹೇಳಲಾಗಿದೆ.

srk ladders
Pashupathi
Muliya

ಈ ಸುದ್ದಿಯನ್ನು ಶೇರ್ ಮಾಡಿ

Related Posts